ಪ್ರಧಾನಿ ಮೋದಿ ಈದ್ ಶುಭಾಶಯ: ಶಾಂತಿ, ಸಾಮರಸ್ಯದ ಹಾರೈಕೆ
Team Udayavani, Jun 26, 2017, 10:23 AM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ ಈದ್ ಉಲ್ ಫಿತ್‌ರ್ ಸಂದರ್ಭದಲ್ಲಿ ದೇಶದ ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಈದ್ ಮೂಲಕ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಭ್ರಾತೃತ್ವ ನೆಲೆಗೊಳ್ಳಲಿ ಎಂದವರು ಹಾರೈಸಿದ್ದಾರೆ.
ಉಪವಾಸ ವ್ರತದ ಪವಿತ್ರ ರಮ್ಜಾನ್ ತಿಂಗಳು ಈದ್ ಉಲ್ ಫಿತರ್ ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ. ಮೋದಿ ಅವರು ಟ್ವೀಟ್ ಮಾಡಿ “ಈದ್ ಉಲ್ ಫಿತರ್ ಶುಭಾಶಯಗಳು ; ಈದ್ ಸ್ಫೂರ್ತಿಯಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಭ್ರಾತೃತ್ವ ನೆಲೆಗೊಳ್ಳಲಿ’ ಎಂದು ಹಾರೈಸಿದರು.
ವೈವಿಧ್ಯತೆಯೇ ಭಾರತದ ಶಕ್ತಿ ಎಂಬ ಮಾತಿಗೆ ಒತ್ತು ನೀಡಿರುವ ಮೋದಿ “ಪವತ್ರಿ ರಮ್ಜಾನ್ ತಿಂಗಲನ್ನು ಶ್ರದ್ಧಾ ಭಕ್ತಿ ಭಾವಗಳಿಂದ ಆಚರಿಸಲಾಗಿದ್ದು ಈಗ ಈದ್ ಆಚರಣೆ ಸಂದರ್ಭ ಒದಗಿದೆ. ಈದ್ ಉಲ್ ಫಿತ್‌ರ್ ಸಂದರ್ಭದಲಿಲ ಎಲ್ಲರಿಗೂ ಶುಭಾಶಯಗಳು’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.