Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ
ಕೇವಲ ದ್ರವ ಆಹಾರ ಮಾತ್ರ...ವ್ಯಾಪಕ ಕಟ್ಟೆಚ್ಚರ
Team Udayavani, May 30, 2024, 9:57 PM IST
ಕನ್ಯಾಕುಮಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಐತಿಹಾಸಿಕ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ್ದಾರೆ.
ಭಾರತದ ದಕ್ಷಿಣದ ತುದಿಯಲ್ಲಿ ಪ್ರಧಾನಿ ಮೋದಿಯವರ ಧ್ಯಾನವು ಗುರುವಾರ ಸಂಜೆ 6.45 ರ ಸುಮಾರಿಗೆ ಪ್ರಾರಂಭವಾಯಿತು. ಧ್ಯಾನದ ಅವಧಿಯಲ್ಲಿ, ಪ್ರಧಾನಮಂತ್ರಿ ಅವರು ಕೇವಲ ದ್ರವ ಆಹಾರ ಮಾತ್ರ ಸೇವಿಸುತ್ತಾರೆ. ಎಳನೀರು, ದ್ರಾಕ್ಷಿ ರಸ ಮತ್ತು ಇತರ ದ್ರವಗಳನ್ನು ಸೇವಿಸುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಧಾನಮಂತ್ರಿಯವರುಧ್ಯಾನದ ಅವಧಿಯಲ್ಲಿ ಮೌನವಾಗಿದ್ದು ಧ್ಯಾನ ಮಂದಿರದಿಂದ ಹೊರಗೆ ಬರುವುದಿಲ್ಲ. ಲೋಕಸಭಾ ಚುನಾವಣೆಯ ಎಡೆಬಿಡದ ಪ್ರಚಾರ ಅಂತ್ಯವಾದ ಬಳಿಕ ಪ್ರಧಾನಿ ಮೋದಿ ಅವರು ಆಧ್ಯಾತ್ಮಿಕ ಧ್ಯಾನ ನಡೆಸುತ್ತಿದ್ದಾರೆ.
131 ವರ್ಷಗಳ ಹಿಂದೆ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿ ಅವರು 45 ಗಂಟೆಗಳ ಕಾಲ ಧ್ಯಾನ ಮಾಡುತ್ತಿರುವುದು ವಿಶೇಷವಾಗಿದೆ. ಪ್ರಧಾನಿ ಇರುವ ಸ್ಥಳದ ಸುತ್ತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಕಪ್ಪು ಬಾವುಟ
ನರೇಂದ್ರ ಮೋದಿಯವರ ಕನ್ಯಾಕುಮಾರಿ ಭೇಟಿಯನ್ನು ವಿರೋಧಿಸಿ ತಿರುನಲ್ವೇಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶಂಕರಪಾಂಡಿಯನ್ ಅವರು ಗುರುವಾರ ತಿರುನಲ್ವೇಲಿಯ ಕೊಕ್ಕಿರಕುಲಂನಲ್ಲಿರುವ ಪಕ್ಷದ ಕಚೇರಿಯ ಮೇಲೆ ಕಾರ್ಯಕರ್ತರೊಂದಿಗೆ ಕಪ್ಪು ಬಾವುಟಗಳನ್ನು ಹಾರಿಸಿ ಆಕ್ರೋಶ ಹೊರ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.