PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
Team Udayavani, Jan 11, 2025, 6:50 AM IST
ನವದೆಹಲಿ: ಇನ್ನು ಮುಂದೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ ಲಾಭ ಪಡೆಯಲು ಬಯಸುವ ಹೊಸ ಅರ್ಜಿದಾರರು “ರೈತ ಗುರುತಿನ ಚೀಟಿ’ಯನ್ನು ಹೊಂದುವುದು ಕಡ್ಡಾಯ!
ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.ರೈತರ ಗುರುತಿನ ಚೀಟಿಯು ಅರ್ಜಿದಾರ ಕೃಷಿ ಭೂಮಿ ಹೊಂದಿರುವುದನ್ನು ದೃಢಪಡಿಸುವ ಕಾರಣ, ನೋಂದಣಿ ಪ್ರಕ್ರಿಯೆಯೂ ಸುಲಭವಾಗುತ್ತದೆ. ಹೀಗಾಗಿ, ಎಲ್ಲ ಹೊಸ ಅರ್ಜಿದಾರರೂ “ಫಾರ್ಮರ್ಸ್ ರಿಜಿಸ್ಟ್ರಿ’ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಜ.1ರಿಂದಲೇ 10 ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಉಳಿದ ರಾಜ್ಯಗಳಲ್ಲೂ ಇದು ಜಾರಿಯಾಗಲಿವೆ ಎನ್ನಲಾಗಿದೆ.
ಏನಿದು ರೈತ ಚೀಟಿ?
ಕಿಸಾನ್ ಪೆಹಚಾನ್ ಪತ್ರ ಅಥವಾ ರೈತ ಗುರುತಿನ ಚೀಟಿಎನ್ನುವುದು ರಾಜ್ಯಗಳ ಭೂ ದಾಖಲೆಗಳೊಂದಿಗೆ ಲಿಂಕ್ ಆಗಿರುವ ಆಧಾರ್ ರೀತಿಯ ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆಯಾಗಿದೆ. ಇದರಲ್ಲಿ ರೈತನ ಹೆಸರು, ಭೂಮಿಯ ಮಾಹಿತಿ, ಆ ಭೂಮಿಯಲ್ಲಿ ಬೆಳೆಯಲಾಗುತ್ತಿರುವ ಬೆಳೆ ಮತ್ತಿತರ ವಿವರಗಳನ್ನು ಇರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.