ಮೋದಿ ಟ್ವೀಟ್‌ಗೆ ಚಿನ್ನದ ಗರಿ
ಭಾರತದ ಈ ವರ್ಷದ "ಗೋಲ್ಡನ್ ಟ್ವೀಟ್' ಎಂಬ ಬಿರುದು
Team Udayavani, Dec 11, 2019, 6:00 AM IST
ಹೊಸದಿಲ್ಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಟ್ವೀಟ್ “ಭಾರತದ 2019ರ ಚಿನ್ನದ ಟ್ವೀಟ್'(ಗೋಲ್ಡನ್ ಟ್ವೀಟ್ ಆಫ್ 2019) ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಸ್ವತಃ ಟ್ವಿಟರ್ ಸಂಸ್ಥೆಯೇ ಮಂಗಳವಾರ ಈ ಘೋಷಣೆ ಮಾಡಿದೆ. ಫಲಿತಾಂಶ ಪ್ರಕಟವಾಗಿ ಬಿಜೆಪಿ ಜಯಭೇರಿ ಬಾರಿಸಿದೆ ಎಂಬ ಸುದ್ದಿ ಬಹಿರಂಗವಾಗುತ್ತಲೇ ಪ್ರಧಾನಿ ಮೋದಿ, “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ವಿಜಯೀ ಭಾರತ್’ ಎಂದು ಟ್ವೀಟ್ ಮಾಡಿದ್ದರು. ದೇಶಾದ್ಯಂತ ಭಾರೀ ಜನಪ್ರಿಯತೆ ತಂದುಕೊಟ್ಟಿದ್ದ ಈ ಟ್ವೀಟ್‌ಗೆ ಆ ಸಮಯದಲ್ಲಿ 4.20 ಲಕ್ಷ ಲೈಕ್‌ಗಳು ಹಾಗೂ 1.17 ಲಕ್ಷ ರೀಟ್ವೀಟ್‌ಗಳು ವ್ಯಕ್ತವಾಗಿದ್ದವು. ಅವರು ಮೇ 23ರ ಅಪರಾಹ್ನ 2.42ರ ಸಮಯದಲ್ಲಿ ಟ್ವೀಟ್ ಮಾಡಿದ್ದರು.
ಬಿಜೆಪಿ 303 ಲೋಕಸಭಾ ಸ್ಥಾನಗಳೊಂದಿಗೆ ಅಭೂತ ಪೂರ್ವ ಜಯ ಸಾಧಿಸಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು 353 ಸ್ಥಾನಗಳನ್ನು ಗೆದ್ದುಕೊಂಡಿತ್ತು. ದೇಶದ ಬಹು ತೇಕ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್ ಮಾಡಿತ್ತು.
ಕೊಹ್ಲಿ ಟ್ವೀಟ್‌ಗೂ ಸ್ಥಾನ
ಇದೇ ವೇಳೆ, ಮಹೇಂದ್ರ ಸಿಂಗ್ ಧೋನಿ ಅವರ ಜನ್ಮದಿನ ದಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟ್ ಕ್ರೀಡಾ ಜಗತ್ತಿನಲ್ಲಿ ಅತೀ ಹೆಚ್ಚು “ರೀಟ್ವೀಟ್ ಕಂಡ ಟ್ವೀಟ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹ್ಯಾಷ್‌ಟ್ಯಾಗ್‌ನ ವಿಚಾರಕ್ಕೆ ಬಂದರೆ, “ಲೋಕಸಭಾ ಚುನಾವಣೆ 2019′ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಅತೀ ಹೆಚ್ಚು ಟ್ವೀಟ್‌ಗಳು ಅಪ್‌ಲೋಡ್ ಆಗಿವೆ. ಅನಂತರದ ಸ್ಥಾನದಲ್ಲಿ “ಚಂದ್ರಯಾನ 2′, “ಸಿಡಬ್ಲ್ಯೂಸಿ19′, “ಪುಲ್ವಾಮಾ’ ಹಾಗೂ “ಆರ್ಟಿಕಲ್ 370′ ಹ್ಯಾಷ್‌ಟ್ಯಾಗ್‌ಗಳು ಜನಪ್ರಿಯ ವಾಗಿವೆ.
ಯಾವುದು ಆ ಗೋಲ್ಡನ್ ಟ್ವೀಟ್?
ಸಬ್‌ಕಾ ಸಾಥ್+ಸಬ್‌ಕಾ ವಿಕಾಸ್+ಸಬ್‌ಕಾ ವಿಶ್ವಾಸ್= ವಿಜಯೀ ಭಾರತ್. ನಾವೆಲ್ಲರೂ ಒಂದಾಗಿ ಬೆಳೆಯೋಣ, ಒಂದಾಗಿ ಸಮೃದ್ಧಿ ಗಳಿಸೋಣ, ಒಂದಾಗಿ ಬಲಿಷ್ಠ ಮತ್ತು ಎಲ್ಲರನ್ನೊಳಗೊಂಡ ಭಾರತವನ್ನು ನಿರ್ಮಿಸೋಣ. ಭಾರತವು ಮತ್ತೂಮ್ಮೆ ಗೆದ್ದಿದೆ. ವಿಜಯೀ ಭಾರತ್.
ಮೇ 23 ಪೋಸ್ಟ್ ಮಾಡಿದ ದಿನ
4,20,000 ಕೆಲವೇ ಕ್ಷಣ ಗಳಲ್ಲಿ ಸಿಕ್ಕ ಲೈಕ್‌ಗಳು
1,17,100 ರೀಟ್ವೀಟ್ ಆಗಿದ್ದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.