Kharge; ಕೇವಲ ನಾಲ್ಕು ಜನರು ಕೇಂದ್ರ ಸರಕಾರ ನಡೆಸುತ್ತಿದ್ದಾರೆ..
ಮೇಕೆಗಳಂತೆ ಶಾಸಕರ ಖರೀದಿ... .ಆದಿತ್ಯನಾಥ್ ಕುರಿಮರಿಯ ವೇಷದಲ್ಲಿರುವ ತೋಳ!!!
Team Udayavani, Nov 11, 2024, 6:07 PM IST
ರಾಂಚಿ: ಬಿಜೆಪಿಗೆ ಪ್ರತಿಪಕ್ಷಗಳ ಮೇಲೆ ದಬ್ಬಾಳಿಕೆ ಮಾಡಿ, ಚುನಾಯಿತ ಸರ್ಕಾರಗಳನ್ನು ಉರುಳಿಸಿ ಶಾಸಕರನ್ನು ಮೇಕೆಗಳಂತೆ ಖರೀದಿಸುವಲ್ಲಿ ಆಸಕ್ತಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಖರ್ಗೆ ‘ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಸರ್ಕಾರವನ್ನು ಅದಾನಿ ಮತ್ತು ಅಂಬಾನಿ ಜತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
“ನಿಜವಾದ ಯೋಗಿಯು ‘‘batenge toh katenge’’ (ವಿಭಜನೆಯಾದರೆ, ನಾವು ನಾಶವಾಗುತ್ತೇವೆ) ಎಂಬ ಭಾಷೆಯನ್ನು ಬಳಸುವುದಿಲ್ಲ. ಈ ಭಾಷೆಯನ್ನು ಉಗ್ರರು ಬಳಸುತ್ತಾರೆ. ಯೋಗಿ ಮಠದ ಮುಖ್ಯಸ್ಥನಾಗಿ ಕೇಸರಿ ವಸ್ತ್ರ ಧರಿಸುತ್ತಾರೆ.ಆದಿತ್ಯನಾಥ್ ಅವರು ಕುರಿಮರಿಯ ವೇಷದಲ್ಲಿರುವ ತೋಳ’ ಎಂದು ಕಿಡಿ ಕಾರಿದರು.
”ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬನನ್ನು ಸೋನಿಯಾ ಗಾಂಧಿ ಕ್ಷಮಿಸಿದ್ದಾರೆ. ಕೊಲೆ ಮಾಡಿದವಳನ್ನು ಪ್ರಿಯಾಂಕಾ ಗಾಂಧಿ ಅಪ್ಪಿಕೊಂಡರು, ಇದು ಸಹಾನುಭೂತಿ” ಎಂದು ಖರ್ಗೆ ಹೇಳಿದರು.
“ಮೋದಿಗೆ ಸರ್ಕಾರಗಳನ್ನು ಬೀಳಿಸುವುದರಲ್ಲಿ ನಂಬಿಕೆ. ಅವರು ಶಾಸಕರನ್ನು ಖರೀದಿಸುತ್ತಾರೆ. ಶಾಸಕರನ್ನು ಮೇಕೆಗಳಂತೆ ಇಟ್ಟುಕೊಳ್ಳುತ್ತಾರೆ, ಅವರಿಗೆ ಆಹಾರ ನೀಡುತ್ತಾರೆ ಮತ್ತು ನಂತರ ಹಬ್ಬ ಮಾಡುತ್ತಾರೆ’ ಎಂದರು.
ಮೋದಿ ಮತ್ತು ಶಾ ವಿರೋಧ ಪಕ್ಷದ ನಾಯಕರ ವಿರುದ್ಧ ಇಡಿ, ಸಿಬಿಐ ಮತ್ತು ಇತರ ಕೇಂದ್ರೀಯ ಸಂಸ್ಥೆಗಳನ್ನು ಬಿಚ್ಚಿಟ್ಟಿದ್ದಾರೆ ಆದರೆ “ನಾವು ಹೆದರುವುದಿಲ್ಲ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ, ಪ್ರಾಣ ತ್ಯಾಗ ಮಾಡಿದ್ದೇವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಹೋರಾಡುತ್ತಿದ್ದೇವೆ ಎಂದು ಖರ್ಗೆ ಹೇಳಿದ್ದಾರೆ.
“ಮೋದಿ ಅವರು ಜೈವಿಕ ಅಲ್ಲ ಎಂದು ನಂಬುತ್ತಾರೆ. ಅವರು ತಮ್ಮ ಭರವಸೆಗಳನ್ನು ಎಂದಿಗೂ ಈಡೇರಿಸದ ಅಭ್ಯಾಸವುಳ್ಳ ಸುಳ್ಳುಗಾರ. ಗುಜರಾತ್‌ಗೆ ಯಾವಗಲಾದರೂ ಸುವರ್ಣ ಯುಗ ಬಂದಿದೆಯೇ?” ಎಂದು ಖರ್ಗೆ ಪ್ರಶ್ನಿಸಿದರು.
ನಾವು 25 ವರ್ಷಗಳಿಂದ ಸಿಎಂ ಮತ್ತು ಪ್ರಧಾನಿಯಾಗಿ ಮೋದಿಯನ್ನು ಸಹಿಸಿಕೊಂಡು ಬಂದಿದ್ದೇವೆ. ಹಿಂದುಳಿದ ಜನರು ಮತ್ತು ಮಹಿಳೆಯರನ್ನು ಶೋಷಿಸುವವರನ್ನು ಅವರು ಬೆಂಬಲಿಸುತ್ತಾರೆ.ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಲು ಹೆದರುತ್ತಾರೆ, ನಾನು ಅವರಿಗೆ ಅಲ್ಲಿಗೆ ಹೋಗಲು ಧೈರ್ಯ ನೀಡುತ್ತೇನೆ’ ಎಂದು ಖರ್ಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.