ಚುನಾವಣೆಯವರೆಗೆ ಮೋದಿ ಸಿನೆಮಾ ಇಲ್ಲ
Team Udayavani, Apr 11, 2019, 6:00 AM IST
ಹೊಸದಿಲ್ಲಿ /ನಾಗ್ಪುರ: ಪ್ರಧಾನಿ ನರೇಂದ್ರ ಮೋದಿ ಜೀವನ ಚರಿತ್ರೆ ಆಧಾರಿತ ಎಂದು ಹೇಳಲಾಗುವ “ಪಿಎಂ ನರೇಂದ್ರ ಮೋದಿ’ ಬಯೋಪಿಕ್ (ಸಿನೆಮಾ) ಬಿಡುಗಡೆಗೆ ಚುನಾವಣ ಆಯೋಗ ಬುಧವಾರ ತಡೆ ನೀಡಿದೆ. ದೇಶದಲ್ಲಿ ಸದ್ಯ ನಡೆಯುತ್ತಿರುವ ಚುನಾವಣ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಅದರ ಬಿಡುಗಡೆ ಬೇಡ ಎಂದು ಹೇಳಿದೆ. ಈ ನಿಯಮ “ನಮೋ ಟಿವಿ’ಗೂ ಅನ್ವಯವಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಬಯೋಪಿಕ್ ಬಿಡುಗಡೆಯಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲವಾದರೂ ಇತರರಿಗೆ ಸಮಾನ ಅವಕಾಶ ಸಿಗುವುದಿಲ್ಲ. ಹೀಗಾಗಿ ಇಂಥ ಕ್ರಮ ಅಗತ್ಯ ಎಂದು ಆಯೋಗ ತನ್ನ ನಿರ್ಧಾರಕ್ಕೆ ಸ್ಪಷ್ಟನೆ ನೀಡಿದೆ. “ಯಾವುದೇ ಪೋಸ್ಟರ್ ಮತ್ತು ಪ್ರಚಾರದಲ್ಲಿರುವ ಅಂಶಕ್ಕೆ ಮಾನ್ಯತೆ ಸಿಕ್ಕಿದರೂ ನಿಗದಿತ ಅಭ್ಯರ್ಥಿಯ ಬಗ್ಗೆ ವಿವರಣೆ ಹೊಂದಿರುವ ಹಿನ್ನೆಲೆಯಲ್ಲಿ ಅದು ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಪರಿಣಾಮ ಬೀರುತ್ತದೆ’ ಎಂದು ಆಯೋಗ ಹೇಳಿಕೊಂಡಿದೆ. ಸುಪ್ರೀಂಕೋರ್ಟ್ ಮಂಗಳವಾರ ಸಿನೆಮಾ ಬಿಡುಗಡೆಗೆ ಅಡ್ಡಿ ಮಾಡುವುದಿಲ್ಲ ಎಂದು ಹೇಳಿತ್ತು.
ಚುನಾವಣ ಆಯೋಗದ ನಿರ್ಧಾರದ ಹಿನ್ನೆಲೆಯಲ್ಲಿ ಬಯೋಪಿಕ್ನಲ್ಲಿ ಪ್ರಧಾನ ಪಾತ್ರ ವಹಿಸಿರುವ ನಟ ವಿವೇಕ್ ಒಬೆರಾಯ್ ನಾಗ್ಪುರದಲ್ಲಿ ಹೊಸ ಸಿನೆಮಾ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿ ರದ್ದುಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.