ನೀವು ನನಗೆ ಸ್ಫೂರ್ತಿ: ಯೋಧರೊಂದಿಗೆ ಮೋದಿ ದೀಪಾವಳಿ
Team Udayavani, Oct 19, 2017, 3:31 PM IST
ಶ್ರೀನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತೀ ವರ್ಷದಂತೆ ಈ ವರ್ಷವೂ ಯೋಧರ ಜೊತೆ ದೀಪಾವಳಿ ಆಚರಿಸಿದ್ದು,ಈ ಬಾರಿ ಗುರೇಜ್ ಸೆಕ್ಟರ್‌ನಲ್ಲಿ ಸೈನಿಕರೊಂದಿಗೆ ಸಂಭ್ರಮಿಸಿದರು.
ಗುರುವಾರ ಬಂಡಿಪೋರಾ ಜಿಲ್ಲೆಯಲ್ಲಿರುವ ಗುರೇಜ್ ಸೆಕ್ಟರ್‌ನಲ್ಲಿ ಸೇನಾ ಪಡೆಗಳೊಂದಿಗೆ ಸಿಹಿ ಹಂಚಿಕೊಂಡು ಪರಸ್ಪರ ಶುಭಾಶಯ ಕೋರಿದರು.ಈ ವೇಳೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಮೋದಿ ಅವರ ಜೊತೆಗೂಡಿದ್ದರು.
‘ಯೋಧರು ನನ್ನ ಕುಟುಂಬದ ಸದಸ್ಯರು. ಕುಟುಂಬದ ಸದಸ್ಯರೊಂದಿಗೇ ದೀಪಾವಳಿ ಆಚರಿಸಿದಷ್ಟು ಖುಷಿಯಾಗಿದೆ. ನನಗೆ ನೀವೆ ಸ್ಫೂರ್ತಿ. 125 ಕೋಟಿ ಜನರು ಸಂಭ್ರಮದಿಂದ ದೀಪಾವಳಿ ಆಚರಿಸಲು ನಿಮ್ಮ ತ್ಯಾಗ ಅಪಾರವಾಗಿದೆ.ನಿಮ್ಮ ಜೊತೆ ಸಮಯ ಕಳೆಯಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ನಿಮ್ಮನ್ನು ಭೇಟಿಯಾದಾಗೆಲ್ಲಾ ನನಗೆ ಹೊಸ ಉತ್ಸಾಹ ದೊರಕುತ್ತದೆ. ಸೈನಿಕರೂ ನ್ಯೂ ಇಂಡಿಯಾದ ಒಂದು ಭಾಗ. ಎಲ್ಲಾ ಯೋಧರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ’ಎಂದು ಪ್ರಧಾನಿ ಯೋಧರನ್ನುದ್ದೇಶಿಸಿ ಮಾತನಾಡಿರುವುದಾಗಿ ವರದಿಯಾಗಿದೆ.
2014 ರಲ್ಲಿ ಅಧಿಕಾರಕ್ಕೆ ಬಂದ ವರ್ಷ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ಮೋದಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…