ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ಹಂಚಿದ ಪ್ರಧಾನಿ ಮೋದಿ: ವಿಡಿಯೋ ವ್ಯಾಪಕ ವೈರಲ್
Team Udayavani, Aug 23, 2020, 2:04 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ಹಂಚಿದ್ದು, ಈ ಕುರಿತ ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ವಿಡಿಯೋ ವ್ಯಾಪಕ ವೈರಲ್ ಆಗಿದ್ದು ಅಪಾರ ಜನಮೆಚ್ಚುಗೆ ಪಡೆದಿದೆ. ಇಂದು ಬೆಳಗ್ಗೆ ಪ್ರಧಾನಿ ಮೋದಿಯವರ ವಾಡಿಕೆಯ ವ್ಯಾಯಾಮದ ಸಮಯದಲ್ಲಿ ಈ ವಿಡಿಯೋವನ್ನು ಚಿತ್ರಿಕರಿಸಲಾಗಿದೆ.
ಟ್ವಿಟ್ಟರ್, ಇನ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು ‘ಅಮೂಲ್ಯ ಕ್ಷಣಗಳು’ ಎಂದು ಶೀರ್ಷಿಕೆ ನೀಡಿದ್ದಾರೆ.
ಬೆಳಗ್ಗಿನ ಸಂದರ್ಭದಲ್ಲಿ ನವಿಲುಗಳು ಸಾಮಾನ್ಯವೆಂಬಂತೆ ಕಂಡುಬರುತ್ತದೆ. ಪ್ರಧಾನಿ ಮೋದಿ ನಿವಾಸದಲ್ಲಿ ಹಲವು ಪಕ್ಷಿಗಳಿಗೆ ಆಶ್ರಯ ಕಲ್ಪಿಸಲಾಗಿದೆ.
भोर भयो, बिन शोर,
मन मोर, भयो विभोर,
रग-रग है रंगा, नीला भूरा श्याम सुहाना,
मनमोहक, मोर निराला।रंग है, पर राग नहीं,
विराग का विश्वास यही,
न चाह, न वाह, न आह,
गूँजे घर-घर आज भी गान,
जिये तो मुरली के साथ
जाये तो मुरलीधर के ताज। pic.twitter.com/Dm0Ie9bMvF— Narendra Modi (@narendramodi) August 23, 2020
ಇಂದು ಮುಂಜಾನೆಯಷ್ಟೇ, ಪ್ರಧಾನಿ ಮೋದಿ, ನುವಾಖೈ ಜುಹಾರ್ ಹಬ್ಬದ ಸಂದರ್ಭದಲ್ಲಿ ರೈತರಿಗೆ ಶುಭಾಶಯಗಳನ್ನು ತಿಳಿಸಿದರು. ಇದೊಂದು ಕೃಷಿ ಉತ್ಸವವಾಗಿದ್ದು, ಪಶ್ಚಿಮ ಒಡಿಶಾ ಮತ್ತು ಚತ್ತಿಸ್ ಗಢದಲ್ಲಿ ಆಚರಿಸಲಾಗುತ್ತದೆ.
ರೈತರ ಶ್ರಮ ಅಪಾರವಾದದ್ದು, ಇವರ ಪ್ರಯತ್ನದಿಂದಾಗಿ ನಮ್ಮ ರಾಷ್ಟ್ರಕ್ಕೆ ಆಹಾರ ಪೂರೈಕೆಯಾಗುತ್ತಿದೆ. ಈ ಶುಭ ದಿನ ಎಲ್ಲರಿಗೂ ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ. ನುವಾಖೈ ಜುಹಾರ್! ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.