ಲಘು ಯುದ್ಧ ಹೆಲಿಕಾಪ್ಟರ್ ಸೇನೆಗೆ ಹಸ್ತಾಂತರ
ಎಚ್‌ಎಎಲ್ ನಿರ್ಮಿತ ಮೇಡ್ ಇನ್ ಇಂಡಿಯಾ ಕಾಪ್ಟರ್
Team Udayavani, Nov 20, 2021, 6:00 AM IST
ನವದೆಹಲಿ: ಭಾರತಕ್ಕೆ ಹೆಮ್ಮೆಯ ಸಂಗತಿ ಎಂಬಂತೆ, ದೇಶೀಯವಾಗಿ ನಿರ್ಮಿಸಲಾದ ಮೊದಲ ಲಘು ಸಮರ ಹೆಲಿಕಾಪ್ಟರ್(ಎಲ್‌ಸಿಎಚ್) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಶಸ್ತ್ರ ಪಡೆಗೆ ಸಾಂಕೇತಿಕವಾಗಿ ಹಸ್ತಾಂತರಿಸಿದ್ದಾರೆ.
ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ ಈ ಕಾಪ್ಟರ್ ಅನ್ನು ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದ “ರಾಷ್ಟ್ರ ರಕ್ಷಾ ಸಮರ್ಪಣ್ ಪರ್ವ್’ನಲ್ಲಿ ಹಸ್ತಾಂತರಿಸಲಾಯಿತು.
ಎಲ್‌ಸಿಎಚ್ ವೈಶಿಷ್ಟ್ಯವೇನು?
ಈ ಸಮರ ಹೆಲಿಕಾಪ್ಟರ್ ಅವಳಿ-ಎಂಜಿನ್ ಹೊಂದಿದೆ. ನಿರ್ದಿಷ್ಟ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಇಂಧನವನ್ನು ಹೊತ್ತು 5,000 ಮೀಟರ್(16,400 ಅಡಿ) ಎತ್ತರದಲ್ಲಿ ಲ್ಯಾಂಡಿಂಗ್ ಹಾಗೂ ಟೇಕಾಫ್ ಮಾಡಬಲ್ಲ ಜಗತ್ತಿನ ಮೊತ್ತಮೊದಲ ಅಟ್ಯಾಕ್ ಹೆಲಿಕಾಪ್ಟರ್ ಇದಾಗಿದೆ. ಹಿಮಚ್ಛಾದಿತ ಪ್ರದೇಶದಲ್ಲಿ ಮೈನಸ್ 50 ಡಿ.ಸೆ.ನಿಂದ ಹಿಡಿದು ಮರಳುಗಾಡಿನ 50 ಡಿ.ಸೆ. ತಾಪಮಾನದಲ್ಲೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಇದಕ್ಕಿದೆ.
ಇದನ್ನೂ ಓದಿ:ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆ ಕಾಪಾಡಲು ಸಂಕಲ್ಪ ಮಾಡೋಣ
ತಿರುಗುವ ಸಾಮರ್ಥ್ಯ
ಕಾರ್ಯಾಚರಣೆಯ ವೇಳೆ ಈ ಹೆಲಿಕಾಪ್ಟರ್ ಅನ್ನು ಕೈಯಿಂದಲೇ ಆಪರೇಟ್ ಮಾಡಬಹುದಾಗಿದೆ. ಅದು 360 ಡಿಗ್ರಿಯಲ್ಲಿ ತಿರುಗುವ ಸಾಮರ್ಥ್ಯವನ್ನೂ ಹೊಂದಿದ್ದು, ಗಾಳಿಯಲ್ಲೇ ಕ್ಷಿಪ್ರವಾಗಿ ತಿರುಗಬಲ್ಲದು.
ಹೆಲಿಕಾಪ್ಟರ್‌ನ ತೂಕ- 5-8 ಟನ್
ಅಭಿವೃದ್ಧಿಪಡಿಸಿದ್ದು – ಎಚ್‌ಎಎಲ್
ಎಷ್ಟು ಎತ್ತರಕ್ಕೆ ಹಾರಬಲ್ಲದು?-16,000 ಅಡಿ
ಎಷ್ಟು ಎತ್ತರದಲ್ಲಿ ಟೇಕಾಫ್-ಲ್ಯಾಂಡಿಂಗ್ ಮಾಡಬಲ್ಲದು?- 16,400 ಅಡಿ
ಕಾಪ್ಟರ್‌ನಲ್ಲೇನಿದೆ?- 20 ಎಂ.ಎಂ. ಗನ್, 70 ಎಂ.ಎಂ. ರಾಕೆಟ್, ಏರ್ ಟು ಏರ್ ಕ್ಷಿಪಣಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
WMO: 2025ರಲ್ಲೂ ದಾಖಲೆಯ ತಾಪಮಾನ: 10 ವರ್ಷಗಳಿಂದ ಹೆಚ್ಚುತ್ತಿದೆ ಬಿಸಿಯ ಮಾಪಕ
Wayanad ಭೂಕುಸಿತ ಭಾರೀ ಪ್ರಾಕೃತಿಕ ವಿಕೋಪ: 5 ತಿಂಗಳ ಬಳಿಕ ಕೇಂದ್ರ ಘೋಷಣೆ
Telgi stamp paper scam: ಕರ್ನಾಟಕದ ಓರ್ವ ಸೇರಿ 5 ಮಂದಿಗೆ ಸಜೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.