ಉತ್ತರ ಪ್ರದೇಶದ ಹೆಮ್ಮೆ “ಪೂರ್ವಾಂಚಲ ಎಕ್ಸ್‌ಪ್ರೆಸ್ ವೇ’
341 ಕಿಮೀ ದೂರದ ಎಕ್ಸ್‌ಪ್ರೆಸ್ ಹೆದ್ದಾರಿ ಉದ್ಘಾಟಿಸಿ ಪ್ರಧಾನಿ ಮೋದಿ ಬಣ್ಣನೆ
Team Udayavani, Nov 16, 2021, 8:45 PM IST
ಸುಲ್ತಾನ್‌ಪುರ: ಉತ್ತರ ಪ್ರದೇಶದ ಪೂರ್ವಾಂಚಲ ಭಾಗವನ್ನು ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದವು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಈ ಪ್ರದೇಶವನ್ನು ಬಡತನದಲ್ಲಿಯೇ ಉಳಿಸಿಕೊಂಡು, ಇಲ್ಲಿ ಮಾಫಿಯಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದರು ಎಂದು ಕಟುವಾಗಿ ಟೀಕಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಂಗಳವಾರ 341 ಕಿಮೀ ದೂರದ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಉದ್ಘಾಟಿಸಿದ ಬಳಿಕ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತನಾಡಿದ್ದಾರೆ. ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿ ರಾಜ್ಯದ ಗರಿಮೆ, ಹೆಮ್ಮೆಯ ಸಂಕೇತ ಎಂದು ಕೊಂಡಾಡಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ಬಿರುಸಾಗಿ ಸಾಗುತ್ತಿವೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಸರ್ಕಾರಗಳ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳೇನಿದ್ದರೂ, ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಸೀಮಿತವಾಗಿತ್ತು. ಈಗಿನ ಸರ್ಕಾರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದೆ. ಜತೆಗೆ ಪೂರ್ವಾಂಚಲ ಪ್ರದೇಶಕ್ಕೆ ಆದ್ಯತೆ ನೀಡುತ್ತಿದೆ ಎಂದೂ ಮೋದಿ ಹೇಳಿದ್ದಾರೆ.
ಇದನ್ನೂ ಓದಿ:ಪುನೀತ್ ಹೆಸರಲ್ಲಿ ಕಲಾವಿದರ ತರಬೇತಿ ಕೇಂದ್ರ ಸ್ಥಾಪಿಸಲು: ಡಿ.ಕೆ. ಶಿವಕುಮಾರ್ ಆಗ್ರಹ
ಅವಿಭಾಜ್ಯ ಅಂಗ:
ಈ ಷಟ್ಪಥ ಹೆದ್ದಾರಿ ಪೂರ್ವಾಂಚಲ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಲಿದೆ. ಉತ್ತರ ಪ್ರದೇಶ ಏನನ್ನೂ ಸಾಧಿಸಲಾಗದು ಎಂದು ಪ್ರತಿಪಾದಿಸುತ್ತಿದ್ದವರು ಸುಲ್ತಾನ್‌ಪುರಕ್ಕೆ ಬಂದು ನೋಡಬೇಕು. 3 ವರ್ಷಗಳ ಹಿಂದೆ ಇಲ್ಲಿ ಜಮೀನು ಮಾತ್ರ ಇತ್ತು. ಈಗ ಇಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಿದೆ. ಜತೆ ಗೆ 3.2 ಕಿಮೀನ ವಿಮಾನ ಇಳಿದಾಣ ಕೂಡ ನಿರ್ಮಾಣವಾಗಿದೆ. ಈ ಹೆದ್ದಾರಿ ರಾಜ್ಯದ ಅಭಿವೃದ್ಧಿ ಮತ್ತು ಗರಿಮೆಯ ಸಂಕೇತ ಎಂದಿದ್ದಾರೆ ಮೋದಿ.
ಮಾಜಿ ಸಿಎಂ ಅಖೀಲೇಶ್ ಯಾದವ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, “2014ರಲ್ಲಿ ವಾರಾಣಸಿಯ ಸಂಸದನಾದ ಬಳಿಕ ರಾಜ್ಯದ ಅಭಿವೃದ್ಧಿಯ ಬಗ್ಗೆ ಸಮಾಜವಾದಿ ಪಕ್ಷದ ಸರ್ಕಾರ ಸಹಕರಿಸಲಿಲ್ಲ. ನನ್ನ ಬಳಿ ನಿಂತರೆ ಅವರ ವೋಟ್ ಬ್ಯಾಂಕ್‌ಗೆ ಸಂಚಕಾರ ಬಂದೀತು ಎಂಬ ಭಾವನೆ ಆ ಪಕ್ಷದ ನಾಯಕರಲ್ಲಿತ್ತು. ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ ಪ್ರಕ್ರಿಯೆ ಮುಕ್ತಾಯದ ಬಳಿಕ ಕೂಡಲೇ ತೆರಳುತ್ತಿದ್ದರು’ ಎಂದು ಲೇವಡಿ ಮಾಡಿದ್ದಾರೆ.
ಐಎಎಫ್ ನ ಹರ್ಕ್ಯುಲಸ್ ವಿಮಾನ ಏರಿದ ಪ್ರಧಾನಿ ಇದಕ್ಕೂ ಮುನ್ನ ಪ್ರಧಾನಿ ಮೋದಿಯವರು ವಾಯುಪಡೆಯ ಸಿ-130ಜೆ ಹರ್ಕ್ಯುಲಸ್ ವಿಮಾನ ಏರಿ, ಎಕ್ಸ್‌ಪ್ರಸ್ ವೇನ ಏರ್‌ಸ್ಟ್ರಿಪ್ ನಲ್ಲಿ ಲ್ಯಾಂಡ್ ಆದರು. ಜತೆಗೆ ಮಿರಾಜ್ 2 ಸಾವಿರ ಯುದ್ಧ ವಿಮಾನ ಲ್ಯಾಂಡ್ ಆಗುವುದನ್ನೂ ಪ್ರಧಾನಿ ಖುದ್ದು ವೀಕ್ಷಿಸಿದ್ದಾರೆ. ನಂತರ ನಡೆದ ಏರ್‌ಶೋನಲ್ಲಿ ಮೂರು ಕಿರಣ್ ಎಂಕೆ2, 2 ಸುಖೋಯ್ 30 ವಿಮಾನಗಳೂ ಪಾಲ್ಗೊಂಡವು. ಕಾರ್ಯಕ್ರಮದಲ್ಲಿ ಉ.ಪ್ರ.ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.