PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್ ಅವಮಾನ
ಇದು ಆರೋಪವಲ್ಲ, ವ್ಯವಸ್ಥಿತ ಪಿತೂರಿ: ಪ್ರಧಾನಿ ಆಕ್ರೋಶ ; ರಾಹುಲ್‌ರದ್ದು ನಕ್ಸಲ್ ಮನಸ್ಥಿತಿ
Team Udayavani, Sep 20, 2024, 1:27 AM IST
ಶ್ರೀನಗರ: ಭಾರತದ ದೇವದೇವತೆಗಳೆಂದರೆ ದೇವರು ಎಂದರ್ಥ ವಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ಪ್ರಬಲ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಶ್ರೀನಗರದಲ್ಲಿ ಚುನಾವಣೆ ರ್‍ಯಾಲಿಯಲ್ಲಿ ಮಾತನಾ ಡಿದ ಅವರು, ಇದು ಕಾಂಗ್ರೆಸ್‌ನ ಮನಃಸ್ಥಿತಿಯನ್ನು ತೋರಿಸುತ್ತದೆ. ಆ
ಪಕ್ಷದ ವಾರಸುದಾರ ವಿದೇಶದಲ್ಲಿನಮ್ಮ ದೇವ-ದೇವತೆಯರು ದೇವ ರಲ್ಲ ಎಂದಿದ್ದಾರೆ.
ಇದು ನಮ್ಮ ಶ್ರದ್ಧೆಗೆ ಮಾಡಿದ ಅವಮಾನ. ಇದು ಇತರ ಧರ್ಮಗಳಿಂದ, ಇತರ ದೇಶಗಳಿಂದ ಆಮದು ಮಾಡಿಕೊಂಡ ನಕ್ಸಲ್ ಮನಸ್ಥಿತಿ’ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಮ್ಮ ಶ್ರದ್ಧೆ ಮತ್ತು ಸಂಸ್ಕೃತಿಯನ್ನು ಕೆಲವೇ ಕೆಲವು ಮತಗಳಿಗಾಗಿ ಅತಂತ್ರಗೊಳಿಸಬಲ್ಲದು. ಅವರ ಈ ತಪ್ಪಿಗಾಗಿ ಶಿಕ್ಷೆಯಾಗಲೇಬೇಕು. ಇವನ್ನೆಲ್ಲ ಅವರು ಸುಮ್ಮನೆ, ಬಾಯ್ತಪ್ಪಿ ಹೇಳುತ್ತಿಲ್ಲ. ಇದೊಂದು ವ್ಯವಸ್ಥಿತ ಪಿತೂರಿ. ಕಾಂಗ್ರೆಸ್‌ನ ನಕ್ಸಲ್ ಮನಸ್ಥಿತಿ ಜಮ್ಮುವಿನ ಡೋಗ್ರಾ ಸಂಸ್ಕೃತಿಯನ್ನೂ ಅವಹೇಳನ ಮಾಡಿದೆ ಎಂದು ಮೋದಿ ಹೇಳಿದ್ದಾರೆ.
ರಾಜ್ಯಕ್ಕೆ ಸ್ಥಾನಮಾನ
ನಮ್ಮ ಸರಕಾರದ ಅವಧಿಯಲ್ಲಿ ಜಮ್ಮು- ಕಾಶ್ಮೀರದ ಯುವಕರಿಗೆ ಮತ್ತೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮತಗಳು ಬದಲಾವಣೆ ತರಲು ಸಾಧ್ಯವಿದೆ ಎಂಬ ಭರವಸೆ ಅವರಿಗೆ ಬಂದಿದೆ. ಇದೇ ಅವರ ಸಶಕ್ತೀಕರಣದಲ್ಲಿ ಮೊದಲ ಹೆಜ್ಜೆ. ಜಮು- ಕಾಶ್ಮೀರದ ಯುವಕರು ಇನ್ನೆಂದೂ ಅಸಹಾಯಕರಲ್ಲ. ಯುವಕರಿಗೆ ಉದ್ಯೋಗ ನೀಡಲು ಬಿಜೆಪಿ ದೊಡ್ಡ ಘೋಷಣೆ ಮಾಡಿದೆ. ಜತೆಗೆ ಕೇಂದ್ರಾಡಳಿತ ಪ್ರದೇಶವಾಗಿರುವ ಇಲ್ಲಿಗೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಕಾಂಗ್ರೆಸ್, ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ಈ ಮೂರು ಪಕ್ಷಗಳು ಮತ್ತವರ ಕುಟುಂಬಗಳು ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿತನದ ಕತ್ತುಹಿಸುಕಿವೆ. ಅವುಗಳ ಅವಧಿಯಲ್ಲಿ ಕಾಶ್ಮೀರದ ನೀರು ಪಾಕ್‌ಗೆ ಹೋಗುತ್ತಿತ್ತು. ನಮ್ಮ ಅವಧಿಯಲ್ಲಿ ಅದನ್ನು ನಿಲ್ಲಿಸಲಾಗಿದೆ. ಜಗತ್ತಿನ ಯಾವ ಶಕ್ತಿಗೂ ಜಮ್ಮುಕಾಶ್ಮೀರದಲ್ಲಿ ಮತ್ತೆ 370ನೇ ವಿಧಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಹೇಳಿದ್ದೇನು?
ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ, ದೇವತೆ ಅಂದರೆ ಒಬ್ಬನ ಅಂತರಂಗ, ಬಹಿರಂಗದ ಅಭಿವ್ಯಕ್ತಿಗಳು ಒಂದೇ ರೀತಿಯಿರುವುದು. ಅದರರ್ಥ ಆತ ಸಂಪೂರ್ಣ ಪಾರದರ್ಶಕ ಎಂದು. ಅದು ದೇವರು ಎಂಬರ್ಥವಲ್ಲ. ಒಬ್ಬ ವ್ಯಕ್ತಿ ತಾನು ನಂಬುವ, ಯೋಚಿಸುವ ಎಲ್ಲವನ್ನೂ ಹೇಳುತ್ತಾನೆಂದರೆ ಮತ್ತು ಅದನ್ನು ಬಹಿರಂಗವಾಗಿ ಅಭಿವ್ಯಕ್ತಿಸುತ್ತಾನೆಂದರೆ ಅದೇ ದೇವತೆ ಎಂದು ಹೇಳಿದ್ದರು.
ಪಾಕ್‌ಗೆ ಸಿಂಧು ನೀರು
ಕಾಂಗ್ರೆಸ್ ಕಾರಣ: ಮೋದಿ
ಸಿಂಧೂ ನದಿಯ ನೀರು ಪಾಕಿಸ್ಥಾನಕ್ಕೆ ಹರಿದು ಹೋಗಲು ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪಕ್ಷಗಳು ಕಾರಣ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ. ಕಟ್ರಾದಲ್ಲಿ ಮಾತನಾಡಿದ ಅವರು, 7 ದಶಕಗಳಿಂದ ನೀರು ಪಾಕಿಸ್ಥಾನಕ್ಕೆ ಹರಿದು ಹೋಗುತ್ತಿದೆ. ನದಿಗೆ ಅಣೆಕಟ್ಟು ಕಟ್ಟಿ ನೀರನ್ನು ಕಾಶ್ಮೀರದ ಜನರಿಗೆ ಸದುಪಯೋಗ ಮಾಡುವ ಧೈರ್ಯವನ್ನು ಎರಡೂ ಪಕ್ಷಗಳು ಮಾಡಲಿಲ್ಲ ಎಂದು ದೂರಿದರು.
ಮೋದಿ ಹೇಳಿದ್ದೇನು?
-ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಕೊಡುವೆವು
-ಕಾಂಗ್ರೆಸ್ ನಮ್ಮ ಸಂಸ್ಕೃತಿಯನ್ನು ಅವಮಾನಿಸುತ್ತದೆ
-ಅದರ ಮೂಲಕ ಕೆಲವೇ ಮತಗಳಿ ಗಾಗಿ ಓಲೈಕೆ ಮಾಡುತ್ತಿದೆ
-ಕಾಶ್ಮೀರದ ಡೋಗ್ರಾ ಸಂಸ್ಕೃತಿಗೂ ಕಾಂಗ್ರೆಸ್ ಅವಮಾನ
-ನಮ್ಮ ಸರಕಾರದ ಅವಧಿಯಲ್ಲಿ ಕಾಶ್ಮೀರಿ ಯುವಕರಿಗೆ ಹೆಚ್ಚಿನ ಬಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.