![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 24, 2022, 7:10 AM IST
ಹೊಸದಿಲ್ಲಿ: ದೇಶದ ಸ್ವಾತಂತ್ರ್ಯ ವೀರರಿಗೆ ಗೌರವ ಸಲ್ಲಿಸಬೇಕೆಂಬ ಬಯಕೆ ಇದೆಯೇ? ಹಾಗಿದ್ದರೆ ಕುಳಿತಲ್ಲಿಂದಲೇ ಸ್ವಾತಂತ್ರ್ಯ ಹೋರಾಟಗಾರರಿಗೆ “ಡಿಜಿಟಲ್ ಗೌರವ’ ಸಮರ್ಪಣೆ ಮಾಡಬಹುದು. ಈ ಅವಕಾಶವನ್ನು ಕೇಂದ್ರ ಸರಕಾರ ನೀಡಿದೆ. ಪ್ರಧಾನಿ ಮೋದಿ ಈ ಕುರಿತು ಶನಿವಾರ ಟ್ವೀಟ್ ಮಾಹಿತಿ ನೀಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ನಾಗರಿಕರೆಲ್ಲರೂ ಈ ವಿಶಿಷ್ಟ, ವಿನೂತನ ಕಾರ್ಯದಲ್ಲಿ ಭಾಗಿಯಾಗುವಂತೆ ಕರೆ ಮಾಡಿದ್ದಾರೆ.
ಏನಿದು ಡಿಜಿಟಲ್ ಗೌರವ?
ಹೊಸದಿಲ್ಲಿಯ ಸೆಂಟ್ರಲ್ ಪಾರ್ಕ್‌ನಲ್ಲಿ ಒಂದು ಸ್ಕೈ ಬೀಮ್ ಲೈಟ್ ಅಳವಡಿಸಲಾಗಿದೆ. ದೇಶದ ನಾಗರಿಕರು ಆನ್‌ಲೈನ್‌ನಲ್ಲಿ ಸ್ವಾತಂತ್ರ್ಯವೀರರಿಗೆ ನಮನ ಸಲ್ಲಿಸುತ್ತಿದ್ದಂತೆ ಈ “ಡಿಜಿಟಲ್ ಜ್ಯೋತಿ’ ಮತ್ತಷ್ಟು ಪ್ರಜ್ವಲಿಸಲಾರಂಭಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ವೀರರಿಗೆ ನಾವು ನೀಡುವ ವಿಶೇಷ ಶ್ರದ್ಧಾಂಜಲಿ ಈ ಡಿಜಿಟಲ್ ಜ್ಯೋತಿ ಎಂದು ಪ್ರಧಾನಿ ಹೇಳಿದ್ದಾರೆ.
ನಾವೇನು ಮಾಡಬೇಕು?
– ಮೊದಲು https://digitaltribute.in ಗೆ ಲಾಗಿನ್ ಆಗಿ
– ಅಲ್ಲಿ Pay Tribute(ಶ್ರದ್ಧಾಂಜಲಿ ಸಲ್ಲಿಸಿ) ಎಂಬ ಬಟನ್ ಕ್ಲಿಕ್ ಮಾಡಿ
– ಅನಂತರ ಹೆಸರು, ಇಮೇಲ್ ಐಡಿ, ದೂರವಾಣಿ ಸಂಖ್ಯೆ ನಮೂದಿಸಬೇಕು.
– ಬಳಿಕ ಅಲ್ಲಿರುವ ಸಂದೇಶಗಳ ಪೈಕಿ ಒಂದನ್ನು ಆಯ್ಕೆ ಮಾಡಿ, “submit’ ‘ ಬಟನ್ ಒತ್ತಬೇಕು.
– “ನಿಮ್ಮ ಸಂದೇಶ ಸಂಖ್ಯೆಯೊಂದಿಗೆ ನಿಮ್ಮ ಗೌರವಾರ್ಪಣೆಯ ವೀಡಿಯೋ ರೆಕಾರ್ಡಿಂಗ್ ನಿಮ್ಮ ಇಮೇಲ್ ವಿಳಾಸಕ್ಕೆ ರವಾನಿಸಲಾಗುವುದು’ ಎಂಬ ಸಂದೇಶ ಬರುತ್ತದೆ.
– ಅದೇ ರೀತಿ ನಾವು ರವಾನಿಸಿದ ಸಂದೇಶವು ಸೆಂಟ್ರಲ್ ಪಾರ್ಕ್‌ನ ಎಲ್‌ಇಡಿ ಪರದೆಯಲ್ಲಿ ಕಾಣಿಸುತ್ತದೆ ಮತ್ತು ಡಿಜಿಟಲ್ ಜ್ವಾಲೆ ಮತ್ತಷ್ಟು ಪ್ರಜ್ವಲಿಸುತ್ತದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.