Modi ಪ್ರಮಾಣಕ್ಕೆ 3 ಹಂತದ ಭದ್ರತೆ; 20 ಸಮ್ಮೇಳನಕ್ಕೆ ನೀಡಿದ್ದ ಭದ್ರತೆ ನೀಡಲು ಆದ್ಯತೆ
Team Udayavani, Jun 9, 2024, 6:55 AM IST
ನವದೆಹಲಿ: ಮೂರನೇ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಲು ಸಜ್ಜುಗೊಂಡಿರುವ ನರೇಂದ್ರ ಮೋದಿ ಅವರ ಪದಗ್ರಹಣಕ್ಕೆ ರಾಷ್ಟ್ರ ರಾಜಧಾನಿ ಸಿದ್ಧಗೊಂಡಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ಜಿ-20 ಮಾದರಿಯ ಭದ್ರತೆ ನಿಯೋಜಿಸಲಾಗಿದೆ. ಅರಸೇನಾ ಪಡೆಯ 5 ತುಕಡಿ, ಎನ್‌ಸಿಜಿ ಕಮಾಂಡೋ, ಡ್ರೋನ್ ಹಾಗೂ ಸ್ನೆ„ಪರ್ ಗಳು ಸೇರಿ ವಿವಿಧ ಹಂತದ ಬಿಗಿ ಭದ್ರತೆ ಸಿದ್ದವಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಜಿ-20 ಶೃಂಗಸಭೆಯ ಸಾರಥ್ಯವನ್ನು ಭಾರತದ ವಹಿಸಿದ್ದ ಸಂದರ್ಭದಲ್ಲಿ ರಾಜಧಾನಿಯಲ್ಲಿ ನಿಯೋಜಿಸಿದ್ದ ಬಿಗಿ ಭದ್ರತೆಯಂತೆಯೇ ಮೋದಿ ಪ್ರಮಾಣವಚನ ಸಮಾರಂಭಕ್ಕೂ ನಿಯೋಜಿಸಲಾಗಿದೆ. ಸಾರ್ಕ್ ರಾಷ್ಟ್ರಗಳ ಗಣ್ಯರು ಸೇರಿದಂತೆ ವಿದೇಶಗಳ ಪ್ರಖ್ಯಾತ ನಾಯಕರು ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಹ್ವಾನಿತರು ಉಳಿದುಕೊಂಡಿರುವ ಹೋಟೆಲ್‌ಗಳಿಂದ ಸಮಾರಂಭ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಲು ನಿಗದಿತ ಮಾರ್ಗಗಳನ್ನು ಸೂಚಿಸಲಾಗಿದೆ.
ಭಾನುವಾರದಿಂದ – ಸೋಮವಾರದ ವರೆಗೆ ದೆಹಲಿಯಾದ್ಯಂತ ಡ್ರೋನ್‌ಗಳು, ಹಾಟ್ ಏರ್‌ಬಲೂನ್, ಮೈಕ್ರೋಲೈಟ್ ಏರ್ ಕ್ರಾಫ್ಟ್ ಗಳ ಹಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ಭವನದ ಮೇಲೆ ಹದ್ದಿನ ಕಣ್ಣು
ಪದಗ್ರಹಣ ಸಮಾರಂಭ ರಾಷ್ಟ್ರಪತಿ ಭವನದಲ್ಲಿ ನಡೆಯುವುದರಿಂದ ಭವನದ ಹೊರಗೂ, ಒಳಗೂ 3 ಹಂತದ ಭದ್ರತೆ ನಿಯೋಜಿಸಲಾಗಿದ್ದು, ವಿಶೇಷ ಶಸ್ತ್ರಾಸ್ತ್ರಗಳನ್ನು ಒಳಗೊಂಡ ದೆಹಲಿ ಪೊಲೀಸರ ತಂಡದ ಜತೆಗೆ ಎನ್‌ಎಸ್‌ಜಿ ಸಿಬ್ಬಂದಿ ಭದ್ರತಾ ಮೇಲ್ವಿಚಾರಣೆ ವಹಿಸಲಿದ್ದಾರೆ. ಭವನದ ಸುತ್ತಾ 2,500 ಪೊಲೀಸರು ಭದ್ರತೆ ಒದಗಿಸಲಿದ್ದಾರೆ.
ಏನೆಲ್ಲಾ ಭದ್ರತೆ ನಿಯೋಜಿಸಲಾಗಿದೆ ?
-ಗಣ್ಯರು ಆಗಮಿಸುವ ಮತ್ತು ಉಳಿದುಕೊಂಡಿರುವ ಪ್ರದೇಶಗಳಲ್ಲಿ ಸಶಸ್ತ್ರ ಪೊಲೀಸರ ನಿಯೋಜನೆ
-ತಾಜ್, ಲೀಲಾ, ಐಟಿಸಿ ಮೌರ್ಯ ಸೇರಿ ಗಣ್ಯರು ಉಳಿಯಲಿರುವ ಪ್ರಖ್ಯಾತ ಹೋಟೆಲ್‌ಗಳಿಗೂ ಭದ್ರತೆ
-ನಗರದ ಪ್ರಮುಖ ಸ್ಥಳಗಳು ಕಣ್ಗಾವಲಿಗೆ ಡ್ರೋನ್‌ಗಳ ಬಳಕೆ, ಎತ್ತರದ ಕಟ್ಟಡಗಳ ಮೇಲೆ ಸ್ನೆ„ಪರ್
-ರಾಜಧಾನಿಯ ಪ್ರಮುಖ ಸ್ಥಳಗಳಿಗೆ ಆಗಮಿಸುವ ಎಲ್ಲರ ಮುಖ ಗುರುತಿಸಲು ಎಐ ಸ್ಕ್ಯಾನಿಂಗ್ ಡಿವೈಸ್
-ಕೇಂದ್ರ ದೆಹಲಿಗೆ ಸಂಪರ್ಕಿಸುವ ಹಲವು ರಸ್ತೆಗಳಿಗೆ ನಿರ್ಬಂಧ, ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ತಪಾಸಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.