ಇದೆಂಥ ರಾಜಕೀಯ! ಪ್ರಧಾನಿ ಸೇರಿ ಪ್ರಮುಖರಿಂದ 40 ಹುತಾತ್ಮರಿಗೆ ನಮನ
ಯಾರಿಗೆ ಲಾಭ ಎಂಬ ರಾಹುಲ್ ಹೇಳಿಕೆಯಿಂದ ಕೋಲಾಹಲ
Team Udayavani, Feb 15, 2020, 5:45 AM IST
ಹೊಸದಿಲ್ಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್‌ನ ಜೈಶ್-ಎ-ಮೊಹ ಮ್ಮದ್ ಉಗ್ರ ಸಂಘಟನೆಯ ದಾಳಿಯಿಂದ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿ ಶುಕ್ರವಾರಕ್ಕೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹಿತ ಹಲವಾರು ಮುಖಂಡರು ಯೋಧರ ಬಲಿದಾನವನ್ನು ಸ್ಮರಿಸಿದ್ದಾರೆ.
ಈ ನಡುವೆಯೇ ರಾಜಕೀಯವಾಗಿ ಪುಲ್ವಾಮಾ ಘಟನೆಯಿಂದ ಲಾಭ ಪಡೆದವರು ಯಾರು ಎಂಬು ದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿ ರುವ ಹೇಳಿಕೆ ಕೋಲಾಹಲಕ್ಕೆ ಕಾರಣವಾಗಿದೆ. ಇದ ರಿಂದ ಕ್ರುದ್ಧಗೊಂಡಿರುವ ಬಿಜೆಪಿಯು ರಾಹುಲ್ ಉಗ್ರ ಸಂಘಟನೆಗಳಾಗಿರುವ ಜೆಇಎಂ, ಎಲ್‌ಇಟಿಗಳ ಬಗ್ಗೆ ಒಲವು ಇರುವ ವ್ಯಕ್ತಿ ಎಂದು ತಿರುಗೇಟು ನೀಡಿದೆ.
ಶುಕ್ರವಾರ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 40 ಮಂದಿ ಹುತಾತ್ಮ ಸಿಆರ್‌ಪಿಎಫ್ ಯೋಧರನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ. ಈ ಘಟನೆಯಿಂದ ಯಾರು, ಯಾವ ರೀತಿ ಲಾಭ ಪಡೆದುಕೊಂಡಿದ್ದಾರೆ, ಈ ಬಗ್ಗೆ ಕೈಗೊಳ್ಳಲಾಗುತ್ತಿರುವ ತನಿಖೆಯ ಪ್ರಗತಿ ಏನಾಗಿದೆ, ಬಿಜೆಪಿ ಸರಕಾರದಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಯೋಧರ ದುರುಪಯೋಗ
ಕೇಂದ್ರವು ಯೋಧರ ತ್ಯಾಗ-ಬಲಿದಾನ ವನ್ನು ಚುನಾವಣ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದೂ ರಾಹುಲ್ ದೂರಿದ್ದಾರೆ.
ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುಜೇì ವಾಲ ಟ್ವೀಟ್ ಮಾಡಿ, ದೇಶವೇ ಯೋಧರ ಬಲಿದಾನವನ್ನು ಹೆಮ್ಮೆಯಿಂದ ಸ್ಮರಿಸುತ್ತಿದೆ. ದಾಳಿಯ ವಿರುದ್ಧ ನಡೆದ ತನಿಖೆಯ ವರದಿಯ ನ್ನೇಕೆ ಬಹಿರಂಗ ಮಾಡಿಲ್ಲ? 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತಂದವರು ಯಾರು, ದಾಳಿಯ ಬಗ್ಗೆ ಗುಪ್ತಚರ ಮುನ್ನೆಚ್ಚರಿಕೆ ಇದ್ದರೂ ಅದನ್ನೇಕೆ ಕಡೆಗಣಿಸಲಾಯಿತು ಎಂದು ಪ್ರಶ್ನಿಸಿದ್ದಾರೆ. ಚುನಾವಣೆ ವೇಳೆ ಮಾತ್ರ ಬಿಜೆಪಿಗೆ ಯೋಧರ ನೆನಪಾಗುತ್ತದೆ ಎಂದೂ ಅವರು ದೂರಿದ್ದಾರೆ.
ಸಹಾನುಭೂತಿಯ ವ್ಯಕ್ತಿ
ರಾಹುಲ್ ಟ್ವೀಟ್‌ಗೆ ಬಿಜೆಪಿಯ ಇಬ್ಬರು ನಾಯಕರು ಕೋಪೋದ್ರಿಕ್ತಗೊಂಡು ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ “ನಿಮಗೆ ನಾಚಿಕೆಯಾಗಬೇಕು’ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಉಗ್ರ ಸಂಘಟನೆಗಳಾದ ಲಷ್ಕರ್, ಜೈಶ್ ಬಗ್ಗೆ ಸಹಾನುಭೂತಿ ಇರುವ ವ್ಯಕ್ತಿ ಎಂದು ಈಗಾಗಲೇ ಸಾಬೀತಾಗಿದೆ. ಈ ಘಟನೆಗೆ ಕಾರಣವಾಗಿರುವ ಪಾಕಿಸ್ಥಾನವನ್ನು ಅವರು ಯಾವತ್ತೂ ಪ್ರಶ್ನೆ ಮಾಡುವುದೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿಯ ನಾಯಕಿ, ಸಂಸದೆ ಮೀನಾಕ್ಷಿ ಲೇಖೀ ಪ್ರತಿಕ್ರಿಯಿಸಿ, 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ, 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಬಳಿಕ ದೇಶದಲ್ಲಿ ಯಾರು ಲಾಭ ಪಡೆದುಕೊಂಡರು ಎಂದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಸಿಪಿಎಂ ನಾಯಕರೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಘಟನೆಯ ಬಗ್ಗೆ ತನಿಖೆ ಮಾಡಿದ ಬಗ್ಗೆ ವರದಿ ಎಲ್ಲಿದೆ ಮತ್ತು ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಪಕ್ಷದ ನಾಯಕ ಸೀತಾರಾಮ್ ಯೆಚೂರಿ ಪ್ರಶ್ನೆ ಮಾಡಿದ್ದಾರೆ.
ಸದಾ ಸ್ಮರಣೆ: ಪ್ರಧಾನಿ
ಹುತಾತ್ಮರಾಗಿರುವ 40 ಮಂದಿಯ ಬಲಿದಾನವನ್ನು ದೇಶ ಸದಾ ಸ್ಮರಣೆಯಲ್ಲಿ ಇರಿಸಿಕೊಳ್ಳುತ್ತದೆ ಮತ್ತು ಕೊಂಡಾಡುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಅವರಲ್ಲಿ ಪ್ರತಿಯೊಬ್ಬರೂ ಭಿನ್ನ ವ್ಯಕ್ತಿತ್ವದವರು. ದೇಶಕ್ಕೇ ಜೀವ ಅರ್ಪಿಸಿದ ಅವರ ಬಗ್ಗೆ ಯಾವತ್ತೂ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.
ಎನ್‌ಐಎ ತನಿಖೆಯಲ್ಲಿ ಅಲ್ಪ ಪ್ರಗತಿ
ಪುಲ್ವಾಮಾ ದಾಳಿಯ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಶುರು ಮಾಡಿತ್ತಾದರೂ ನಿರೀಕ್ಷಿತ ಪ್ರಗತಿ ಆಗಿಲ್ಲ. ಘಾತಕ ಕೃತ್ಯಗಳಿಗೆ ಕಾರಣರಾದ ಐವರು ಉಗ್ರರನ್ನು ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿವಿಧ ಎನ್‌ಕೌಂಟರ್‌ಗಳಲ್ಲಿ ಕೊಂದಿವೆ. 2008ರ ಮುಂಬಯಿ ದಾಳಿ ಬಳಿಕ ದೇಶದಲ್ಲಿ ಉಗ್ರ ಕೃತ್ಯಗಳ ಬಗ್ಗೆ ವಿಶೇಷ ತನಿಖೆ ನಡೆಸುವ ನಿಟ್ಟಿನಲ್ಲಿ ಎನ್‌ಐಎ ರಚಿಸಲಾಗಿತ್ತು. ಅಂಥ ತಂಡಕ್ಕೆ ಘಟನೆಯ ಬಗ್ಗೆ ಪ್ರಮುಖ ಮಾಹಿತಿ ಲಭ್ಯವಾಗದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ವಿಧಿ ವಿಜ್ಞಾನ ತಜ್ಞರ ನೆರವಿನೊಂದಿಗೆ ಸ್ಫೋಟಕ ತುಂಬಿದ್ದ ಕಾರ್‌ನ ಸೀರಿಯಲ್ ನಂಬರ್ ಪತ್ತೆ ಮಾಡಲಾಗಿತ್ತು ಮತ್ತು ಅದರ ಮಾಲಕ ಯಾರು ಎನ್ನುವುದನ್ನು ಮಾತ್ರ ಕಂಡು ಹಿಡಿಯಲಾಗಿದೆ. ಜತೆಗೆ ಆತ್ಮಹತ್ಯಾ ದಾಳಿ ನಡೆಸಿದ್ದು ಉಗ್ರ ಅದಿಲ್ ಅಹ್ಮದ್ ದರ್ ಎನ್ನುವುದು ಕೂಡ ಖಚಿತವಾದದ್ದು ಬಿಟ್ಟರೆ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ.
ಸ್ಮಾರಕ ಉದ್ಘಾಟನೆ
ಪುಲ್ವಾಮಾ ದಲ್ಲಿ ಹುತಾತ್ಮ 40 ಮಂದಿ ಸಿಆರ್‌ಪಿಎಫ್ ಯೋಧರ ಸ್ಮರಣಾರ್ಥ ನಿರ್ಮಿಸಲಾಗಿರುವ ಬೃಹತ್ ಸ್ಮಾರಕವನ್ನು ಉದ್ಘಾಟಿಸ ಲಾಗಿದೆ. ಕರ್ನಾಟಕದ ಮಂಡ್ಯ ಸಹಿತ ವಿವಿಧೆಡೆಯ ಹುತಾತ್ಮ ಯೋಧರ ಜನ್ಮಸ್ಥಳಗಳಿಂದ ಮಣ್ಣನ್ನು ಸಂಗ್ರಹಿಸಿ ಸ್ಮಾರಕದ ನಿರ್ಮಾಣದಲ್ಲಿ ಬಳಸ ಲಾಗಿದೆ. ಅಲ್ಲಿ 40 ಮಂದಿಯ ಫೋಟೋ, ಹೆಸರುಗಳನ್ನು ಕೆತ್ತ ಲಾಗಿದೆ. ಪಾಕ್‌ನ ಉಗ್ರ ಸಂಘಟನೆ ಜೈಶ್ ಕುಕೃತ್ಯ ನಡೆಸಿದ ಪುಲ್ವಾಮಾದ ಲೇತ್‌ಪೊರಾ ದಲ್ಲಿಯೇ ಈ ಸ್ಮಾರಕ ವನ್ನು ನಿರ್ಮಿಸಲಾಗಿದೆ.
ಈ ಘಟನೆ ಉಗ್ರರ ವಿರುದ್ಧ ಹೋರಾಟ ನಡೆಸಲು ಮತ್ತಷ್ಟು ಧೈರ್ಯ, ಕೆಚ್ಚು ತುಂಬಿದೆ. ದುರಂತಕ್ಕೆ ಕಾರಣ ವಾಗಿರುವ ಜೆಇಎಂನ ಉಗ್ರರನ್ನು ಕೂಡಲೇ ಕೊಂದಿ ದ್ದೇವೆ ಎಂಬ ಸಮಾಧಾನ ನಮ್ಮದು.
– ಝುಲ್ಫಿಕರ್ ಹಸನ್, ಸಿಆರ್‌ಪಿಎಫ್ ಹೆಚ್ಚುವರಿ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.