PM Modi 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನ
Team Udayavani, Dec 14, 2023, 8:55 PM IST
ಹೊಸದಿಲ್ಲಿ: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಗುರುತಿಸಿ 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು 2018 ರಲ್ಲಿ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಯನ್ನು ಮೋದಿ ಸ್ವೀಕರಿಸೀರುವುದನ್ನು ಉಲ್ಲೇಖಿಸಿ, 2014 ರಿಂದ, ಭಾರತದ ಪ್ರಧಾನ ಮಂತ್ರಿ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು ಯುಎನ್‌ನ ಅತ್ಯುನ್ನತ ಪರಿಸರ ಪ್ರಶಸ್ತಿಯನ್ನು ಪಡೆದಿದ್ದಾರೆ” ಎಂದು ಹೇಳಿದರು.
2016 ರಲ್ಲಿ ಅಫ್ಘಾನಿಸ್ಥಾನದ ಸ್ಟೇಟ್ ಆರ್ಡರ್ ಆಫ್ ಘಾಜಿ ಅಮೀರ್ ಅಮಾನುಲ್ಲಾ ಖಾನ್, ಫೆಬ್ರವರಿ 2018 ರಲ್ಲಿ ಪ್ಯಾಲೆಸ್ತೀನ್ ಗ್ರ್ಯಾಂಡ್ ಕಾಲರ್, ಅಕ್ಟೋಬರ್‌ನಲ್ಲಿ ಯುಎನ್ ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿ , ಎಪ್ರಿಲ್ 2019 ರಲ್ಲಿ ಯುಎಇಯಿಂದ ಆರ್ಡರ್ ಆಫ್ ಜಾಯೆದ್ ಮತ್ತು ರಷ್ಯಾದಿಂದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ. ಜೂನ್ 2019 ರಲ್ಲಿ ಮಾಲ್ಡೀವ್ಸ್‌ನಿಂದ ಆರ್ಡರ್ ಆಫ್ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ಇಝುದ್ದೀನ್, 2019 ರ ಆಗಸ್ಟ್‌ನಲ್ಲಿ ಬಹ್ರೇನ್‌ನಿಂದ ಕಿಂಗ್ ಹಮದ್ ಆರ್ಡರ್ ಆಫ್ ದಿ ರೆನೈಸೆನ್ಸ್, ಡಿಸೆಂಬರ್ 2020 ರಲ್ಲಿ ಯುಎಸ್‌ನಿಂದ ಲೀಜನ್ ಆಫ್ ಮೆರಿಟ್, ಡಿಸೆಂಬರ್ 2021 ರಲ್ಲಿ ಭೂತಾನ್‌ನಿಂದ ಆರ್ಡರ್ ಆಫ್ ದಿ ಡ್ರ್ಯಾಗನ್ ಕಿಂಗ್, ಪಾಪುವಾ ನ್ಯೂ ಗಿನಿಯಾದಿಂದ ಲೋಗೊಹು, ಈ ವರ್ಷ ಮೇನಲ್ಲಿ ಫಿಜಿಯಿಂದ ಆರ್ಡರ್ ಆಫ್ ಫಿಜಿ, ಪಾಪುವ ನ್ಯೂ ಗಿನಿಯಾದಿಂದ ಲೋಗೊಹು ಮತ್ತು ಜೂನ್‌ನಲ್ಲಿ ಈಜಿಪ್ಟ್‌ನಿಂದ ಆರ್ಡರ್ ಆಫ್ ದಿ ನೈಲ್ ಸ್ವೀಕರಿಸಿರುವುದನ್ನು ಮುರಳೀಧರನ್ ಉಲ್ಲೇಖಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.