ಉತ್ತರಾಖಂಡ ಭೇಟಿ ವೇಳೆ ಶೀಟಿನ ಮನೆಯಲ್ಲಿ ರಾತ್ರಿ ಕಳೆದಿದ್ದ ಮೋದಿ!
Team Udayavani, Oct 24, 2022, 7:25 AM IST
ಡೆಹ್ರಾಡೂನ್: ಕಳೆದ ವಾರ 2 ದಿನಗಳ ಉತ್ತರಾಖಂಡ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮನಾ ನಗರದ ಸಮೀಪದ ತಾತ್ಕಾಲಿಕ ನಿವಾಸವೊಂದರಲ್ಲೇ ರಾತ್ರಿ ಕಳೆದಿದ್ದರು!
ಸಮುದ್ರ ಮಟ್ಟದಿಂದ 11,300 ಅಡಿ ಎತ್ತರದಲ್ಲಿ ಗಡಿ ರಸ್ತೆಗಳ ಸಂಸ್ಥೆ(ಬಿಆರ್‌ಒ/ಡಿಇಟಿ)ಯು ತಮ್ಮ ಸಿಬ್ಬಂದಿಗಾಗಿ ನಿರ್ಮಿಸಿರುವ ಸಣ್ಣ ಅರೆ ಶಾಶ್ವತ ತಾತ್ಕಾಲಿಕ ಚಾವಣಿಯಲ್ಲೇ ಅವರು ಮಲಗಿದ್ದರು.
ಮೋದಿ ಅವರು ಈ ಸ್ಥಳದಲ್ಲಿ ರಾತ್ರಿ ಕಳೆಯಲಿದ್ದಾರೆ ಎಂದು ಕೇವಲ ಮೂರು ದಿನಗಳ ಮೊದಲು ಡಿಇಟಿ ಅಧಿಕಾರಿಗಳಿಗೆ ಮಾಹಿತಿ ಕೊಡಲಾಗಿತ್ತು.
ಆ ತಾತ್ಕಾಲಿಕ ನಿವಾಸದಲ್ಲಿ ಯಾವುದೇ ಸೌಲಭ್ಯವಿಲ್ಲದಿದ್ದರೂ ಪ್ರಧಾನಿ ಅಲ್ಲೇ ತಂಗಲು ನಿರ್ಧರಿಸಿದ್ದಾರೆ. ಸಣ್ಣದೊಂದು ಅತ್ಯಗತ್ಯ ಸಾಮಾಗ್ರಿಗಳ ಜತೆ ಎಲೆಕ್ಟ್ರಿಕ್ ಹೀಟರ್ ಮಾತ್ರವೇ ಅಲ್ಲಿ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಮಿಕರು ಮಾಡಿದ ಅಡುಗೆ:
ಹಾಗೆಯೇ ಮೋದಿ ಅಲ್ಲಿನ ಕಾರ್ಮಿಕರು ಮಾಡಿದ ಅಡುಗೆಯನ್ನೇ ಸೇವಿಸಿದ್ದಾರೆ. ಮೋದಿಗೆಂದು ಬೇರೆಡೆ ಊಟದ ವ್ಯವಸ್ಥೆ ಮಾಡಲಾಗಿತ್ತಾದರೂ ಅವರು ಮನೆಯಲ್ಲಿದ್ದ ಅಡುಗೆಯವರಿಗೆ “ನೀವೇ ಅಡುಗೆ ಮಾಡಿ’ ಎಂದು ಕೇಳಿ ಮಾಡಿಸಿಕೊಂಡು, ತಿಂದಿದ್ದಾರೆ. ಕಿಚಡಿ, ಪೋಹಾ, ಮೀಠಾ ಕರೇಲಾ, ಸಬ್ಬಕ್ಕಿ ಖೀರನ್ನು ಪ್ರಧಾನಿ ಸೇವಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
Sukma; ಭೀಕರ ಗುಂಡಿನ ಕಾಳಗದಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
Saif Ali Khan: ನಟ ಸೈಫ್ ಅಲಿಖಾನ್ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.