ಹುತಾತ್ಮರಿಗೆ ವೀರವಣಕ್ಕಂ
Team Udayavani, Dec 10, 2021, 6:40 AM IST
ಹೊಸದಿಲ್ಲಿ/ವೆಲ್ಲಿಂಗ್ಟನ್: ಛೆ! ಹೀಗಾಗಿ ಹೋಯಿತಲ್ಲ… ಭಾರವಾದ ಹೃದಯಗಳು…. ಅಸುನೀಗಿದವರ ಗುಣಗಾನ….,
ತಮಿಳುನಾಡಿನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್‌ನಿಂದ ಹೊಸದಿಲ್ಲಿಯ ವರೆಗೆ ಎಲ್ಲರೂ ಮಾತನಾಡಿಕೊಳ್ಳುವುದು ರಕ್ಷಣ ಪಡೆಗಳ ಮುಖ್ಯಸ್ಥ ಜ|ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿಯ ದುರ್ಮರಣದ ಬಗ್ಗೆಯೇ. ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣ ಅಕಾಡೆಮಿ ಕಾಲೇಜಿನಿಂದ ಹೊಸದಿಲ್ಲಿಗೆ ವಿಶೇಷ ವಿಮಾನದಲ್ಲಿ 13 ಮಂದಿಯ ಪಾರ್ಥಿವ ಶರೀರಗಳನ್ನು ಹೊಸ ದಿಲ್ಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ 7.35ಕ್ಕೆ ಸರಿಯಾಗಿ ಸಂಜೆ ಇಳಿಸಿದಾಗ ಅಲ್ಲಿ ಸಂತಾಪದ ವಾತಾವರಣವೇ ನಿರ್ಮಾಣವಾಗಿತ್ತು. ಐಎಎಫ್ನ ಸಿ-130ಜೆ ಸೂಪರ್ ಹಕ್ಯುìಲಸ್ ವಿಮಾನದಲ್ಲಿ ಪಾರ್ಥಿವ ಶರೀರಗಳನ್ನು ತರಲಾಯಿತು.
ಖುದ್ದು ಪ್ರಧಾನಿ ನರೇಂದ್ರ ಮೋದಿ, ರಕ್ಷಣ ಸಚಿವ ರಾಜನಾಥ್ ಸಿಂಗ್, ಭೂಸೇನೆ ಮುಖ್ಯಸ್ಥ ಜ|ಎಂ.ಎಂ.ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್, ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅಂತಿಮ ನಮನ ಸಲ್ಲಿಸಿದರು. ಪ್ರಧಾನಿ ಮೋದಿ, ರಕ್ಷ ಣ ಸಚಿವ ರಾಜನಾಥ್ ಸಿಂಗ್ ಜ|ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಕುಟುಂಬದ ಸದಸ್ಯರನ್ನು ಭೇಟಿಯಾಗಿ, ಸಂಕಷ್ಟದ ಸಂದರ್ಭದಲ್ಲಿ ಅವರ ಜತೆಗೆ ದೇಶವೇ ಇದೆ ಎಂದು ಧೈರ್ಯ ತುಂಬಿದ್ದಾರೆ. ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವುದಕ್ಕೆ ಮೊದಲು ಪ್ರಧಾನಿ ಮೋದಿ, ರಕ್ಷಣ ಸಚಿವರು ಜ| ರಾವತ್ ಸೇರಿದಂತೆ 13 ಮಂದಿಯ ಪಾರ್ಥಿವ ಶರೀರಗಳಿಗೆ ಪುಷ್ಪ ನಮನವನ್ನು ಅರ್ಪಿಸಿದರು.
ಇದಕ್ಕಿಂತ ಮೊದಲು ರಕ್ಷ ಣ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜ|ರಾವತ್ ಮತ್ತು ಅಸುನೀಗಿದ ಇತರ ಸೇನಾಧಿಕಾರಿಗಳ ಕುಟುಂಬ ಸದಸ್ಯ ರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಬಳಿಕ ಎಲ್ಲರ ಮೃತ ದೇಹಗಳನ್ನು ಸೇನಾ ಆಸ್ಪತ್ರೆಗೆ ರವಾನಿಸಲಾಗಿದೆ. ಶುಕ್ರವಾರ ಜ|ರಾವತ್ ಮತ್ತು ಪತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರಗಳನ್ನು ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
ತ.ನಾಡು ಜನರಿಂದ “ವೀರ ವಣಕ್ಕಂ’: ಪಾರ್ಥಿವ ಶರೀರಗಳನ್ನು ಕೊಯಮತ್ತೂರಿನ ಸುಲೂರು ವಾಯುನೆಲೆಗೆ ಕೊಂಡೊಯ್ಯುವಾಗ ಜನರು ದಾರಿಯುದ್ದಕ್ಕೂ ನಿಂತು, ಮೃತ ಯೋಧರಿಗೆ ಗೌರವ ಸಲ್ಲಿಸಿದ್ದರು. “ವೀರ ವಣಕ್ಕಂ’ (ಯೋಧರಿಗೆ ನಮನ) ಎಂದು ಘೋಷಣೆ ಕೂಗಿದ್ದಾರೆ. ಆ್ಯಂಬುಲೆನ್ಸ್‌ಗಳು ಸಾಗುವ ಹಾದಿಯಲ್ಲಿ ಹೂವುಗಳನ್ನು ಚೆಲ್ಲಿದ ಜನರು ಕೈ ಮುಗಿದು, ಸೆಲ್ಯೂಟ್ ಹೊಡೆದರು. ಜತೆಗೆ ಹೂವುಗಳನ್ನು ಸುರಿಸಿ “ಭಾರತ್ ಮಾತಾ ಕೀ ಜೈ’ ಘೋಷಣೆಯನ್ನೂ ಕೂಗಿದ್ದರು. ಜ|ರಾವತ್ ಪಾರ್ಥಿವ ಶರೀರವನ್ನು ಐಎಎಫ್ ನೆಲೆಗೆ ಕೊಂಡೊಯ್ಯುತ್ತಿರುವ ವೇಳೆ ಸಣ್ಣ ಪ್ರಮಾಣದ ಅಪಘಾತ ನಡೆದಿದೆ. ಕೂಡಲೇ ಬದಲಿ ವಾಹನದಲ್ಲಿ ಪಾರ್ಥಿವ ಶರೀರಗಳನ್ನು ಕೊಂಡೊಯ್ಯಲಾಯಿತು.
ಸಿಎಂ ಸ್ಟಾಲಿನ್ ಅಂತಿಮ ನಮನ:
ಬೆಳಗ್ಗೆ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣ ಅಕಾಡೆಮಿ ಕಾಲೇಜಿನಲ್ಲಿ ಕಾಪ್ಟರ್ ದುರಂತದಲ್ಲಿ ಅಸುನೀಗಿದ 13 ಮಂದಿಗೆ ಅಂತಿಮ ನಮನ ಸಲ್ಲಿಸಿದ್ದರು. ಅವರ ಜತೆಗೆ ತೆಲಂಗಾಣ ರಾಜ್ಯಪಾಲರಾಗಿರುವ ತಮಿಳ್‌ಸಲೈ ಸುಂದರರಾಜನ್ ಸೇರಿದಂತೆ ಪ್ರಮುಖರು ಗೌರವ ನಮನ ಸಲ್ಲಿಸಿದ್ದರು. ಅನಂತರ ಪಾರ್ಥಿವ ಶರೀರಗಳನ್ನು ಹೊಸದಿಲ್ಲಿಗೆ ಐಎಎಫ್ನ ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ಕಳುಹಿಸಿ ಕೊಡಲಾಗಿತ್ತು.
ನೀರು ಕೊಡಿ… ರಾವತ್ ಕಡೆಯ ಮಾತು :
“ನಾನು ಸೇನಾ ಪಡೆಗಳ ಮುಖ್ಯಸ್ಥ ರಾವತ್. ಸ್ವಲ್ಪ ನೀರು ಕೊಡುವಿರಾ”…. ತಾವು ಹುತಾತ್ಮರಾಗುವ ಮುನ್ನ ತಮ್ಮನ್ನು ರಕ್ಷಿಸಲು ಬಂದಿದ್ದ ತಮಿಳುನಾಡಿನ ಗ್ರಾಮಸ್ಥರಿಗೆ ರಕ್ಷಣ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಮನವಿ. ಇದು ಅವರಾಡಿದ ಕಡೆಯ ಮಾತು ಕೂಡ.
ನೀಲಗಿರಿ ದಟ್ಟಾರಣ್ಯದಲ್ಲಿ ಹೆಲಿಕಾಪ್ಟರ್ ಪತನವಾದ ನಂತರ ಹೆಲಿಕಾಪ್ಟರ್‌ನಲ್ಲಿದ್ದವರ ರಕ್ಷಣೆಗೆ ಧಾವಿಸಿ ಬಂದ ಸುತ್ತಲಿನ ಗ್ರಾಮಸ್ಥರು, ಕೆಲವರನ್ನು ಎತ್ತಿಕೊಂಡು ಹತ್ತಿರದ ಆಸ್ಪತ್ರೆಯತ್ತ ಸಾಗಿಸಲು ಮುಂದಾದರು. ಅವರು ಎತ್ತಿಕೊಂಡ ವ್ಯಕ್ತಿಗಳಲ್ಲೊಬ್ಬರು ರಾವತ್ ಆಗಿದ್ದರು. ಅವರ್ಯಾರು ಎಂದು ಗ್ರಾಮಸ್ಥರಿಗೆ ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಕ್ಷೀಣ ಧ್ವನಿಯಲ್ಲಿ ಮಾತನಾಡಿದ ರಾವತ್, ತಮ್ಮನ್ನು ರಾವತ್ ಎಂದು ಪರಿಚಯಿಸಿಕೊಂಡು ನೀರು ಕೊಡಿ ಎಂದು ಕೇಳಿದ್ದರು ಎಂದು ಅವರನ್ನು ಎತ್ತೂಯ್ಯುತ್ತಿದ್ದ ಗ್ರಾಮಸ್ಥರಲ್ಲೊಬ್ಬರಾದ ಎನ್.ಸಿ. ಮುರಳಿ ಎಂಬುವರು ಹೇಳಿದ್ದಾರೆ.
ಕೇಸು ದಾಖಲು :
ಕುನೂರ್‌ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದಂತೆ ನೀಲಗಿರಿ ಜಿಲ್ಲೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಮುತ್ತುಮಾಣಿಕ್ಯಂ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಅದಕ್ಕೆ ಪೂರಕವಾಗಿ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೂವರ ದೇಹ ಮಾತ್ರ ಗುರುತು :
ಜ|ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್ ಅವರ ಪಾರ್ಥಿವ ಶರೀರಗಳನ್ನು ಮಾತ್ರ ಡಿಎನ್‌ಎ ಪರೀಕ್ಷೆ ಮೂಲಕ ದೃಢಪಡಿಸಲಾಗಿದೆ. ಉಳಿದವರ ದೇಹಗಳನ್ನು ಹೊಸದಿಲ್ಲಿಗೆ ತರಲಾಗಿದ್ದರೂ, ಅವುಗಳನ್ನು ಸೇನಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವೈಜ್ಞಾನಿಕ ಪರೀಕ್ಷೆ ಮೂಲಕ ದೃಢೀಕರಿಸಿದ ಬಳಿಕವಷ್ಟೇ ಅವುಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.