ಇಂದು ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
Team Udayavani, Apr 26, 2020, 7:56 AM IST
ನವದೆಹಲಿ: ಪ್ರಧಾನಿ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾರತದಲ್ಲಿ ಕೋವಿಡ್ 19 ವೈರಸ್ ಆರ್ಭಟ ಮುಂದುವರಿದಿದ್ದು ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪುವವರ ಸಂಖ್ಯೆ ಏರುತ್ತಲೇ ಇದೆ. ಇದರ ಕುರಿತಾಗಿ ಪ್ರಧಾನಿ ಇಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿ ಮೇ 3ರವರೆಗೂ ಲಾಕ್ಡೌನ್ ವಿಸ್ತರಿಸಿ ಆದೇಶಿಸಿದ್ದಾರೆ. ಮಾತ್ರವಲ್ಲದೆ ಕೋವಿಡ್ ಕುರಿತಂತೆ ಆಗ್ಗಾಗ ಜನರನ್ನುದ್ದೇಶಿಸಿ ಮಾತಾಡುತ್ತಿರುತ್ತಾರೆ. ಇಂದಿನ ಕಾರ್ಯಕ್ರಮದಲ್ಲಿ ಕೋವಿಡ್ -19 ಮಾಹಾಮಾರಿ ವಿರುದ್ಧದ ಹೋರಾಟದ ಪ್ರಗತಿ ಮತ್ತು ಮುಂದಿನ ಹಾದಿಯ ಕುರಿತು ಅವರ ಅಭಿಪ್ರಾಯಗಳನ್ನು ಜನರಿಗೆ ತಿಳಿಸುವ ನಿರೀಕ್ಷೆಯಿದೆ.
ಮನ್ ಕೀ ಬಾತ್ ಕಾರ್ಯಕ್ರಮ ಆಕಾಶವಾಣಿಯ ಎಲ್ಲಾ ಜಾಲಗಳಲ್ಲಿ, ದೂರದರ್ಶನ ಮತ್ತು ವೆಬ್ಸೈಟ್, ನ್ಯೂಸ್ ಆನ್ ಎಐಆರ್ ಆ್ಯಪ್ನಲ್ಲೂ ಪ್ರಸಾರವಾಗಲಿದೆ.
ಕಳೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ( ಮಾರ್ಚ್ 29) ಪ್ರಧಾನಿ ಮೋದಿ ದೇಶದಲ್ಲಿ ಲಾಕ್ ಡೌನ್ ವಿಧಿಸಿದಕ್ಕಾಗಿ ಜನರನ್ನು ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಮಾತ್ರವಲ್ಲದೆ ಲಾಕ್ ಡೌನ್ ನಿಂದಾಗುವ ಒಳಿತುಗಳ ಕುರಿತು ಮನವರಿಕೆ ಮಾಡಿ ಕೊಟ್ಟಿದ್ದರು.
ಕೋವಿಡ್ 19 ವೈರಸ್ ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಲಾಕ್ಡೌನ್ ವಿಸ್ತರಿಸುವ ಕುರಿತಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು 20.3 ಕೋಟಿ ಮಂದಿ ವೀಕ್ಷಿಸಿದ್ಧಾರೆ ಎಂದು ಬ್ರಾಡ್ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್(ಬಿಎಆರ್ಸಿ) ತಿಳಿಸಿತ್ತು. ಏಪ್ರಿಲ್ 14ನೇ ತಾರೀಕಿನಂದು ಮಾಡಿದ ಮೋದಿಯವರ 21 ನಿಮಿಷಗಳ ಲಾಕ್ಡೌನ್ ಭಾಷಣವನ್ನು 199 ನ್ಯೂಸ್ ಚಾನೆಲ್ಗಳ ಮೂಲಕ 20 ಕೋಟಿ ಮಂದಿ ನೋಡಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಏಪ್ರಿಲ್ 14ರ ಲಾಕ್ಡೌನ್ ಭಾಷಣವೂ ಮಾರ್ಚ್ ತಿಂಗಳ ಭಾಷಣದ ವೀಕ್ಷಕರ ಸಂಖ್ಯೆಯನ್ನು ಮೀರಿಸಿತ್ತು. ಮೊದಲ ಬಾರಿಗೆ 21 ದಿನಗಳ ಕಾಲ ಲಾಕ್ಡೌನ್ ಬಗ್ಗೆ ಮಾಡಿದ್ದ ಹಿಂದಿನ ಭಾಷಣವೂ ಆಗ 201 ವಾಹಿನಿಗಳ ಮೂಲಕ 19.7 ಕೋಟಿ ಮಂದಿಯನ್ನು ತಲುಪಿತ್ತು. ಇದಕ್ಕೂ ಮುನ್ನ ಮಾಡಲಾಗಿದ್ದ ಜನತಾ ಕರ್ಫ್ಯೂ ಭಾಷಣವನ್ನು 8.3 ಕೋಟಿ ಪ್ರೇಕ್ಷಕರು ವೀಕ್ಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.