World’s first; ಮಾ.1ರಂದು ಜಗತ್ತಿನ ಮೊದಲ ವೈದಿಕ ಗಡಿಯಾರ ಲೋಕಾರ್ಪಣೆ
Team Udayavani, Feb 27, 2024, 6:16 AM IST
ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜಗತ್ತಿನ ಮೊದಲ ವೈದಿಕ ಗಡಿಯಾರಕ್ಕೆ ಮಾ. 1ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಪ್ರಾಚೀನ ಭಾರತದ ಸಾಂಪ್ರದಾಯಿಕ ಪಂಚಾಂಗ ದಂತೆ ಈ ಗಡಿಯಾರ ಸಮಯ ತೋರಿಸಲಿದೆ.
ಉಜ್ಜಯಿನಿಯ ಸರಕಾರಿ ಜಿವಾಜಿ ವೀಕ್ಷಣಾ ಲಯದಲ್ಲಿ 85 ಅಡಿ ಎತ್ತರದ ಟವರ್‌ನಲ್ಲಿ ವೈದಿಕ ಗಡಿಯಾರ ಅಳವಡಿಸಲಾಗಿದೆ. ಗಡಿಯಾರವು ವೈದಿಕ ಹಿಂದೂ ಪಂಚಾಂಗ, ಗ್ರಹಗಳ ಸ್ಥಾನಗಳು, ಮುಹೂರ್ತ, ಜೋತಿಷ ಲೆಕ್ಕಾಚಾರ, ಭವಿಷ್ಯವಾಣಿ ಇತ್ಯಾದಿ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಜತೆಗೆ ಇದು ಭಾರತೀಯ ಪ್ರಮಾಣಿತ ಸಮಯ (ಐಎಸ್‌ಟಿ) ಮತ್ತು ಗ್ರೀನ್ವಿಚ್ ಸರಾಸರಿ ಸಮಯ(ಜಿಎಂಟಿ)ವನ್ನು ತೋರಿಸುತ್ತದೆ. ಒಂದು ಸೂರ್ಯೋದಯದಿಂದ ಇನ್ನೊಂದಕ್ಕೆ ಸೂರ್ಯೋದಯವನ್ನು ಆಧರಿಸಿ ಗಡಿಯಾರ ಸಮಯವನ್ನು ಲೆಕ್ಕಹಾಕುತ್ತದೆ.
“ಎರಡು ಸೂರ್ಯೋದಯಗಳ ನಡುವಿನ ಸಮಯವನ್ನು 30 ಭಾಗಗಳಾಗಿ ವಿಭಾಗಿಸಲಾಗುತ್ತದೆ. ಐಎಸ್‌ಡಿ ಪ್ರಕಾರ, ಈ 30 ಮಹೂರ್ತಗಳು ತಲಾ 48 ನಿಮಿಷಗಳದ್ದಾಗಿರುತ್ತದೆ. 300 ವರ್ಷಗಳ ಹಿಂದೆಯೇ ಉಜ್ಜಯಿನಿಯಿಂದಲೇ ಜಗತ್ತು ಕಾಲಮಾನವನ್ನು ನಿರ್ಧರಿಸುತ್ತಿತ್ತು. ಸಮಯ ತಿಳಿಯಲೆಂದೇ ಉಜ್ಜಯಿನಿಯಲ್ಲಿ ಒಂದು ಯಂತ್ರವೂ ಇತ್ತು ಎಂದು ತಜ್ಞರು ಹೇಳುತ್ತಾರೆ. ಕರ್ಕಾಟಕ ಸಂಕ್ರಾಂತಿ ವೃತ್ತವು ಉಜ್ಜಯಿನಿಯ ಮೂಲಕ ಹಾದುಹೋಗುತ್ತದೆ’ ಎಂದು ಮಹಾರಾಜ ವಿಕ್ರಮಾದಿತ್ಯ ಸಂಶೋಧನ ಕೇಂದ್ರದ ನಿರ್ದೇಶಕರಾದ ಶ್ರೀರಾಮ್ ತಿವಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.