ಮತ್ತಷ್ಟು ಕಂಗೊಳಿಸಲಿದೆ ಕೇದಾರನಾಥ
Team Udayavani, Oct 17, 2021, 5:55 AM IST
ಉತ್ತರಾಖಂಡ್ : 2013ರ ಮೇಘಸ್ಫೋಟದಿಂದ ಕೇದಾರನಾಥದಲ್ಲಿ ಮಹಾಪ್ರವಾಹ ಉಕ್ಕಿ ಹರಿದು ಅಲ್ಲಿರುವ ದೇಗುಲ ಬಿಟ್ಟು ಉಳಿದೆಲ್ಲಾ ಕಟ್ಟಡಗಳು, ಅಂಗಡಿಗಳು ನಾಶವಾಗಿತ್ತು. ಆನಂತರದಲ್ಲಿ ಆ ಪ್ರಾಂತ್ಯವನ್ನು ಪುನರ್ ನಿರ್ಮಿಸಲಾಗಿದೆಯಾದರೂ ಈಗ ಅದನ್ನು ಸರ್ವ ಸಂಪನ್ಮೂಲಗಳಿರುವ ಪ್ರಮುಖ ತೀರ್ಥಕ್ಷೇತ್ರವನ್ನಾಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.
ಈ ಯೋಜನೆಯ ಮೊದಲ ಹಂತದಲ್ಲಿ ನಿರ್ಮಿಸಲಾಗಿರುವ ಹಲವಾರು ಸೌಲಭ್ಯಗಳನ್ನು ನ. 5ರಂದು ಪ್ರಧಾನಿ ನರೇಂದ್ರ ಮೋದಿ, ಲೋಕಾರ್ಪಣೆ ಮಾಡಲಿದ್ದಾರೆ.
ಒಟ್ಟು 308 ಕೋಟಿ ರೂ. ಯೋಜನೆ
ಕೇದಾರನಾಥ ಧಾಮ್ ಯೋಜನೆಯಡಿ ಕೈಗೊಳ್ಳಲಾಗಿರುವ 180 ಕೋಟಿ ರೂ. ಮೊತ್ತದ ಮೊದಲ ಹಂತದ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು ಸದ್ಯದಲ್ಲೇ ಪೂರ್ಣಗೊಳ್ಳಲಿದೆ. 128 ಕೋಟಿ ರೂ. ಮೊತ್ತದ ಎರಡನೇ ಹಂತದ ಯೋಜನೆ ಸದ್ಯದಲ್ಲೇ ಆರಂಭಗೊಳ್ಳಲಿದೆ.
ಮೊದಲ ಹಂತದಲ್ಲಿ ಸಿಗುವ ಸೌಲಭ್ಯಗಳು
– ಕ್ಷೇತ್ರದ ಸನಿಹದಲ್ಲಿ ಹರಿಯುವ ಮಂದಾಕಿನಿ ನದಿಗೆ 60 ಮೀಟರ್ ಎತ್ತರದ ಸೇತುವೆ.
– ಧ್ಯಾನಕ್ಕೆ ಪ್ರಶಸ್ತವಾಗಿರುವ ಗುಹೆಗಳ ನಿರ್ಮಾಣ.
– ಸರಸ್ವತಿ ಘಾಟ್ ಅಭಿವೃದ್ಧಿ.
– ಶಂಕರಾಚಾರ್ಯ ಸಮಾಧಿ ಪುನರುತ್ಥಾನ. ಇದೇ ಜಾಗದಲ್ಲಿ ಅವರ ಪುತ್ಥಳಿ ನಿರ್ಮಾಣ.
– ಕ್ಷೇತ್ರದ ಹತ್ತಿರದಲ್ಲಿರುವ ರಾಮ್‌ಬನ್‌ನಿಂದ ಕೇದಾರನಾಥ ದೇಗುಲದವರೆಗೆ ರಸ್ತೆ ಮತ್ತು ಮೂಲಸೌಕರ್ಯ
ಮುಂಬರುವ ಸೌಲಭ್ಯಗಳು
– ಬ್ರಹ್ಮಕಮಲ ವಾಟಿಕಾ (ಹೂದೋಟ).
– ವಾಸುಕಿ ತಾಲ್‌ಗೆ ಹೋಗುವ ದಾರಿಯಲ್ಲಿ ವಸ್ತುಸಂಗ್ರಹಾಲಯ.
– ಸಿಬ್ಬಂದಿಗಳ ವಸತಿಗೃಹಗಳ ನವೀಕರಣ.
– ಯಾತ್ರಾರ್ಥಿಗಳ ವಾಹನಗಳಿಗೆ ಉತ್ತಮ ದರ್ಜೆಯ ಪಾರ್ಕಿಂಗ್ ಸೌಲಭ್ಯ.
ಅಂಕಿ-ಅಂಶ:
308 ಕೋಟಿ ರೂ.ಯೋಜನೆಯ ಒಟ್ಟು ಗಾತ್ರ
180 ಕೋಟಿ ರೂ.ಮೊದಲ ಹಂತದ ಯೋಜನೆಯ ಮೊತ್ತ
128 ಕೋಟಿ ರೂ.ಎರಡನೇ ಹಂತದ ಯೋಜನೆಯ ಮೊತ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.