ಸಾಮಾನ್ಯ ಮಳಿಗೆಯಲ್ಲಿ ಲಿಟ್ಟಿ-ಚೋಖಾ ಸವಿದ ಮೋದಿ!
Team Udayavani, Feb 19, 2020, 9:26 PM IST
ನವದೆಹಲಿ: ತಮಗೆ ನೀಡಲಾಗಿರುವ ಬಿಗಿಭದ್ರತೆಯ ನಡುವೆಯೂ ಆಗಾಗ ಶಿಷ್ಟಾಚಾರಗಳನ್ನು ಬದಿಗೊತ್ತಿ, ಜನರತ್ತ ಧಾವಿಸಿ ಅವರ ಕೈ ಕುಲುಕುವ, ಮಕ್ಕಳನ್ನು ಮಾತನಾಡಿಸುವ ಪ್ರಧಾನಿ ನರೇಂದ್ರ ಮೋದಿ ಆಗಾಗ ರಾಜಕೀಯೇತರ ಕಾರಣಗಳಿಗೂ ಸುದ್ದಿಯಾಗುವುದುಂಟು. ಬುಧವಾರವೂ ಹಾಗೇ ಆಗಿದೆ.
ಬೆಳಗ್ಗೆ ಸಂಪುಟ ಸಭೆಯ ನಂತರ, ದೆಹಲಿಯ ರಾಜ್ಪಥ್ ಬಳಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ “ಹುನಾರ್ ಹಾತ್’ ಎಂಬ ಕರಕುಶಲ ಮೇಳಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದ ಅವರು, ಮೇಳದಲ್ಲಿದ್ದ ಕುರುಕು ತಿಂಡಿಯ ಮಳಿಗೆಗೆ ತೆರಳಿ, ತಮಗಿಷ್ಟವಾದ ಉತ್ತರ ಪ್ರದೇಶದ ಖಾದ್ಯವಾದ “ಲಿಟ್ಟಿ-ಚೋಖಾ’ ಸವಿದು, ಮಣ್ಣಿನ ಕುಡಿಕೆಯಲ್ಲಿ ಚಹಾ ಕುಡಿದರು.
50 ನಿಮಿಷಗಳ ಕಾಲ ಅಲ್ಲಿಯೇ ಕಾಲ ಕಳೆದ ಅವರು, ಅಲ್ಲಿದ್ದ ಇತರ ಮಳಿಗೆಗಳ ಮಾಲೀಕರ ಜೊತೆಗೆ ಮಾತುಕತೆ ನಡೆಸಿದರಲ್ಲದೆ ಹಲವರ ಸೆಲ್ಫಿಗೆ ಮುಖವೊಡ್ಡಿದರು. ನಂತರ, ಅಂಗಡಿಯಾತನಿಗೆ ತಾವು ತಿಂದ ತಿಂಡಿಗೆ ಆಗಿದ್ದ 120 ರೂ. ಬಿಲ್ ಹಣ ಪಾವತಿಸಿ, ಆತನಿಗೊಂದು ಧನ್ಯವಾದ ಹೇಳಿ ಮುನ್ನಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.