ನಾಳೆ ಪ್ರಧಾನಿ ಮೋದಿಯವರಿಂದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
Team Udayavani, Dec 10, 2022, 1:07 PM IST
ಪಣಜಿ: ಗೋವಾದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾನುವಾರ ಡಿಸೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಈ ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಅವರು ನವೆಂಬರ್ 2016 ರಲ್ಲಿ ನೆರವೇರಿಸಿದ್ದರು. ಮೂಲಸೌಕರ್ಯ ಕೇಂದ್ರಿತ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವನ್ನು ಮೊದಲ ಹಂತದಲ್ಲಿ ಸುಮಾರು 2,870 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿದೆ. ಮೋಪಾ ವಿಮಾನ ನಿಲ್ದಾಣವು ವರ್ಷಕ್ಕೆ 4.4 ಮಿಲಿಯನ್ ಪ್ರಯಾಣಿಕರ ಸಾಮಥ್ರ್ಯವನ್ನು ಹೊಂದಿರುತ್ತದೆ. ನಂತರದಲ್ಲಿ ಈ ಸಾಮಥ್ರ್ಯ 33 ಮಿಲಿಯನ್‍ಗೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸೌರ ವಿದ್ಯುತ್ ಸ್ಥಾವರಗಳು, ಪರಿಸರ ಸ್ನೇಹಿ ಕಟ್ಟಡಗಳು, ರನ್ವೇಗಳಲ್ಲಿ ಎಲ್‍ಇಡಿ ದೀಪಗಳು, ಮಳೆನೀರು ಮರುಬಳಕೆ ವ್ಯವಸ್ಥೆ, ಅತ್ಯಾಧುನಿಕ ಒಳಚರಂಡಿ, ಸಂಸ್ಕರಣಾ ಘಟಕ ಇತ್ಯಾದಿಗಳನ್ನು ಹೊಂದಿದೆ.
ಈ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ, ಮೂರು ಆಯಾಮದ ಪ್ರಿಕಾಸ್ಟ್ ಬಿಲ್ಡಿಂಗ್, ಸ್ಟೇಬಿಲ್ರೋಡ್, ರೋಬೋಟಿಕ್ ಹಾಲೋ ಪ್ರಿಕಾಸ್ಟ್ ಗೋಡೆಗಳು, 5ಜಿ ಕಂಪ್ಲೈಂಟ್ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯಗಳಂತಹ ಅತ್ಯುತ್ತಮ ಗುಣಮಟ್ಟದ ವಿಶೇಷ ತಂತ್ರಜ್ಞಾನಗಳನ್ನು ಬಳಸಲಾಗಿದೆ.
ವಿಮಾನ ನಿಲ್ದಾಣದ ಇತರ ವೈಶಿಷ್ಟ್ಯಗಳೆಂದರೆ ವಿಶ್ವದ ಅತಿದೊಡ್ಡ ವಿಮಾನ ನಿರ್ವಹಣಾ ರನ್‍ವೇ, ವಿಮಾನಗಳ ರಾತ್ರಿ ಪಾರ್ಕಿಂಗ್‌ಗಾಗಿ ವಿಶೇಷ ವ್ಯವಸ್ಥೆಗಳೊಂದಿಗೆ 14 ಪಾರ್ಕಿಂಗ್ ಬೇ ಗಳು, ಸ್ವಯಂ-ಬ್ಯಾಗೇಜ್ ಡ್ರಾಪ್ ಸೌಲಭ್ಯ, ಅತ್ಯಾಧುನಿಕ ಮತ್ತು ಸ್ವಾಯತ್ತ ಏರ್ ನ್ಯಾವಿಗೇಷನ್ ಸೌಲಭ್ಯಗಳನ್ನು ಒಳಗೊಂಡಿದೆ.
ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಸುದ್ಧಿಗಾರರಿಗೆ ನೀಡಿದ ಮಾಹಿತಿ ಅನುಸಾರ ಪ್ರಧಾನಿ ಮೋದಿ ಭಾನುವಾರ ಮಧ್ಯಾಹ್ನ ಮೋಪಾ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ನಂತರ 9ನೇ ವಿಶ್ವ ಆಯುರ್ವೇದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 9ನೇ ವಿಶ್ವ ಆಯುರ್ವೇದ ಸಮಾವೇಶ ಮತ್ತು ಆರೋಗ್ಯ ಎಕ್ಸ್‌ಪೋದಲ್ಲಿ ವಿಶ್ವದ 50 ದೇಶಗಳಿಂದ 400 ಕ್ಕೂ ಹೆಚ್ಚು ಪ್ರತಿನಿಧಿಗಳು, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಆಯುರ್ವೇದ ವಿಷಯಕ್ಕೆ ಸಂಬಂಧಿಸಿದ ಇತರರು ಭಾಗವಹಿಸಲಿದ್ದಾರೆ. ಆ ಬಳಿಕ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉಧ್ಘಾಟನೆ ನೆರವೇರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.