ನಮ್ಮ ಜನಪರ ಕೆಲಸವನ್ನು ಕೋಮುವಾದ ಎನ್ನುವವರು ದೇಶವನ್ನು ವಿಭಜಿಸುತ್ತಿದ್ದಾರೆ : ಮೋದಿ
Team Udayavani, Apr 3, 2021, 4:36 PM IST
ಅಸ್ಸಾಂ : ದೇಶದ ಜನರ ಸೇವೆ ಮಾಡುವುದನ್ನು ಕೋಮುವಾದ ಎಂದು ಬಣ್ಣಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಅಸ್ಸಾಂ ನ ತಮುಲ್ಪುರ್ ನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ ಪ್ರದಾನಿ, ಬಿಜೆಪಿ ದೇಶದ ಜನರ ಸೇವೆ ಮಾಡುತ್ತಿದೆ. ಅದನ್ನು ಕೆಲವರು ಕೋಮುವಾದ ಎಂದು ಹೇಳುತ್ತಿದ್ದಾರೆ. ನಾವು ದೇಶದ ಎಲ್ಲಾ ಜನರಿಗೆ ಕೆಲಸ ಮಾಡಿದರೆ ಅದನ್ನು ಕೋಮುವಾದ ಎಂದು ಕರೆಯುತ್ತಿದ್ದಾರೆ. ಹಾಗೆ ಹೇಳುವವರು ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ಅವರು ಗುಡುಗಿದ್ದಾರೆ.
ಓದಿ : ಮಂಜೇಶ್ವರದಲ್ಲಿ ಎಡರಂಗ ಹಾಗೂ ಬಿಜೆಪಿ ಒಳ ಒಪ್ಪಂದ: ಮುಲ್ಲಪಳ್ಳಿ ರಾಮಚಂದ್ರನ್
ಈ ಬಾರಿ ದೇಶ 75ನೇ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಈ ಬಾರಿ ನೀವು ನಮಗೆ ಚಲಾಯಿಸುವ ಮತಗಳು 100 ನೇ ವರ್ಷ ಸ್ವಾತಂತ್ರ್ಯವನ್ನು ಆಚರಿಸುವಾಗ ಅಸ್ಸಾಂ ಎಷ್ಟು ಪ್ರಗತಿ ಸಾಧಿಸಿದೆ ಎಂಬುವದನ್ನು ತಿಳಿಸುತ್ತದೆ.
ಅಸ್ಸಾಂನಲ್ಲಿ ಟೀ ಗಾರ್ಡನ್ ನಿರ್ಮಿಸಲು ಕೇಂದ್ರ ಬಜೆಟ್ ನಲ್ಲಿ 1000 ಕೋಟಿ ಹೊರಡಿಸಲಾಗಿದೆ. ಎಲ್ಲರ ಜೊತೆಯಲ್ಲಿ ಎಲ್ಲರ ಅಭಿವೃದ್ಧಿ ಹಾಗೂ ಎಲ್ಲರ ವಿಶ್ವಾಸ ನಮ್ಮ ಮೂಲ ಮಂತ್ರವಾಗಿದೆ. ಅಸ್ಸಾಂನ ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಕೇಂದ್ರವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇನ್ನು, ಅಸ್ಸಾಂನ ಉಗ್ರರಿಗೆ ಶರಣಾಗುವಂತೆ ಮನವಿ ಮಾಡಿದ್ದು, ಇದುವರೆಗೂ ಯಾರು ಶರಣಾಗಿಲ್ಲ ಅವರು ಶರಣಾಗಿ ಮುಖ್ಯವಾಹಿನಿಗೆ ಬಂದು ಆತ್ಮನಿರ್ಭರ್ ಅಸ್ಸಾಂ ರೂಪಿಸುವ ಅಗತ್ಯವಿದೆ ಎಂದಿದ್ದಾರೆ.
ಬಂದೂಕು ಹಿಡಿದು ನಿಮ್ಮ ಮಕ್ಕಳು ಕಾಡಿನಲ್ಲಿ ಜೀವನ ಮಾಡಬೇಕಿಲ್ಲ. ಯಾರದೋ ಗುಂಡಿಗೆ ಬಲಿಯಾಗಬೇಕಿಲ್ಲ. ನಿಮ್ಮ ಮಕ್ಕಳ ಕನಸನ್ನು ಈಡೇರಿಸುವುದಾಗಿ ಅಸ್ಸಾಂ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಭರವಸೆ ನೀಡುತ್ತೇನೆ. ಇದಕ್ಕೆ ಎನ್ ಡಿ ಎ ಸರ್ಕಾರ ಬದ್ಧವಾಗಿದೆ ಅವರು ಹೇಳಿದ್ದಾರೆ.
Addressing a rally in Tamulpur. Watch. https://t.co/sBxRPPVF2c
— Narendra Modi (@narendramodi) April 3, 2021
ಓದಿ : ರಾಷ್ಟ್ರಪತಿ ಕೋವಿಂದ್ ಆರೋಗ್ಯದಲ್ಲಿ ಚೇತರಿಕೆ-ಐಸಿಯುನಿಂದ ವಿಶೇಷ ವಾರ್ಡ್ ಗೆ ಶಿಫ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.