ರಾಹುಲ್ SCAMವ್ಯಾಖ್ಯಾನದಲ್ಲಿ “ಸೇವೆ’ ಇದೆಯಾ:ಪ್ರಧಾನಿ ಮೋದಿ ಪ್ರಶ್ನೆ
Team Udayavani, Feb 7, 2017, 3:11 PM IST
ಹೊಸದಿಲ್ಲಿ : ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ಮತ್ತು ದೇಶದಲ್ಲಿನ ಭ್ರಷ್ಟಾಚಾರ ಮತ್ತು ಕಪ್ಪು ಹಣಕ್ಕೆ ಲಗಾಮು ಹಾಕಲು 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳ ಅಪನಗದೀಕರಣದಂತಹ ದಿಟ್ಟ ಹೆಜ್ಜೆ ಅನಿವಾರ್ಯವಾಗಿತ್ತು; ಅಂತೆಯೇ ದೇಶದ ಭದ್ರತೆಗಾಗಿ ಸರ್ಜಿಕಲ್ ದಾಳಿ ಕೂಡ ಅಗತ್ಯವಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಿ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ಕ್ಯಾಮ್ ಗೆ ನೀಡಿದ್ದ “ಸೇವೆ, ಆತ್ಮವಿಶ್ವಾಸ, ಸಾಮರ್ಥ್ಯ ಮತ್ತು ನಮ್ರತೆ’ ಯ ವ್ಯಾಖ್ಯಾನಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಡೆಸಿರುವ ಸ್ಕ್ಯಾಮ್‌ಗಳಲ್ಲಿ ಸೇವೆ ಎಂಬುದು ಇದೆಯೇ ? ಅವುಗಳಲ್ಲಿ ಸೇವೆಯನ್ನು ಕಾಣುವುದಾದರೂ ಹೇಗೆ ? ಎಂದು ಪ್ರಶ್ನಿಸಿದರಲ್ಲದೆ, ಕಾಂಗ್ರೆಸ್ ಪಕ್ಷ ದೇಶವನ್ನೇ ಲೂಟಿ ಮಾಡಿದೆ ಎಂದು ಆರೋಪಿಸಿದರು.
ತಮ್ಮ ಸರಕಾರದ ಪ್ರತಿಯೊಂದು ಕ್ರಾಂತಿಕಾರಕ ಕ್ರಮವನ್ನು ಟೀಕಿಸುವ ಪ್ರವೃತ್ತಿಯನ್ನೇ ರೂಢಿಸಿಕೊಂಡಿರುವ ವಿರೋಧ ಪಕ್ಷಗಳ ಮೇಲೆ ಚಾಟಿ ಬೀಸಿದ ಪ್ರಧಾನಿ ಮೋದಿ, ಹೊಸ ಭರವಸೆಯೆಡೆಗೆ ದೇಶವನ್ನು ಒಯ್ತುವ ಕೇಂದ್ರದ ಕ್ರಮಗಳನ್ನು ಸಮರ್ಥಿಸಿಕೊಂಡರು.
ತಾನು ಮಾತನಾಡಿದರೆ ಸಂಸತ್ತಿನಲ್ಲಿ ಭೂಕಂಪ ಉಂಟಾಗುತ್ತದೆ ಎಂಬ ಮಾತನ್ನು ಈ ಹಿಂದೆ ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಮೋದಿ, ಸ್ಕ್ಯಾಮ್ ಬಗ್ಗೆ ರಾಹುಲ್ ಮಾಡಿರುವ ವ್ಯಾಖ್ಯಾನಕ್ಕೆ ತಿರುಗೇಟು ನೀಡಿ ಕಟಕಿಯಾಡಿದರು.
“ದೇಶಕ್ಕೆ ಸ್ವಾತಂತ್ರ್ಯವನ್ನು ಒಂದು ಕುಟುಂಬದಿಂದ ಬಂದಿಲ್ಲ; ಅದು ಅನೇಕರ ಬಲಿದಾನದ ಫಲವಾಗಿ ಲಭಿಸಿದೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ದೇಶಕ್ಕೆ ದಕ್ಕಿರುವ ಸ್ವಾತಂತ್ರ್ಯಕ್ಕೆ ದೇಶದ ಜನತೆ ಒಂದು ಕುಟುಂಬಕ್ಕೆ ಸದಾ ಋಣಿಯಾಗಿರಬೇಕು ಎಂದು ಹೇಳುವ ಉದ್ಧಟತನ ತೋರುತ್ತಿದೆ’ ಎಂದು ಮೋದಿ ಪರೋಕ್ಷವಾಗಿ ಗಾಂಧಿ ಕುಟುಂಬವನ್ನು ಟೀಕಿಸಿದರು.
ಬಿಜೆಪಿಯಿಂದ ಒಂದು ನಾಯಿಯಾದರೂ ದೇಶಕ್ಕೆ ಬಲಿದಾನ ನೀಡಿದೆಯೇ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯನ್ನು ಟೀಕಿಸಿ ಮಾತನಾಡಿದ ಮೋದಿ, ದೇಶದ ಜನರು ನಾಯಿ ಸಂಸ್ಕೃತಿಯಲ್ಲಿ ಬೆಳೆದು ಬಂದವರಲ್ಲ; ಕಾಂಗ್ರೆಸ್ ಪಕ್ಷ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾತುತ್ತಿದೆ. ಕಾಂಗ್ರೆಸ್‌ಗೆ ಬಡವರಿಗಿಂತಲೂ ಮಿಗಿಲಾಗಿ ಚುನಾವಣೆಯ ಬಗ್ಗೆಯೇ ಚಿಂತೆ ಇದೆ’ ಎಂದು ಮೋದಿ ವಾಕ್ ದಾಳಿ ನಡೆಸಿದರು.
ನೋಟು ಅಪನಗದೀಕರಣ ಬಗ್ಗೆ ಸರಕಾರ ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧವಿತ್ತು. ಆದರೆ ವಿರೋಧ ಪಕ್ಷಗಳು ಒಂದು ದಿನವೂ ಅದಕ್ಕೆ ಅವಕಾಶ ನೀಡದೆ ಬರೀ ಗದ್ದಲ ನಡೆಸಿ ಅತ್ಯಮೂಲ್ಯ ಸಂಸತ್ ಕಲಾಪವನ್ನು ಹಾಳುಗೆಡಹಿದವು ಎಂದು ಮೋದಿ ಟೀಕಿಸಿದರು.
ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಸರಕಾರ ನೋಟು ನಿಷೇಧದ ಕ್ರಮಕೈಗೊಂಡಿರುವಂತೆಯೇ ಇನ್ನು ಬೇನಾಮಿ ಆಸ್ತಿ ಹೊಂದಿರುವವರ ವಿರುದ್ಧ ಕಠಿನ ಕ್ರಮತೆಗೆದುಕೊಳ್ಳಲಿದೆ; ಸಾಲ ಮಾಡಿದವರು ಸಾಲ ತೀರಿಸಲೇಬೇಕು; ಬೇನಾಮಿ ವ್ಯವಹಾರವು ಕಪ್ಪುಹಣದ ಬೃಹತ್ ಮೂಲವಾಗಿರುವುದರಿಂದ ಸರಕಾರ ಅದರ ವಿರುದ್ಧ ನಿಷ್ಠುರವಾಗಿ ವ್ಯವಹರಿಸಲಿದೆ ಎಂಬ ಎಚ್ಚರಿಕೆಯನ್ನು ಮೋದಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Rajasthan:ಪೊಲೀಸ್ ಭದ್ರತೆಗೆ ಆದ 9 ಲಕ್ಷ ರೂ.ಬಿಲ್ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.