2.30ಲಕ್ಷ ಗ್ರಾಮ ಬಯಲು ಶೌಚ ಮುಕ್ತ: ಪ್ರಧಾನಿ
Team Udayavani, Aug 28, 2017, 6:55 AM IST
ನವದೆಹಲಿ: ದೇಶದ 2.30 ಲಕ್ಷ ಗ್ರಾಮಗಳು ಈಗ ಬಯಲು ಶೌಚ ಮುಕ್ತವಾಗಿದ್ದು, ಜನಸಂಖ್ಯೆಯ ಶೇ.67ರಷ್ಟು ಮಂದಿ ಶೌಚಾಲಯ ಹೊಂದಿದ್ದಾರೆ. ಗಾಂಧಿ ಜಯಂತಿಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರೆಲ್ಲ “ಸ್ವತ್ಛತೆಯೇ ಸೇವೆ’ ಎಂಬ ಅಭಿಯಾನ ಆರಂಭಿಸಬೇಕು. ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ.
ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಅವರು ಈ ರೀತಿ ಕರೆ ನೀಡಿದ್ದಾರೆ. ಜತೆಗೆ, ಜನಧನ ಖಾತೆ ಯೋಜನೆಯಿಂದ 30 ಕೋಟಿ ಕುಟುಂಬಗಳು ಪ್ರಯೋಜನ ಪಡೆದುಕೊಂಡಿವೆ. ಒಟ್ಟು 65 ಸಾವಿರ ಕೋಟಿ ರೂ. ಠೇವಣಿ ಇಡಲಾಗಿದೆ ಎಂದೂ ಹೇಳಿದ್ದಾರೆ. ಪ್ರಧಾನಿ 30 ನಿಮಿಷದ ತಮ್ಮ ಮಾತುಗಳಲ್ಲಿ ದೇಶದ ವೈವಿಧ್ಯತೆ, ಶಿಕ್ಷಕರ ದಿನಾಚರಣೆಯನ್ನು ಔಚಿತ್ಯಪೂರ್ಣವಾಗಿ ಆಚರಿಸುವಂತೆಯೂ ಕರೆ ನೀಡಿದ್ದಾರೆ.
ಅಲ್ಲದೆ, ಗುಜರಾತ್‌ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ 22 ದೇವಾಲಯಗಳು ಹಾಗೂ 2 ಮಸೀದಿಗಳ ಸ್ವತ್ಛತೆ ಕಾರ್ಯ ಕೈಗೊಂಡ ಜಮೀಯತ್ ಉಲ್ ಉಲೇಮಾ ಇ ಹಿಂದ್ ಎಂಬ ಮುಸ್ಲಿಂ ಸಂಘಟನೆಯನ್ನು ಮೋದಿ ಶ್ಲಾ ಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.