ಡೀಸಿಲ್ನಿಂದ ಇಲೆಕ್ಟ್ರಿಕ್ ಪರಿವರ್ತಿತ ಲೋಕೋಮೋಟೀವ್: PM ಚಾಲನೆ
Team Udayavani, Feb 19, 2019, 6:08 AM IST
ವಾರಾಣಸಿ : ತಮ್ಮ ಲೋಕಸಭಾ ಕ್ಷೇತ್ರದಲ್ಲಿನ ಡೀಸಿಲ್ ಲೋಕೋಮೋಟಿವ್ ವರ್ಕ್ಸ್ (ಡಿಎಲ್ಡಬ್ಲ್ಯು) ನಲ್ಲಿ ಡೀಸಿಲ್ ಇಂಜಿನ್ ನಿಂದ ವಿದ್ಯುತ್ತಿಗೆ ಪರಿವರ್ತಿಸಲ್ಪಟ್ಟ ಇಲೆಕ್ಟ್ರಿಕ್ ಲೋಕೋಮೋಟೀವ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಹಸಿರು ನಿಶಾನೆ ತೋರಿಸಿದರು.
ದೇಶದಲ್ಲಿನ ಬ್ರಾಡ್ ಗೇಜ್ ನೆಟ್ವರ್ಕನ್ನು ಸಂಪೂರ್ಣವಾಗಿ ವಿದ್ಯುದೀಕರಿಸುವ ಪ್ರಯತ್ನದ ಭಾಗವಾಗಿ ಭಾರತೀಯ ರೈಲ್ವೇ ಇದೇ ಮೊದಲ ಬಾರಿಗೆ ಡೀಸಿಲ್ ಲೋಕೋಮೋಟೀವ್ ಅನ್ನು ವಿದ್ಯುತ್ತಿಗೆ ಪರಿವರ್ತಿಸಿದೆ.
ಇಂದು ಮಂಗಳವಾರ ವಾರಾಣಸಿಗೆ ಬಂದು ಇಳಿದೊಡನೆಯೇ ಪ್ರಧಾನಿ ಮೋದಿ ಅವರು ಮೊತ್ತ ಮೊದಲಾಗಿ ಡಿಎಲ್ಡಬ್ಲ್ಯು ತಲುಪಿ ಇಲೆಕ್ಟ್ರಿಲ್ ಲೋಕೋಮೋಟೀವ್ ಗೆ ಹಸಿರು ನಿಶಾನೆ ತೋರಿದರು; ಬಳಿಕ ಇಂಜಿನ್ ಒಳಭಾಗವನ್ನು ತಾವೇ ಖುದ್ದು ಪರಿಶೀಲಿಸಿದರು.
2017ರ ಡಿ.22ರಂದು ದೇಶದ ಮೊತ್ತ ಮೊದಲ ಈ ಪರಿವರ್ತನೆ ಯೋಜನೆಯನ್ನು ಆರಂಭಿಸಲಾಗಿತ್ತು. ಕೇವಲ 69 ದಿನಗಳ ಒಳಗೆ ಮೊದಲ ಪರಿವರ್ತಿತ ಲೋಕೋಮೋಟೀವ್ ಇಂಜಿನ್ ಸಿದ್ಧಗೊಂಡಿರುವುದು ಒಂದು ಸಾಧನೆಯೇ ಆಗಿದೆ.
ಮೋದಿ ಅವರಿಂದು ಇಲ್ಲಿ ಸಂತ ರವಿದಾಸ ದೇವಸ್ಥಾನಕ್ಕೆ ಭೇಟಿಕೊಟ್ಟು ಭಕ್ತಿ ಚಳವಳಿಯ ಮಹಾನ್ ಸಂತನ ಜನ್ಮ ವರ್ಷಾಚರಣೆಯಲ್ಲಿ ಭಾಗವಹಿಸುವರು ಮತ್ತು ಸಂಜೆಯ ವೇಳೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.