ಮೋದೀದ್ದು ಗಾಂಧಿಗಿಂತಲೂ ದೊಡ್ಡ ಬ್ರ್ಯಾಂಡ್ ನೇಮ್: ಹರಿಯಾಣ ಸಚಿವ
Team Udayavani, Jan 14, 2017, 4:01 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿ ಗಿಂತಲೂ ದೊಡ್ಡ ಬ್ರ್ಯಾಂಡ್ ನೇಮ್ ಎಂದು ಹೇಳುವ ಮೂಲಕ ಹರಿಯಾಣ ಸಚಿವ ಅನಿಲ್ ವಿಜ್ ಅವರು ಭಾರೀ ವಿವಾದವನ್ನು ಸೃಷ್ಟಿಸಿದ್ದಾರೆ.
ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಆಯೋಗ (ಕೆವಿಐಸಿ)ದ ಡೈರಿ ಮತ್ತು ಕ್ಯಾಲೆಂಡರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಪೋಸ್‌ನಲ್ಲಿ ದೊಡ್ಡ ಚರಕರದ ಮುಂದೆ ಕುಳಿತು ನೂಲುತ್ತಿರುವ ಚಿತ್ರವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ರಾಜಕೀಯ ವಿವಾದಕ್ಕೆ ಸಚಿವ ಅನಿಲ್ ವಿಜ್ ಅವರು ಹೊಸ ತಿರುವು ಕೊಟ್ಟು ಉರಿಯುತ್ತಿರುವ ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹರಿಯಾಣದಲ್ಲಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಅನಿಲ್ ವಿಜ್ ಅವರು ತಮ್ಮ ಹೇಳಿಕೆಯಲ್ಲಿ “ಮಹಾತ್ಮ ಗಾಂಧಿ ಅವರ ಹೆಸರನ್ನು ಜೋಡಿಸಿಕೊಂಡಂದಿನಿಂದ ಖಾದಿ ಉತ್ಪನ್ನಗಳು ದೇಶದಲ್ಲಿ ಏಳಿಗೆಯನ್ನೇ ಕಂಡಿಲ್ಲ’ ಎಂದು ಹೇಳಿದ್ದಾರೆ.
“ಮಹಾತ್ಮ ಗಾಂಧಿ ಹೆಸರಿನಲ್ಲಿ ಖಾದಿ ಪೇಟೆಂಟ್ ಆಗಿಲ್ಲ; ಖಾದಿಯೊಂದಿಗೆ ಮೋದಿ ಗುರುತಿಸಿಕೊಂಡ ಬಳಿಕ ದೇಶದಲ್ಲಿ ಖಾದಿ ಉತ್ಪನ್ನಗಳ ಮಾರಾಟ ಶೇ.14ರಷ್ಟು ಹೆಚ್ಚಾಗಿದೆ. 2017ರ ಕೆವಿಐಸಿ ಕ್ಯಾಲೆಂಡರ್ ಮತ್ತು ಡೈರಿಯಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಕಂಡು ಬಂದಿರುವುದು ಸರಿಯಾಗಿಯೇ ಇದೆ; ಏಕೆಂದರೆ ಮೋದಿ ಬ್ರ್ಯಾಂಡ್ ನೇಮ್ ಗಾಂಧಿಗಿಂತಲೂ ದೊಡ್ಡದಿದೆ’ ಎಂದು ವಿಜ್ ಹೇಳಿದರು.
ಭಾರತೀಯ ನೋಟುಗಳ ಮೇಲೆ ಗಾಂಧಿ ಚಿತ್ರ ಮೂಡಿದಂದಿನಿಂದಲೇ ನೋಟುಗಳ ಅಪಮೌಲ್ಯ ಆರಂಭವಾಗಿದೆ ಎಂದು ಸಚಿವ ವಿಜ್ ಹೇಳಿದರು. “ಹಾಗಿದ್ದರೆ ಹೊಸ ನೋಟುಗಳ ಮೇಲೆ ಮೋದಿ ಸರಕಾರ ಗಾಂಧಿ ಚಿತ್ರವನ್ನು ಏಕೆ ಮುಂದುವರಿಸಿದೆ?’ ಎಂಬ ಪ್ರಶ್ನೆಗೆ ಸಚಿವ ವಿಜ್, ಸದ್ಯದಲ್ಲೇ ನಮ್ಮ ನೋಟುಗಳ ಮೇಲಿನ ಗಾಂಧಿ ಚಿತ್ರ ಕಣ್ಮರೆಯಾಗಲಿವೆ ಎಂದು ಹೇಳಿದರು.
ಸಚಿವ ವಿಜ್ ಅವರ ಈ ಎಲ್ಲ ಹೇಳಿಕೆಗಳನ್ನು ಬಿಜೆಪಿಯು “ವಿಜ್ ಅವರ ವೈಯಕ್ತಿಕ ಅಭಿಪ್ರಾಯಗಳಾಗಿವೆಯೇ ಹೊರತು ಪಕ್ಷದ್ದಲ್ಲ’ ಎಂದು ನೇರವಾಗಿ ಹೇಳುವ ಮೂಲಕ ವಿವಾದದಿಂದ ಕೈತೊಳೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.