ಪಿಎನ್‌ಬಿ ಹಗರಣ:ನೀರವ ಮೌನ;ಕೊಠಾರಿ ಸೆರೆ
Team Udayavani, Feb 23, 2018, 9:47 AM IST
ಮುಂಬಯಿ/ಹೊಸದಿಲ್ಲಿ: ವಂಚಿಸಿ ಹೊತ್ತೂಯ್ದಿರುವ ಸಾಲವನ್ನು ಮರು ಪಾ ವತಿ ಮಾಡಲು ಯಾವ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೀರಿ ಎಂಬ ಬಗ್ಗೆ ಮೊದಲು ಉತ್ತರಿಸಿ ಎಂದು 11,400 ಕೋಟಿ ರೂ.ಗಳ ಹಗರಣದ ಸರದಾರ ನೀರವ್ ಮೋದಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಡಕ್ಕಾಗಿ ಪ್ರಶ್ನಿಸಿದೆ.
ಅಲ್ಲದೆ ಬ್ಯಾಂಕಿನ ದೂರಿನ ಸಂಬಂಧ ನೀರವ್ ಮೋದಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‌ಗೆ ಉತ್ತರಿಸುವಲ್ಲಿ ಆತ ವಿಫಲವಾಗಿದ್ದು, ಮತ್ತೂಂದು ಸಮನ್ಸ್ ಜಾರಿ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ನಡು ವೆಯೇ ಬ್ಯಾಂಕುಗಳಿಗೆ 3,695 ಕೋಟಿ ರೂ. ಸಾಲ ಮರುಪಾವತಿ ಮಾಡದೇ ತಪ್ಪಿಸಿಕೊಂಡು ಓಡಾಡುತ್ತಿದ್ದ ವಿಕ್ರಮ್ ಕೊಠಾರಿ ಮತ್ತು ಪುತ್ರ ರಾಹುಲ್‌ರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಉದ್ಯಮಿ ನೀರವ್ ಕಡೆಯಿಂದ ವಶಪಡಿಸಿಕೊಳ್ಳಲಾಗಿರುವ ಐಶಾರಾಮಿ ಕಾರುಗಳು.
ಪಿಎನ್‌ಬಿ ದೂರಿದ್ದ ನೀರವ್‌ಗೆ ಪ್ರತ್ಯುತ್ತರ
ಕೆಲವೇ ದಿನಗಳ ಹಿಂದೆ ಸಾಲದ ಮೊತ್ತವನ್ನು ಮಾಧ್ಯಮದೆದುರು ವಿಪರೀತವಾಗಿ ಹೆಚ್ಚಿಸಿ ಹೇಳುವ ಮೂಲಕ ಸಾಲ ಮರುಪಾವತಿಯ ದಾರಿಗಳನ್ನು ನೀವೇ ಮುಚ್ಚಿಕೊಂಡಿದ್ದೀರಿ ಎಂದು ಆರೋಪಿಸಿದ್ದ ನೀರವ್ ಮೋದಿಗೆ ಪಿಎನ್‌ಬಿ ತೀಕ್ಷ್ಣ ಪ್ರತ್ಯುತ್ತರ ನೀಡಿದೆ. ಅಲ್ಲದೆ ಹಣ ಮರುಪಾವತಿಯ ಬಗ್ಗೆ ಸುಸ್ಥಿರ ವಿಧಾನಗಳಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದೂ ನೀರವ್‌ಗೆ ಸೂಚಿಸಿದೆ. ಕಾನೂನು ಕ್ರಮಗಳ ಮೂಲಕ ಮರುಪಾವತಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅಲ್ಲದೆ ಕಾನೂನು ಪ್ರಕಾರ ವಸೂಲಾತಿಗೆ ಸಾಕಷ್ಟು ಸ್ವತ್ತುಗಳೂ ಇವೆ ಎಂದು ಪಿಎನ್‌ಬಿ ಹೇಳಿದೆ.
ಐಷಾರಾಮಿ ಕಾರುಗಳ ಜಪ್ತಿ
ನೀರವ್ ಮೋದಿ ಹಾಗೂ ಮಾವ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ ಐಷಾರಾಮಿ ಕಾರು ಸೇರಿದಂತೆ ಹಲವು ಸ್ವತ್ತುಗಳನ್ನು ಗುರುವಾರ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ರೋಲ್ಸ್‌ರಾಯ್ಸ ಘೋಸ್ಟ್, ಮರ್ಸಿಡಿಸ್ ಬೆಂಜ್, ಪೋರ್ಶೆ ಪನಾಮೆರಾ, ಟೊಯೊಟಾ ಫಾರ್ಚೂನರ್, ಟೊಯೊಟಾ ಇನ್ನೋವಾ, ಎರಡು ಮರ್ಸಿಡಿಸ್ ಬೆಂಜ್ ಮತ್ತು ಮೂರು ಹೋಂಡಾ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ನೀರವ್ ಮೋದಿಯ 7.80 ಕೋಟಿ ರೂ. ಹಾಗೂ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ 86.72 ಕೋಟಿ ರೂ. ಮೌಲ್ಯದ ಮ್ಯೂಚುವಲ್ ಫಂಡ್‌ಗಳು ಹಾಗೂ ಷೇರುಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಗುರುವಾರ ಜಪ್ತಿ ಮಾಡಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 100 ಕೋಟಿ ರೂ. ಆಗಿದೆ.
ಈ ನಡುವೆ, ನೀರವ್ ಮೋದಿ ಭಾರತಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ… ಹೀಗೆಂದು ಹೇಳಿದ್ದು ನೀರವ್ ಮೋದಿ ನೇತೃತ್ವದ ಫೈರ್‌ಸ್ಟಾರ್ ಕಂಪೆನಿ ಕೆಲ ಸ ಗಾರ ಅರ್ಜುನ್ ಪಾಟೀಲ್‌ನ ಪತ್ನಿ ಸುಜಾತಾ ಪಾಟೀಲ್. ಅರ್ಜುನ್ ಎಲ್‌ಒಯು ನಮೂನೆಗಳನ್ನು ಭರ್ತಿ ಮಾಡುತ್ತಿದ್ದುದರಿಂದಾಗಿ ಸಿಬಿಐ ಬಂಧಿಸಿದೆ. ಅರ್ಜುನ್ ತಿಂಗಳ 30 ಸಾವಿರ ರೂ. ಸಂಬಳ ಪಡೆಯುತ್ತಿದ್ದ. ಒಂದು ರೂಪಾಯಿಯೂ ಹೆಚ್ಚಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಯಾವ ಅಕ್ರಮವನ್ನೂ ಅರ್ಜುನ್ ನಡೆಸಿಲ್ಲ ಎಂದಿದ್ದಾರೆ ಸುಜಾತಾ.
ಇ-ಮೇಲ್‌ಗೆ ನೋಟಿಸ್
ನೀರವ್ ಪಾಸ್‌ಪೋರ್ಟ್‌ಅನ್ನು ರದ್ದುಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಇ-ಮೇಲ್ ವಿಳಾಸಕ್ಕೆ ಇಮೇಲ್ ಕಳುಹಿಸಲಾಗಿದೆ. ಅಲ್ಲದೆ ಭೌತಿಕ ವಿಳಾಸಕ್ಕೂ ನೋಟಿಸ್ ಕಳುಹಿಸಲಾಗಿದೆ. ಇ-ಮೇಲ್ ವಿಳಾಸದ ಬಗ್ಗೆ ಮೊದಲು ಗೊಂದಲವಿತ್ತು. ಆದರೆ ಇ-ಮೇಲ್ ತಲುಪಿರುವುದು ತಿಳಿದುಬಂದಿದೆ.
ಈ ಮಧ್ಯೆ ಗೀತಾಂಜಲಿ ಗ್ರೂಪ್ ಹೈದರಾಬಾದ್‌ನಲ್ಲಿ ಹೊಂದಿರುವ ಭೂಮಿಯನ್ನು ಐಟಿ ಇಲಾಖೆ ಜಪ್ತಿ ಮಾಡಿದೆ. ಇದರ ಮೌಲ್ಯ 1200 ಕೋಟಿ ರೂ. ಎನ್ನಲಾಗಿದೆ.
ಭಾರೀ ವರ್ಗಾವಣೆ
ಹಗರಣದ ನಂತರದಲ್ಲಿ ಇದೀಗ ಬ್ಯಾಂಕ್‌ನ 1415 ಉದ್ಯೋಗಿಗಳನ್ನು ವರ್ಗಾವಣೆ ಮಾಡಲಾಗಿದೆ. 257 ಮಧ್ಯಮದರ್ಜೆಯ ಸಿಬಂದಿ, 437 ಕ್ಲರ್ಕ್‌ಗಳು ಮತ್ತು 721 ಅಧಿಕಾರಿಗಳೂ ಇದರಲ್ಲಿ ಸೇರಿದ್ದಾರೆ. ಹಗರಣ ನಡೆದ ನಂತರದಲ್ಲೂ ಅನುಮಾನಾಸ್ಪದ ಹುದ್ದೆಗಳಲ್ಲಿ ಅದೇ ಉದ್ಯೋಗಿಗಳಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇನ್ನೊಂದೆಡೆ ಬ್ಯಾಂಕ್‌ನ 18 ಸಾವಿರ ಉದ್ಯೋಗಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂಬ ಊಹಾಪೋಹವನ್ನು ಬ್ಯಾಂಕ್ ತಳ್ಳಿಹಾಕಿದೆ. ಈ ಮಧ್ಯೆ ಮೆಹುಲ್ ಚೋಕ್ಸಿ ನೇತೃತ್ವದ ಗೀತಾಂಜಲಿ ಗ್ರೂಪ್ ಹೈದರಾಬಾದ್‌ನಲ್ಲಿ ಹೊಂದಿರುವ ಭೂಮಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಇದರ ಮೌಲ್ಯ 1200 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ.
ಕೊಠಾರಿ ಅಂದರ್
ಬ್ಯಾಂಕುಗಳಿಗೆ ಸುಮಾರು 3,695 ಕೋಟಿ ರೂ. ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ರೋಟೊಮ್ಯಾಕ್ ಪೆನ್ನುಗಳ ಕಂಪೆನಿ ಮಾಲಕ ವಿಕ್ರಮ್ ಕೊಠಾರಿ ಹಾಗೂ ಅವರ ಪುತ್ರ ರಾಹುಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ನವದಿಲ್ಲಿಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಸತತ ಮೂರು ದಿನಗಳಿಂದ ಈ ಇಬ್ಬರ ವಿಚಾರಣೆ ನಡೆಸಲಾಗಿತ್ತು. ಆದರೆ ಇವರಿಬ್ಬರನ್ನೂ ಅಧಿಕಾರಿಗಳ ಪ್ರಶ್ನೆಗೆ ಸೂಕ್ತ ವಾಗಿ ಉತ್ತ ರಿ ಸದ ಕಾರಣ ಬಂಧಿಸಲಾಗಿದೆ. ಇದಕ್ಕೂ ಮುನ್ನ ಕಾನ್ಪುರ ದಲ್ಲಿಯೂ ಸಿಬಿಐ, ಕೊಠಾರಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಕಾನ್ಪುರದಲ್ಲಿರುವ ಕೊಠಾರಿ ನಿವಾಸ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.