ನೀರವ್ ಮೋದಿ, ಮೆಹುಲ್ ಚೋಕ್ಸಿ ಪಾಸ್ ಪೋರ್ಟ್ ಅಮಾನತು
Team Udayavani, Feb 16, 2018, 3:58 PM IST
ಹೊಸದಿಲ್ಲಿ : ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿನ ಪಾಸ್ ಪೋರ್ಟ್ ಪ್ರಾಧಿಕಾರ ಇಂದು ಶುಕ್ರವಾರ, ಪಿಎನ್ಬಿ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿರುವ ಬಿಲಿಯಾಧಿಪತಿ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಮತ್ತು ಆತನ ಪಾಲುದಾರು ಮೆಹುಲ್ ಚೋಕ್ಸಿ ಅವರ ಪಾಸ್ ಪೋರ್ಟನ್ನು ತತ್ಕ್ಷಣಕ್ಕೆ ಜಾರಿಗೆ ಬರುವಂತೆ, ಜಾರಿ ನಿರ್ದೇಶನಾಲಯದ ಸೂಚನೆ ಪ್ರಕಾರ, ನಾಲ್ಕು ವಾರಗಳ ಅವಧಿಗೆ ಅಮಾನತು ಮಾಡಿದೆ. ಇದೇ ವೇಳೆ ಇನ್ನೂ 50 ಔದ್ಯಮಿಕ ಸಂಸ್ಥೆಗಳ ಮೇಲೆ ದಾಳಿ ನಡೆಯುವ ಸೂಚನೆಯನ್ನು ಅದು ನೀಡಿದೆ.
ಭಾರತೀಯ ಪಾಸ್ ಪೋರ್ಟ್ ಹೊಂದಿರುವ ನೀರವ್ ಮೋದಿ ಈ ವರ್ಷ ಜನವರಿ 1ರಂದೇ ವಿದೇಶಕ್ಕೆ ಪಲಾಯನ ಮಾಡಿದ್ದರು. ಆತನ ಸಹೋದರ ನಿಶಾಲ್ (ಬೆಲ್ಜಿಯನ್ ಪ್ರಜೆ) ಕೂಡ ಅಂದೇ ದೇಶದಿಂದ ನಿರ್ಗಮಿಸಿದ್ದ.
ನೀರವ್ ಮೋದಿ ಅವರ ಪತ್ನಿ ಅಮಿ (ಅಮೆರಿಕನ್ ಪ್ರಜೆ) ಜನವರಿ 6ರಂದು ವಿದೇಶಕ್ಕೆ ಹೋಗಿದ್ದರು. ಮತ್ತು ಆತನ ತಾಯಿಯ ಸಹೋದರ ಹಾಗೂ ಉದ್ಯಮ ಸಹವರ್ತಿ ಮೆಹುಲ್ ಚೋಕ್ಸಿ ಜನವರಿ 4ರಂದು ವಿದೇಶಕ್ಕೆ ಪಲಾಯನ ಮಾಡಿದ್ದರು.
ಜಾರಿ ನಿರ್ದೇಶನಾಲಯ ಇಂದು ನೀರವ್ ಮೋದಿಗೆ ಸಮನ್ಸ್ ಜಾರಿ ಮಾಡಿದ್ದು ಒಂದು ವಾರದೊಳಗೆ ತನ್ನ ಮುಂದೆ ಹಾಜರಾಗಿ ಸಾಕ್ಷ್ಯ ನುಡಿಯಬೇಕೆಂದು ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.