ಜಯಾ ನಿವಾಸ ಸ್ಮಾರಕ ಮಾಡ್ಬೇಕು; ಸೆಲ್ವಂ ಶಾಕ್, ಆನ್ ಲೈನ್ ಜಟಾಪಟಿ!
Team Udayavani, Feb 9, 2017, 12:54 PM IST
ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಶುರವಾಗಿರುವ ಹೈವೋಲ್ಟೇಜ್ ಡ್ರಾಮಾಕ್ಕೆ ಗುರುವಾರ ಹೊಸ ತಿರುವು ಪಡೆದುಕೊಂಡಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಹಾಗೂ ಹಂಗಾಮಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ನಡುವಿನ ಅಧಿಕಾರದ ಗದ್ದುಗೆ ಏರುವ ಜಿದ್ದಾಜಿದ್ದಿನ ಜಂಗೀಕುಸ್ತಿ ಮುಂದುವರಿದಿರುವ ನಡುವೆ ರಾಜ್ಯಪಾಲರಾದ ಸಿ.ವಿದ್ಯಾಸಾಗರ್ ರಾವ್ ಅವರು ಇಂದು ಚೆನ್ನೈಗೆ ಆಗಮಿಸಿದ್ದಾರೆ. ಏತನ್ಮಧ್ಯೆ ಓ ಪನ್ನೀರ್ ಸೆಲ್ವಂ ಅವರು ಶಶಿಕಲಾಗೆ ಮತ್ತೊಂದು ಶಾಕ್ ನೀಡಿದ್ದಾರೆ!
ಇಂದು ಸಂಜೆ 5ಗಂಟೆಗೆ ಭೇಟಿಯಾಗುವಂತೆ ಓ ಪನ್ನೀರ್ ಸೆಲ್ವಂಗೆ ರಾಜ್ಯಪಾಲರು ಅವಕಾಶ ನೀಡಿದ್ದರೆ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ಸಂಜೆ 7.30ಕ್ಕೆ ಸಮಯ ನೀಡಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವೀಟರ್ ನಲ್ಲಿ ಪನ್ನೀರ್ ಸೆಲ್ವಂ ಪರ ಅಭಿಯಾನ ಶುರುವಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಜಯಾ ಪೋಯೆಸ್ ಗಾರ್ಡನ್ ನಿವಾಸ ಸ್ಮಾರಕವಾಗುತ್ತಾ?
ದಿ.ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪೋಯೆಸ್ ಗಾರ್ಡನ್ ನಿವಾಸದಲ್ಲಿ ವಾಸ್ತವ್ಯ ಹೂಡಿರುವ ವಿ.ಶಶಿಕಲಾ ನಟರಾಜನ್ ಅವರನ್ನು ಹೊರಹಾಕಲು ಪನ್ನೀರ್ ಸೆಲ್ವಂ ತಂತ್ರಗಾರಿಕೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಯಲಲಿತಾ ಅವರ ಪೋಯೆಸ್ ಗಾರ್ಡನ್ ನಿವಾಸ ಸ್ಮಾರಕವಾಗಬೇಕು ಎಂದು ಸಲಹೆ ನೀಡಿದ್ದಾರೆ. ಕೆಲವು ದಶಕಗಳ ಕಾಲದಿಂದ ಜೆ.ಜಯಲಲಿತಾ ಅವರ ನಿವಾಸದಲ್ಲೇ ಠಿಕಾಣಿ ಹೂಡಿದ್ದ ಶಶಿಕಲಾ ಇದೀಗ ಜಯಾ ನಿಧನದ ಬಳಿಕವೂ ಪೋಯೆಸ್ ಗಾರ್ಡನ್ ನಲ್ಲೇ ಉಳಿದುಕೊಂಡಿದ್ದಾರೆ.
ಆನ್ ಲೈನ್ ಕ್ಯಾಂಪೇನ್ ಸ್ಕೆಚ್!
ಶಶಿಕಲಾ ಅವರು ಸಿಎಂ ಗದ್ದುಗೆ ಏರದಂತೆ ತಡೆಯಲು ಇದೀಗ ಸಾಮಾಜಿಕ ಜಾಲತಾಣಗಳ ಬಳಕೆ ಆಗತೊಡಗಿದೆ. ಶಶಿಕಲಾರನ್ನು ಜಯಾ ನಿವಾಸದಿಂದ ಹೊರಹಾಕುವ ತಂತ್ರದ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಬೆಂಬಲಿಗರು ಅಣ್ಣಾ ಡಿಎಂಕೆ ಶಾಸಕರ ಮೊಬೈಲ್ ನಂ ಅನ್ನು ಸಾರ್ವಜನಿಕರಿಗೆ ನೀಡಿ ಜಯಾ ನಿವಾಸ ಸ್ಮಾರಕ ಮಾಡುವ ಒತ್ತಡ ಹೇರಲು ಮನವಿ ಮಾಡುತ್ತಿದ್ದಾರೆ. ಶಶಿಕಲಾ ವಿರುದ್ಧ ಟ್ವೀಟರ್, ಫೇಸ್ ಬುಕ್ ನಲ್ಲಿ ಕ್ಯಾಂಪೇನ್ ಶುರುವಾಗಿದೆ.
ಶಶಿಕಲಾ ವಿರುದ್ಧ ಕ್ರಮ ಕೈಗೊಳ್ಳಿ: ಪೊಲೀಸರಿಗೆ ಪನ್ನೀರ್ ಆದೇಶ
ಎಐಎಡಿಎಂಕೆ ಪಕ್ಷದೊಳಗಿನ ಆಂತರಿಕ ಕಲಹ ತೀವ್ರವಾಗುತ್ತಿದ್ದು, ಜಯಾ ಬಹುಕಾಲದ ಗೆಳತಿ ಶಶಿಕಲಾ ಅವರು 131 ಶಾಸಕರನ್ನು ರಹಸ್ಯ ಸ್ಥಳದಲ್ಲಿ ಇಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರು ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.