ಜ್ಞಾನಪೀಠ ಪುರಸ್ಕೃತ ಕವಿ ಅಕ್ಕಿಥಮ್ ಅಚ್ಯುತನ್ ನಂಬೂದಿರಿ ವಿಧಿವಶ
Team Udayavani, Oct 15, 2020, 11:44 AM IST
ಪಾಲಕ್ಕಾಡ್: ಮಲಯಾಳಂ ಸಾಹಿತ್ಯದ ಮೇರು ಕವಿ ಜ್ಞಾನಪೀಠ ಪುರಸ್ಕೃತ ಕವಿ ಅಕ್ಕಿಥಮ್ ಅಚ್ಯುತನ್ ನಂಬೂದಿರಿ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 94 ವರ್ಷದ ಅಚ್ಯುತನ್ ನಂಬೂದಿರಿ ತ್ರಿಶೂರ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
1926ರಲ್ಲಿ ಪಾಲಕ್ಕಾಡ್ ನ ಕುಮಾರನಲ್ಲೂರ್ ನಲ್ಲಿ ಜನಿಸಿದ ನಂಬೂದಿರಿಯವರು ಮಲಯಾಳಂ ಸಾಹಿತ್ಯದಲ್ಲಿ ಮೇರು ಸಾಧನೆ ಮಾಡಿದವರು. ಆಕಾಶವಾಣಿಯಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಅವರಿಗೆ 20189ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅಚ್ಯುತನ್ ನಂಬೂದಿರಿಯವರು ಈವರೆಗೆ 55 ಕೃತಿಗಳನ್ನು ರಚಿಸಿದ್ದು, ಈ ಪೈಕಿ 45 ಕವನ ಸಂಕಲನಗಳಾಗಿವೆ. ಖಂಡ ಕಾವ್ಯಗಳು, ಕಥಾ ಕಾವ್ಯಗಳು, ಚರಿತ ಕಾವ್ಯಗಳು ಹಾಗೂ ಕವನಗಳು ಇವುಗಳಲ್ಲಿ ಸೇರಿವೆ. ಪದ್ಮಶ್ರೀ ಪುರಸ್ಕೃತರಾಗಿರುವ ಅವರು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973), ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1972 ಮತ್ತು 1988), ಮಾತೃಭೂಮಿ ಪ್ರಶಸ್ತಿ, ವಯಲಾರ್ ಪ್ರಶಸ್ತಿ, ಕಬೀರ್ ಸಮ್ಮಾನ್ ಸೇರಿದಂತೆ ಅನೇಕ ಸಾಹಿತ್ಯ ಸಂಬಂಧಿ ಗೌರವಗಳಿಗೂ ಪಾತ್ರ ರಾಗಿದ್ದಾರೆ. ಇವರ ಕೃತಿಗಳು ಭಾರತದ ಇತರೆ ಭಾಷೆಗಳು ಹಾಗೂ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.