ಪಿಓಕೆ ಪಾಕಿಸ್ಥಾನದ್ದೇ: ಫಾರೂಕ್ ಅಭಿಮತ
Team Udayavani, Nov 12, 2017, 1:50 PM IST
ಶ್ರೀನಗರ/ಹೊಸದಿಲ್ಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಒಕೆ) ನ್ಯಾಯವಾಗಿ ಪಾಕಿಸ್ಥಾನಕ್ಕೇ ಸೇರಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಲ್ಲದೆ, ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕೆಂದರೆ, ಆ ರಾಜ್ಯವನ್ನು ಸ್ವಾಯತ್ತ ಪ್ರಾಂತ್ಯವೆಂದು ಘೋಷಿಸಬೇಕೆಂದೂ ಎಂದಿದ್ದಾರೆ.
ಶನಿವಾರ ಮಾತನಾಡಿದ ಅವರು, “ಕಾಶ್ಮೀರ ವನ್ನು ಭಾರತ ಸಂಸ್ಥಾನದೊಳಗೆ ಸೇರಿಸುವಾಗ ಆಗಿನ ಕಾಶ್ಮೀರದ ಮಹಾರಾಜ ಹರಿ ಸಿಂಗ್, ಭಾರತ ಸರಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಭಾರತ ಮರೆತಿದೆ. ಈ
ವಿಚಾರ ದಲ್ಲಿ ಕಾಶ್ಮೀರದ ಜನತೆಗೆ ದ್ರೋಹ ಮಾಡಿದ್ದರಿ ಂದಲೇ ಪ್ರಕ್ಷುಬ್ಧ ಸ್ಥಿತಿ ಅಲ್ಲಿ ನಿರ್ಮಾಣವಾಗಲು ಕಾರಣ’ ಎಂದು ಆರೋಪಿಸಿದರು.
ಸ್ವತಂತ್ರವಾದರೆ ಅಪಾಯ: ಕಾಶ್ಮೀರ ಪ್ರತ್ಯೇಕತಾವಾದಿಗಳ “ಸ್ವತಂತ್ರ ಪಾಕಿಸ್ಥಾನ’ ಪರಿಕಲ್ಪನೆಯನ್ನು ತಪ್ಪು ಎಂದು ಹೇಳಿರುವ ಪಾಕಿಸ್ಥಾನದ ಪ್ರಧಾನಿ ಶಾಹೀದ್ ಖಕ್ಕನ್ ಅಬ್ಟಾಸಿ ಹೇಳಿಕೆಯನ್ನು ಅನುಮೋದಿಸಿದ ಅಬ್ದುಲ್ಲಾ, “ಕಾಶ್ಮೀರ ಸ್ವತಂತ್ರ್ಯವಾದರೆ ಶಾಂತಿಗಿಂತ ಆತಂಕವೇ ಹೆಚ್ಚು. ಸ್ವತಂತ್ರ್ಯ ದೇಶವಾದಾಗ ಕಾಶ್ಮೀರದ ಸುತ್ತ ಮೂರು ಅಣುಬಾಂಬ್‌ಗಳುಳ್ಳ ರಾಷ್ಟ್ರಗಳು (ಭಾರತ, ಚೀನಾ, ಪಾಕಿಸ್ಥಾನ) ಇದ್ದಂತಾಗುತ್ತದೆ. ಕಾಶ್ಮೀರಿಗರಲ್ಲಿ ಅಲ್ಲಾನ ಹೆಸರು ಬಿಟ್ಟರೆ ಬೇರೇನೂ ಇಲ್ಲ. ಹಾಗಾಗಿ ಸ್ವಾತಂತ್ರ್ಯ ಕಾಶ್ಮೀರ ಪರಿಕಲ್ಪನೆ ಬಿಟ್ಟು ಈಗಿರುವಂತೆ ಕಾಶ್ಮೀರ ಭಾರತದೊಂದಿಗೇ ಇರಲಿ ಎನ್ನುವುದೇ ಲೇಸು. ಆದರೆ, ಅದಕ್ಕೆ ಸ್ವಾಯತ್ತ ಸ್ಥಾನಮಾನ ಸಿಗಬೇಕಷ್ಟೇ” ಎಂದು ಅವರು ಆಶಿಸಿದ್ದಾರೆ.
ದೀನೇಶ್ವರ್ ನೇಮಕದ ಹಿಂದೆ ಅಮೆರಿಕ?: ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಯಾಗಿ ದೀನೇಶ್ವರ್ ಶರ್ಮಾ ಅವರನ್ನು ನೇಮಿಸುವುದಕ್ಕೂ 27 ದಿನಗಳ ಮುನ್ನ ಅಮೆರಿಕದ ದಕ್ಷಿಣ ಏಷ್ಯಾ ರಾಷ್ಟ್ರಗಳ ವ್ಯವಹಾರಗಳ ಬ್ಯೂರೋದ ರಾಜಕೀಯ ವಿಭಾಗದ ಮುಖ್ಯಸ್ಥ ಜೊಶುಲಾ ಗೋಲ್ಡ್ ಬರ್ಗ್ ಹಾಗೂ ನವದೆಹಲಿಯಲ್ಲಿರುವ ಅಮೆ ರಿಕ ದೂತಾವಾಸ ಕಚೇರಿಯಲ್ಲಿನ ಅಧಿಕಾರಿ ಡೇವಿಡ್ ಅರುಲಾನಂಥಮ್ ಅವರು ಶ್ರೀನಗರಕ್ಕೆ ಭೇಟಿ ನೀಡಿದ್ದರೆಂದು “ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಸೆ. 27ರಂದು ಈ ಅಧಿಕಾರಿಗಳು ಶ್ರೀನಗರಕ್ಕೆ ಭೇಟಿ ನೀಡಿ, ಸಿಎಂ ಮೆಹಬೂಬಾ ಮುಫ್ತಿ ಸರಕಾರದ ಮೂವರು ಪ್ರಮುಖ ಸಚಿವರು, ಮಾನವ ಹಕ್ಕುಗಳ ವಕೀಲ ಪರ್ವೇಜ್ ಇನ್ರೊಜ್, ಜಮ್ಮು ಕಾಶ್ಮೀರ ಕೊವಾಲಿಯಷನ್ ಆಫ್ ಸಿವಿಲ್ ಸೊಸೈಟಿಯ ನಾಯಕ ಖುರ್ರಮ್ ಪರ್ವೇಜ್ ಹಾಗೂ ಇಬ್ಬರು ಪತ್ರಕರ್ತರನ್ನು ಭೇಟಿಯಾಗಿ ತೆರಳಿದ್ದರು.
ಕಾಶ್ಮೀರದಲ್ಲಿ ಶಾಂತಿ ಮಾತುಕತೆಗೆ ಈಗ ಪ್ರಾಶಸ್ತ್ಯವಾದ ಸನ್ನಿವೇಶವಿದೆ ಎಂದು ಆ ಅಧಿಕಾರಿಗಳು ನೀಡಿದ ವರದಿಯನ್ನಾಧ ರಿಸಿಯೇ ಕೇಂದ್ರ ಸರಕಾರ ದೀನೇಶ್ವರ್ ಅವರನ್ನು ಶ್ರೀನಗರಕ್ಕೆ ಕಳುಹಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.