KCR rallyಗೆ ಮುನ್ನ ತೆಲಂಗಾಣ ಕಾಂಗ್ರೆಸ್ ನಾಯಕ ಪೊಲೀಸರ ವಶ
Team Udayavani, Dec 4, 2018, 11:39 AM IST
ಹೈದರಾಬಾದ್ : ಉಸ್ತುವಾರಿ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥ ಕೆ ಚಂದ್ರಶೇಖರ ರಾವ್ (ಕೆಸಿಆರ್) ಅವರ rally ನಡೆಯಲಿಕ್ಕಿರುವಂತೆಯೇ ಯಾವುದೇ ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸುವ ಸಲುವಾಗಿ ಪೊಲೀಸರಿಂದು ನಸುಕಿನ ವೇಳೆ ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷ , ಹಾಲಿ ಕೊಡಂಗಳ ಶಾಸಕ ರೇವಂತ ರೆಡ್ಡಿ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿಗಳು ತಿಳಿಸಿವೆ.
ಕೆಸಿಆರ್ ಅವರ ರಾಲಿ ಕೊಡಂಗಳದ ಕೋಸಿಗಿ ಎಂಬಲ್ಲಿ ಇಂದು ನಡೆಯಲಿದ್ದು ಈ rally ಯಲ್ಲಿ ಅಹಿತಕರ ಘಟನೆ ನಡೆಯುವ ಸಂಭಾವ್ಯತೆಯನ್ನು ಅರಿತ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ರೆಡ್ಡಿ ಅವರನ್ನು ಅವರ ನಿವಾಸದಲ್ಲೇ ಇಂದು ನಸುಕಿನ ವೇಳೆ ತಮ್ಮ ವಶಕ್ಕೆ ತೆಗೆದುಕೊಂಡು ಅಜ್ಞಾತ ಸ್ಥಳಕ್ಕೆ ಒಯ್ದರೆಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರೆಡ್ಡಿ ಅವರು ಈ ಮೊದಲೇ ತಾನು ಕೆಸಿಆರ್ rallyಯನ್ನು ಹಾಳುಗೆಡವುದಾಗಿ ಬೆದರಿಕೆ ಹಾಕಿದ್ದರಲ್ಲದೆ ರಾಲಿಯ ವೇಳೆ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಬೇಕೆಂದು ಕರೆ ನೀಡಿದ್ದರು. ಈ ಬೆದರಿಕೆಗಳಿಗಾಗಿ ಚುನಾವಣಾ ಆಯೋಗ ರೆಡ್ಡಿಗೆ ನೊಟೀಸ್ ಕೂಡ ಜಾರಿ ಮಾಡಿತ್ತು.
ರೆಡ್ಡಿ ಅವರು ಈ ವರ್ಷಾರಂಭದಲ್ಲಿ ತೆಲುಗೆ ದೇಶಂ ಪಕ್ಷವನ್ನು (ಟಿಡಿಪಿ) ತೊರೆದು ಕಾಂಗ್ರೆಸ್ ಸೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.