ಪೊಲೀಸರ ಮೇಲೆ ದಾಳಿಗೆ ಯತ್ನ; ಸಿನಿಮೀಯ ಶೈಲಿಯಲ್ಲಿ ಎನ್ ಕೌಂಟರ್; ರೌಡಿಶೀಟರ್ ಗಳಿಬ್ಬರ ಹತ್ಯೆ
Team Udayavani, Aug 1, 2023, 10:36 AM IST
ಚೆನ್ನೈ: ಸೋಮವಾರ ತಡರಾತ್ರಿ ಚೆನ್ನೈನ ಗುಡುವಂಚೇರಿಯಲ್ಲಿ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಇಬ್ಬರು ರೌಡಿ ಶೀಟರ್ ಗಳ ಹತ್ಯೆಯಾಗಿದೆ.
ಮುಂಜಾನೆ 3 ಗಂಟೆಯ ಸುಮಾರಿಗೆ ಇನ್ಸಪೆಕ್ಟರ್ ಮುರುಗೇಶನ್ ಅವರ ತನ್ನ ಪೊಲೀಸ್ ತಂಡದೊಂದಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವೇಗದಿಂದ ಬಂದ ಕಪ್ಪು ಬಣ್ಣದ ಸ್ಕೋಡಾ ಕಾರೊಂದು ಸಬ್ ಇನ್ಸಪೆಕ್ಟರ್ ಶಿವಗುರುನಾಥನ್ ಅವರ ಮೇಲೆ ಎರಗಲು ಬಂದಿತ್ತು. ಆದರೆ ಅವರು ತಪ್ಪಿಸಿಕೊಂಡಾಗ ಸ್ಕೋಡಾ ಕಾರು ಬಂದು ಪೊಲೀಸ್ ಜೀಪಿಗೆ ಗುದ್ದಿದೆ.
ಕಾರಿನಲ್ಲಿದ್ದ ನಾಲ್ಕು ಮಂದಿ ಕೆಳಕ್ಕಿಳಿದು ಪೊಲೀಸರ ಮೇಲೆ ದಾಳಿಗೆ ಮುಂದಾದರು. ಈ ವೇಳೆ ಶಿವಗುರುನಾಥನ್ ಅವರ ಎಡಗೈಗೆ ಗಾಯವಾಗಿದೆ. ದುಷ್ಕರ್ಮಿಗಳು ಅವರ ತಲೆಗೆ ಹೊಡೆಯಲು ಮುಂದಾದಾಗ ಸಬ್ ಇನ್ಸಪೆಕ್ಟರ್ ಕೆಳಕ್ಕೆ ಬಿದ್ದಿದ್ದಾರೆ.
ಇದನ್ನೂ ಓದಿ:ಹರ್ಯಾಣ ಕೋಮು ಘರ್ಷಣೆ: 3 ಮಂದಿ ಮೃತ್ಯು, ಇಂಟರ್ನೆಟ್ ಸ್ಥಗಿತ, ಶಾಲೆಗಳಿಗೆ ರಜೆ
ಈ ವೇಳೆ ಸ್ವಯಂ ರಕ್ಷಣೆಗಾಗಿ ಮುರುಗೇಶನ್ ಮತ್ತು ಶಿವಗುರುನಾಥನ್ ರಿವಾಲ್ವರ್ ತೆಗೆದು ಶೂಟ್ ಮಾಡಿದ್ದು, ರೌಡಿಶೀಟರ್ ಗಳಾದ ರಮೇಶ್ (35 ವ) ಮತ್ತು ಚೋಟಾ ವಿನೋತ್ (32) ಅವರು ಗಾಯಗೊಂಡಿದ್ದಾರೆ. ಅವರಿಬ್ಬರನ್ನೂ ಕೂಡಲೇ ಸ್ಥಳಿಯ ಚೆಂಗಲಟಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಬ್ಬರು ಮೃತಪಟ್ಟಿದ್ದಾರೆ.
ಚೋಟಾ ವಿನೋತ್ ನನ್ನು A+ ಮಾದರಿಯ ಆರೋಪಿ ಎಂದು ಗುರುತಿಸಲಾಗಿದ್ದು, ಈತನ ಮೇಲೆ 50 ಕ್ಕೂ ಹೆಚ್ಚು ಪ್ರಕರಣಗಳಿವೆ. 16 ಕೊಲೆ, 10 ಕೊಲೆ ಯತ್ನ, 10 ದರೋಡೆ ಮತ್ತು 15 ಗೂಂಡಾಗಿರಿ ಪ್ರಕರಣಗಳು ಸೇರಿವೆ.
ಮತ್ತೋರ್ವ ರಮೇಶ್ ಮೇಲೆ 20 ಪ್ರಕರಣಗಳಿದ್ದು, ಅದರಲ್ಲಿ ಆರು ಕೊಲೆ, ಏಳು ಕೊಲೆಯತ್ನ ಮತ್ತು ಎಂಟು ಗೂಂಡಾಗಿರಿ ಕೇಸ್ ಗಳಿವೆ.
ಸ್ಥಳದಿಂದ ಪರಾರಿಯಾಗಿರುವ ಮತ್ತಿಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.