ಮೂರ್ಖರ ದಿನಕ್ಕೆ ರಾಜಕೀಯ ರಂಗು
Team Udayavani, Apr 2, 2018, 6:54 AM IST
ಹೊಸದಿಲ್ಲಿ: ಈ ಬಾರಿಯ ಮೂರ್ಖರ ದಿನ ರಾಜಕೀಯ ರಂಗು ಪಡೆದಿದ್ದು, ಎರಡು ಪ್ರಮುಖ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟಕ್ಕೆ ಎಪ್ರಿಲ್ ಫೂಲ್ ದಿನವನ್ನು ಬಳಸಿಕೊಂಡಿವೆ. ಮತ್ತೂಂದೆಡೆ, ಲೇಖಕ ಚೇತನ್ ಭಗತ್ ಅವರೂ “ರಾಜಕೀಯ ಟ್ವೀಟ್’ ಮೂಲಕ ತಮ್ಮ ಅಭಿಮಾನಿಗಳನ್ನು ಮೂರ್ಖರನ್ನಾಗಿಸಿದ್ದು, ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ಪ್ರಧಾನಿ ಮೋದಿ ಅವರು ಈಡೇರಿಸದ ಆಶ್ವಾಸನೆಗಳನ್ನು ಪ್ರಸ್ತಾವಿಸಿ ಕಾಂಗ್ರೆಸ್ ಎಪ್ರಿಲ್ ಫೂಲ್ ದಿನವನ್ನು “ಜುಮ್ಲಾ ದಿನ’ ಎಂದು ಕರೆದರೆ, ಬಿಜೆಪಿಯು ರಾಹುಲ್ ಗಾಂಧಿ ಅವರು ಮಾಡಿರುವ ಎಡವಟ್ಟುಗಳ ವೀಡಿಯೋ ಅಪ್‌ಲೋಡ್ ಮಾಡಿ, ಮೂರ್ಖರ ದಿನವನ್ನು “ಪಪ್ಪು ಡೇ’ ಎಂದು ಕರೆದಿದೆ. ಇದೇ ವೇಳೆ, ಲೇಖಕ ಚೇತನ್ ಭಗತ್ ರವಿವಾರ ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾಗಿ ಘೋಷಿಸುವ ಮೂಲಕ ಎಲ್ಲರನ್ನೂ ಮೂರ್ಖರನ್ನಾಗಿಸಿದ್ದಾರೆ.
ಚೇತನ್ ಭಗತ್ ಕಾಂಗ್ರೆಸ್‌ಗೆ: ರವಿವಾರ ಇವರು, “ಇನ್ನು ಸಹಿ ಸಲು ಸಾಧ್ಯವಿಲ್ಲ. ದೇಶ ವನ್ನು ಸರಿದಾರಿಗೆ ತರ ಬೇಕಿದೆ. ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿ ದ್ದೇನೆ. ಕರ್ನಾಟಕದಲ್ಲಿ ಪಕ್ಷದ ಪರ ಪ್ರಚಾರ ಮಾಡಲಿದ್ದೇನೆ. ರಾಹುಲ್ ಗಾಂಧಿ ಜತೆ ಕೈಜೋಡಿಸಿ ಉತ್ತಮ ಭಾರತ ನಿರ್ಮಿಸೋಣ’ ಎಂದು ಟ್ವೀಟ್ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಅವರ ಟ್ವೀಟ್‌ನಲ್ಲಿ ನೀಡಿದ್ದ ಲಿಂಕ್ ಅನ್ನು ತೆರೆಯದೇ, ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿ, ರಾಜಕೀಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಟ್ವೀಟ್‌ಗೆ 2 ಸಾವಿರ ಲೈಕ್‌ಗಳೂ ಸಿಕ್ಕವು. ಇನ್ನು ಕೆಲವು ಬುದ್ಧಿವಂತರು ಲಿಂಕ್ ಓಪನ್ ಮಾಡಿ, ಅದು ಎಪ್ರಿಲ್ ಫೂಲ್ ಎಂಬುದನ್ನು ಕಂಡುಕೊಂಡಿ ದ್ದಾರೆ. ಒಟ್ಟಿನಲ್ಲಿ ಚೇತನ್ ಭಗತ್ ಅವರು ತಮ್ಮ ಅಭಿಮಾನಿಗಳನ್ನು ಮೂರ್ಖರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನ್ಯಗ್ರಹಜೀವಿಗಳಿಗೂ ಭಾರತದಲ್ಲಿ ಉದ್ಯೋಗ!
ಮೂರ್ಖರ ದಿನವನ್ನು ಪಿಎಂ ಮೋದಿ ಅವರನ್ನು ಲೇವಡಿ ಮಾಡಲು ಬಳಸಿರುವ ಕಾಂಗ್ರೆಸ್, ಜುಮ್ಲಾ ದಿನ ಎಂದು ಕರೆದಿದೆ. ಉದ್ಯೋಗ ಸೃಷ್ಟಿ, ಸ್ಮಾರ್ಟ್ ಸಿಟಿ ಯೋಜನೆ, ಕಪ್ಪು ಹಣ ವಾಪಸ್, ಎಲ್ಲರ ಖಾತೆಗೂ 15 ಲಕ್ಷ ಸಹಿತ ವಿವಿಧ ವಿಚಾರಗಳನ್ನು ಪ್ರಸ್ತಾ ವಿಸಿ ಮೋದಿ ಅವರನ್ನು ಟೀಕಿಸಲಾಗಿದೆ. “ನೋಟು ಅಪಮೌಲ್ಯದಿಂದ ಭ್ರಷ್ಟಾಚಾರ ನಿರ್ಮೂಲನೆ ಯಾಗಿದೆ, ನೀರವ್ ಮೋದಿ, ಚೋಕ್ಸಿಯಂಥನವರು ಸ್ವತ್ಛಭಾರತ ಯಶಸ್ವಿಗೊಳಿಸಿದ್ದಾರೆ, ಸರಕಾರ 200 ಕೋಟಿ ಉದ್ಯೋಗ ಸೃಷ್ಟಿಸಿದೆ. ಮಂಗಳ ಗ್ರಹದಲ್ಲಿನ ಏಲಿಯನ್‌ಗಳೂ ಭಾರತದಲ್ಲಿ ನೌಕರಿ ಮಾಡಲಿವೆ, ರೋಬೋಟ್‌ಗಳು ಸ್ಮಾರ್ಟ್‌ಸಿಟಿಯಲ್ಲಿ ಕಸ ಎತ್ತುತ್ತಿವೆ’ ಎಂದು ವ್ಯಂಗ್ಯ ಮಾಡಲಾಗಿದೆ.
“ಪಪ್ಪು ದಿವಸ’ ಎಂದ ಬಿಜೆಪಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಉಲ್ಲೇಖೀಸಿ, ಮೂರ್ಖರ ದಿನವನ್ನು “ಪಪ್ಪು ದಿವಸ’ ಎಂದು ಬಿಜೆಪಿ ಕರೆದಿದೆ. ರಾಹುಲ್ ಅವರು ಹಲವು ಬಾರಿ ತಮ್ಮ ಭಾಷಣಗಳಲ್ಲಿ ಮಾಡಿರುವ ಎಡವಟ್ಟುಗಳು, ತಪ್ಪು ಗಳನ್ನು ತೋರಿಸುವ ವಿಡಿಯೋವೊಂ ದನ್ನು ಬಿಜೆಪಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದೆ. ಜತೆಗೆ, “ಮಿಸ್ಟರ್ ರಾಹುಲ್ ತಪ್ಪೇ ಮಾಡು ವುದಿಲ್ಲ. ನೀವು ಎಡವಟ್ಟು ಗಳ ಅನಭಿಷಿಕ್ತ ದೊರೆ. ಇದು ಕೇವಲ ಟ್ರೇಲರ್. ನೀವು ಯಾವತ್ತೂ ನಮಗೆ ಮನ ರಂಜನೆ ನೀಡುವು ದನ್ನು ಮುಂದು ವರಿಸುತ್ತೀರಿ ಎಂದು ನಂಬುತ್ತೇನೆ’ ಎಂದೂ ಬರೆದು ರಾಹುಲ್ ಕಾಲೆಳೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.