ಮರ್ಯಾದಾ ಹತ್ಯೆ ಆರೋಪ ಎದುರಿಸುತ್ತಿದ್ದ ರಾಜಕಾರಣಿ ನಿಗೂಢ ಸಾವು
Team Udayavani, Mar 8, 2020, 5:17 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೈದ್ರಾಬಾದ್: ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಮಗಳನ್ನು ವಿವಾಹವಾಗಿದ್ದ ಅಳಿಯನನ್ನು ಕೊಲೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದ ವ್ಯಕ್ತಿ ಇಲ್ಲಿನ ಅತಿಥಿ ಗೃಹ ಒಂದರಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾಗಿರುವ ಘಟನೆ ಇಂದು ವರದಿಯಾಗಿದೆ.
ಸಂಶಯಾಸ್ಪದವಾಗಿ ಸಾವಿಗೀಡಾಗಿರುವ ತಿರುನಾಗರಿ ಮಾರುತಿ ರಾವ್ ಮಿರಿಯಾಲಗುಡದಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ರಾಜಕಾರಣಿಯಾಗಿದ್ದರು.
ಮನೆಯವರ ಪ್ರಬಲ ವಿರೋಧವಿದ್ದರೂ 2018ರಲ್ಲಿ ತನ್ನ ಮಗಳನ್ನು ವಿವಾಹವಾಗಿದ್ದ ದಲಿತ ಯುವಕ ಪೆರುಮಳ್ಳ ಪ್ರಣಯ್ ಮೇಲೆ ಆಕ್ರೋಶ ಹೊಂದಿದ್ದ ತಿರುನಾಗರಿ ಮಾರುತಿ ರಾವ್ 24 ವರ್ಷದ ತನ್ನ ಅಳಿಯನನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿತನಾಗಿ 2019ರ ಎಪ್ರಿಲ್ ತಿಂಗಳಿನಲ್ಲಿ ಜಾಮೀನಿನ ಮೇಲೆ ರಾವ್ ಹೊರಬಂದಿದ್ದರು.
55 ವರ್ಷ ಪ್ರಾಯದ ತಿರುನಾಗರಿ ಮಾರುತಿ ರಾವ್ ಅವರ ಮೃತದೇಹ ನಗರದ ಖೈರಟಾಬಾದ್ ನಲ್ಲಿರುವ ಆರ್ಯ ವೈಶ್ಯ ಅತಿಥಿಗೃಹದ ಕೊಠಡಿಯಲ್ಲಿ ಪತ್ತೆಯಾಗಿರುವುದಾಗಿ ಸೈಫಾಬಾದ್ ನ ಸಹಾಯಕ ಪೊಲೀಸ್ ಕಮಿಷನರ್ ಸಿ. ವೇಣುಗೋಪಾಲ್ ರೆಡ್ಡಿ ಅವರು ತಿಳಿಸಿದ್ದಾರೆ.
ಶನಿವಾರ ರಾತ್ರಿ ರಾವ್ ಅವರು ಈ ಅತಿಥಿ ಗೃಹದಲ್ಲಿ ತಂಗಿದ್ದರು ಮತ್ತು ಅವರ ಕಾರು ಚಾಲಕ ಇದೇ ಅತಿಥಿ ಗೃಹದ ಆವರಣದಲ್ಲಿ ಕಾರಿನಲ್ಲೇ ಮಲಗಿದ್ದರು ಎಂಬ ಪ್ರಾಥಮಿಕ ಮಾಹಿತಿಗಳನ್ನು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾವ್ ಅವರ ಮೃತದೇಹವನ್ನು ಒಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಒಯ್ಯಲಾಗಿದೆ.
ಇಂದು ಬೆಳಿಗ್ಗೆ ರಾವ್ ಅವರ ಪತ್ನಿ ತನ್ನ ಪತಿಗೆ ಕರೆ ಮಾಡಿದ್ದ ಸಂದರ್ಭದಲ್ಲಿ ಅವರು ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ರಾವ್ ಅವರ ಪತ್ನಿ ಕಾರು ಚಾಲಕನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕಾರು ಚಾಲಕ ರಾವ್ ಅವರು ತಂಗಿದ್ದ ಕೊಠಡಿಗೆ ಬಂದು ನೋಡಿದಾಗ ಅವರು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ರಾವ್ ಅವರ ಮಗಳ ಗಂಡ ಪೆರುಮಳ್ಳ ಪ್ರಣಯ್ ನನ್ನು 2018ರ ಸೆಪ್ಟಂಬರ್ 14ರಂದು ಹಾಡುಹಗಲೇ ಕೊಲೆ ಮಾಡಲಾಗಿತ್ತು. ಪ್ರಣಯ್ ತನ್ನ ಗರ್ಭಿಣಿ ಪತ್ನಿ ಅಮೃತಾ ಅವರನ್ನು ವೈದ್ಯರಲ್ಲಿ ಕರೆದುಕೊಂಡು ಹೋಗಿ ವಾಪಾಸು ಬರುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಆಸ್ಪತ್ರೆಯ ಎದುರೇ ಕೊಲೆ ಮಾಡಲಾಗಿತ್ತು. ಮತ್ತು ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
ಪ್ರಣಯ್ ಹತ್ಯೆಯ ನಾಲ್ಕು ದಿನಗಳ ಬಳಿಕ ನಲಗೊಂಡ ಪೊಲೀಸರು ತಿರುನಾಗರಿ ಮಾರುತಿ ರಾವ್, ಇವರ ಸಹೋದರ ಶ್ರವಣ್ ಮತ್ತು ಇತರೇ ಮೂವರನ್ನು ಈ ಕೊಲೆಗೆ ಸಂಬಂಧಿಸಿದಂತೆ ಬಂಧಿಸಿದ್ದರು. ಶಂಕಿತ ಭಯೋತ್ಪಾದಕನೊಬ್ಬನ ನೆರವಿನೊಂದಿಗೆ ರಾವ್ ಬಿಹಾರ ಮೂಲದ ಸುಪಾರಿ ಹಂತಕರ ನೆರವಿನಿಂದ ತನ್ನ ಅಳಿಯನನ್ನು ಕೊಲೆ ಮಾಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಮತ್ತು ಸುಪಾರಿ ಹಂತಕ ಸುಭಾಷ್ ಶರ್ಮಾನಿಗೆ ರಾವ್ ಅವರು ಒಂದು ಕೋಟಿ ರೂಪಾಯಿಗಳನ್ನು ನೀಡಿರುವ ಕುರಿತಾಗಿಯೂ ಪೊಲೀಸರು ತಮ್ಮ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Farmers Protest: ರೈತ ದಲ್ಲೇವಾಲ್ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್ ಕಿಶೋರ್ ನಿರಶನ
RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ
Employment Rate: ಯುಪಿಎ 2.9 ಕೋಟಿ,ಮೋದಿ 17.9 ಕೋಟಿ ಉದ್ಯೋಗ ಸೃಷ್ಟಿ: ಸಚಿವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.