ಮಕ್ಕಳ ಸಾವಿನಲ್ಲೂ ರಾಜಕೀಯ
Team Udayavani, Aug 20, 2017, 8:45 AM IST
ಗೋರಖ್‌ಪುರ: ಉತ್ತರಪ್ರದೇಶದಲ್ಲಿ 70ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಗೋರಖ್‌ಪುರದ ಆಸ್ಪತ್ರೆ ಇದೀಗ ರಾಜಕೀಯ ರಂಗವಾಗಿ ಮಾರ್ಪಟ್ಟಿದೆ. ದುರಂತವನ್ನಿಟ್ಟುಕೊಂಡು ವಿವಿಧ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳತೊಡಗಿವೆ.
ದುರಂತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇಬ್ಬರೂ ಶನಿವಾರ ಗೋರಖ್‌ಪುರಕ್ಕೆ ಭೇಟಿ ನೀಡಿದ್ದು, ಪರಸ್ಪರ ಕೆಸರೆರೆಚಿ ಕೊಂಡಿದ್ದಾರೆ. ಇದೊಂದು “ಸರಕಾರಿ ಪ್ರಾಯೋಜಿತ ದುರಂತ’ ಎಂದು ರಾಹುಲ್ ಬಣ್ಣಿಸಿದರೆ, “ಗೋರಖ್‌ಪುರವೇನೂ ಪಿಕ್‌ನಿಕ್ ಸ್ಪಾಟ್ ಅಲ್ಲ’ ಎಂದು ಯೋಗಿ ಹೀಗಳೆದಿದ್ದಾರೆ. ಇದಲ್ಲದೆ, ಎರಡೂ ಪಕ್ಷಗಳ ಇತರೆ ನಾಯಕರೂ ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದಾರೆ.
ಸಂತ್ರಸ್ತರ ಭೇಟಿಯಾದ ರಾಹುಲ್ ಶನಿವಾರ ಇಲ್ಲಿನ ಬಿಆರ್‌ಡಿ ಆಸ್ಪತ್ರೆಗೆ ಭೇಟಿ ನೀಡಿದ ರಾಹುಲ್ ಅವರು ಸಂತ್ರಸ್ತರ ಕುಟುಂಬಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅನಂತರ ಮಾತನಾಡಿದ ಅವರು, “ಇದೊಂದು ಸರಕಾರಿ ಪ್ರಾಯೋಜಿತ ದುರಂತ. ಆಮ್ಲಜನಕದ ಕೊರತೆಯಿಂದಲೇ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಸಂತ್ರಸ್ತರೆಲ್ಲ ಹೇಳುತ್ತಿದ್ದಾರೆ. ಘಟನೆ ದಿನ ಹಲವರಿಗೆ ಅಂಬು ಬ್ಯಾಗ್‌ಗಳನ್ನು ನೀಡಿ, ಅದನ್ನು ಪಂಪ್ ಮಾಡುವಂತೆ ತಿಳಿಸಲಾಗಿತ್ತು. ಇದನ್ನೆಲ್ಲ ಗಮನಿಸಿದರೆ ಇದು ಸರಕಾರದ ನಿರ್ಲಕ್ಷ್ಯದಿಂದ ಆದ ದುರಂತ ಎಂಬುದು ಸ್ಪಷ್ಟವಾಗುತ್ತದೆ,’ ಎಂದಿದ್ದಾರೆ. ಸಿಎಂ ಯೋಗಿ ಅವರು ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಿಸಿದ್ದಾರೆ.
ಇದು ಪಿಕ್‌ನಿಕ್ ಸ್ಪಾಟ್ ಅಲ್ಲ
ರಾಹುಲ್ ಭೇಟಿಗೂ ಮುನ್ನ ಗೋರಖ್‌ಪುರದಲ್ಲಿ “ಸ್ವತ್ಛ ಉತ್ತರ್‌ಪ್ರದೇಶ್- ಸ್ವಾಸ್ಥ್ಯ ಉತ್ತರ್‌ಪ್ರದೇಶ್’ ಅಭಿ ಯಾನಕ್ಕೆ ಚಾಲನೆ ನೀಡಿ ಮಾತನಾಡಿದ್ದ ಸಿಎಂ ಯೋಗಿ ಅವರು ರಾಹುಲ್ ವಿರುದ್ಧ ಹರಿಹಾಯ್ದಿದ್ದರು. “ಗೋರಖ್‌ಪುರವೇನೂ ಪಿಕ್‌ನಿಕ್ ಸ್ಪಾಟ್ ಅಲ್ಲ. ದಿಲ್ಲಿ ಯಲ್ಲಿ ಕುಳಿತ ಯುವರಾಜ ಮತ್ತು ಲಕ್ನೋದಲ್ಲಿ ಕುಳಿತ ಶೆಹಜಾದಾ (ಅಖೀಲೇಶ್)ಗೆ ಇದು ಗೊತ್ತಿರಲಿ. ಅಷ್ಟೊಂದು ಕಳಕಳಿಯಿದ್ದರೆ ಇಲ್ಲಿಗೆ ಬಂದು ಮಾರಣಾಂ ತಿಕ ರೋಗ ತಡೆ ಬಗ್ಗೆ ಜಾಗೃತಿ ಮೂಡಿಸಲಿ’ ಎಂದಿದ್ದರು.
“ಮರ್ಡರ್ ಸ್ಪಾಟ್’ ಎಂದ ಕಾಂಗ್ರೆಸ್
ಸಿಎಂ ಯೋಗಿ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್, “ಹೌದು, ಗೋರಖ್‌ಪುರ ಪಿಕ್‌ನಿಕ್ ಸ್ಪಾಟ್ ಅಲ್ಲ. ಬದಲಿಗೆ, ವಾಸ್ತವದಲ್ಲಿ ಮರ್ಡರ್ ಸ್ಪಾಟ್’ ಎಂದಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಆದ ದುರಂತವನ್ನು ಸಿಎಂ ಯೋಗಿ
ಅವರು ಕೀಳುಮಟ್ಟದ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಏನೂ ತಪ್ಪು ಮಾಡದೇ ಮೃತಪಟ್ಟ ಆ ಅಮಾಯಕ
ಮಕ್ಕಳ ಸ್ಮರಣೆಗೇ ಅವಮಾನ ಮಾಡುತ್ತಿದ್ದಾರೆ ಎಂದು ಎಐಸಿಸಿ ವಕ್ತಾರ ಅಭಿಷೇಕ್ ಮನು ಸಿಂ Ì ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.