ನಿಕ್ ನೇಮ್‌ಗಳ ಲೋಕದಲ್ಲಿ ‘ಪೊಲ್ಟಾ’ ಅಂದ್ರೆ ಯಾರು ಗೊತ್ತಾ?
Team Udayavani, Jul 17, 2017, 3:30 AM IST
ಹೊಸದಿಲ್ಲಿ: ಪುಟ್ಟ, ಗುಂಡ, ಪಾಪು, ಚಿನ್ನು… ಹೀಗೆ ಮಕ್ಕಳನ್ನು ಒಂದಿಲ್ಲೊಂದು ಅಡ್ಡ ಹೆಸರಿಂದ ಕರೆಯುವುದು ನಮ್ಮಲ್ಲಿ ಮಾಮೂಲಿ. ಕೆಲವೊಮ್ಮೆ ಹೆತ್ತವರೇ ಪ್ರೀತಿಯಿಂದ ಇಂಥ ಹೆಸರಿಟ್ಟರೆ, ಹಲವು ಸಂದರ್ಭಗಳಲ್ಲಿ ಅಕ್ಕಪಕ್ಕದ ಮನೆಯವರೋ, ಸ್ನೇಹಿತರೋ ಆ ವ್ಯಕ್ತಿಯ ಗುಣ ಆಧರಿಸಿ ಅಡ್ಡ ಹೆಸರಿಡುವುದು ವಾಡಿಕೆ. ಆದರೆ ಇಂಥ ಅಡ್ಡ ಹೆಸರು ಅಥವಾ ನಿಕ್ ನೇಮ್‌ಗಳ ಹಿಂದೆ ಒಂದೊಂದು ಕಥೆಗಳಿರುತ್ತವೆ ಎಂಬುದನ್ನು ಮರೆಯುವಂತಿಲ್ಲ.
ಆತ 3 ಅಥವಾ 4ನೇ ಕ್ಲಾಸಿನ ಹುಡುಗ. ಪಶ್ಚಿಮ ಬಂಗಾಲದಲ್ಲಿ ಅದು ತುಂಬು ಮಳೆಗಾಲದ ಮುಂಜಾನೆ. ಆ ಹುಡುಗ ಪೇಪರೊಂದರಲ್ಲಿ ತನ್ನ ಬಟ್ಟೆ ಸುತ್ತಿಕೊಂಡು, ಅದನ್ನ ಬಗಲಲ್ಲಿ ಇರಿಸಿಕೊಂಡು, ಬರಿಗಾಲಲ್ಲಿ, ಹೊಲ ಗದ್ದೆಗಳ ಮೂಲಕ ಶಾಲೆಯತ್ತ ಹೊರಡುತ್ತಾನೆ. ಬಾಲಕ ಹೀಗೆ ಹೋಗುವಾಗ ಆತ ನಡೆಯುವ ರೀತಿ ಕಂಡು, ಆತನ ತಂದೆ ಮತ್ತು ಸೋದರಿ ಅವನನ್ನ ‘ಪೊಲ್ಟಾ’ ಎಂದು ಕರೆಯುತ್ತಾರೆ (ಆತ ನಡೆಯುವ ಶೈಲಿ ಪದಾತಿ ದಳದ ಸೈನಿಕರು ನಡೆದಂತೆ ಇದ್ದುದರಿಂದ ಹೀಗೆ ಕರೆಯುತ್ತಾರೆ. ಪ್ಲಾಟೂನ್ ಎಂಬುದಕ್ಕೆ ಬಂಗಾಲಿ ಭಾಷೆಯಲ್ಲಿ ಪೊಲ್ಟನ್ ಎನ್ನಲಾಗುತ್ತದೆ). ಆ ಬಾಲಕ ಮತ್ತಾರೂ ಅಲ್ಲ, ಭಾರತದ 13ನೇ ರಾಷ್ಟ್ರಪತಿ ಪ್ರಣವ್ ಮುಖರ್ಜಿ. ಈ ವಿಷಯವನ್ನ ಹೇಳಿದ್ದು, ಅವರ ಆಪ್ತ ಹಾಗೂ ಪತ್ರಕರ್ತ ಜಯಂತ್ ಘೋಷಾಲ್. ಪ್ರಣವ್ ಅವರು ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಘೋಷಾಲ್ ಅವರು ಇದನ್ನು ಸ್ಮರಿಸಿಕೊಂಡಿದ್ದಾರೆ.
ಬಂಗಾಲದಲ್ಲಂತೂ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ನಿಕ್ ನೇಮ್ ಇದ್ದೇ ಇರುತ್ತದೆ. ಅದರಂತೆ ರವೀಂದ್ರನಾಥ್ ಟ್ಯಾಗೋರ್ ಅವರನ್ನ ‘ರೊಬಿ’, ಸತ್ಯಜಿತ್ ರೇ ಅವರನ್ನ ‘ಮಾನಿಕ್ ದಾ’, ಬಂಗಾಲಿ ಸೂಪರ್‌ಸ್ಟಾರ್ ಪ್ರೊಸೆನ್‌ಜಿತ್ ಚಟರ್ಜಿ ಅವರನ್ನು ‘ಬುಂಬಾ’ ಎಂದು ಕರೆಯಲಾಗುತ್ತಿತ್ತು. ಅದೇ ರೀತಿ ಬಹುತೇಕ ಭಾರತೀಯರು ತಮ್ಮ ಅಸಲಿ ಹೆಸರಿಗಿಂತಲೂ ಹೆಚ್ಚಾಗಿ ನಿಕ್‌ನೇಮ್‌ನಿಂದ ಗುರುತಿಸಲ್ಪಡುತ್ತಾರೆ. ಆ ಕ್ಷಣಕ್ಕೆ ಹೊಳೆದ ಯಾವುದೋ ಪದ ಅಥವಾ ತಮಾಷೆ ಅನಿಸುವಂತಹ ಶಬ್ದವನ್ನ ಅಡ್ಡ ಹೆಸರಾಗಿ ಇಡುವುದು ವಾಡಿಕೆಯಾಗಿದ್ದು, ಖ್ಯಾತನಾಮರನ್ನೂ ಈ ಅಡ್ಡ ಹೆಸರು ಬಿಟ್ಟಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.