ಇಡೀ ಜಿಲ್ಲೆಯ ವಿದ್ಯುತ್ ಬಿಲ್ ಈತನೊಬ್ಬನಿಗೇ ಬಂದಿತ್ತು !
Team Udayavani, Jul 21, 2019, 10:08 AM IST
ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಚಾಮ್ರಿಯ ನಿವಾಸಿಯೊಬ್ಬನಿಗೆ ಬಂದ ವಿದ್ಯುತ್ ಬಿಲ್ ಎಷ್ಟೊಂದು ನೀವು ಕೇಳಿದರೆ ನಿಮಗೆ ಶಾಕ್ ಆಗಬಹುದು. ಇಡೀ ಜಿಲ್ಲೆಯ ವಿದ್ಯುತ್ ಬಿಲ್ ಒಬ್ಬನಿಗೇ ಬಂದಾಗ ಆತನಿಗೆ ನಿಜಕ್ಕೂ ಕರೆಂಟ್ ಶಾಕ್ ಹೊಡೆದ ಅನುಭವ. ಅಷ್ಟಕ್ಕೂ ಆತನಿಗೆ ಬಂದ ಬಿಲ್ ಎಷ್ಟು ಗೊತ್ತಾ ? ಬರೋಬ್ಬರಿ 1.28 ಕೋಟಿ.
ಹೌದು, ಚಾಮ್ರಿ ಗ್ರಾಮದ ನಿವಾಸಿಯಾದ ಶಮೀಮ್ ಎಂಬವರಿಗೆ ಇಷ್ಟು ಮೊತ್ತದ ವಿದ್ಯುತ್ ಬಿಲ್ ಬಂದಿರುವುದು. “ನಾವು ಬಡವರು. ನಮ್ಮ ಮನೆಯಲ್ಲಿ ಬಳಕೆ ಮಾಡುವುದು ಬಲ್ಬ್ ಮತ್ತು ಫ್ಯಾನ್ ಮಾತ್ರ. ಅಷ್ಟಕ್ಕೇ ಇಷ್ಟು ಬಿಲ್ ಹೇಗೆ ಬರುತ್ತದೆ ? ನಮಗೆ ಇಷ್ಟೊಂದು ಪ್ರಮಾಣದ ಬಿಲ್ ಕಟ್ಟಲು ಸಾಧ್ಯವಿಲ್ಲ” ಎಂದು ಶಮೀಮ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಪರ್ಯಾಸವೆಂದರೆ, ಶಮೀಮ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಆತನ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದೆ. “ನಮ್ಮ ಅಳಲನ್ನು ಯಾರೂ ಕೇಳುತ್ತಿಲ್ಲ. ನಾವು ಹಣ ಪಾವತಿ ಮಾಡದೇ ನಮಗೆ ಮತ್ತೆ ವಿದ್ಯುತ್ ಸಂಪರ್ಕ ಮಾಡುವುದಿಲ್ಲ” ಎನ್ನುತ್ತಿದ್ದಾರೆ ಶಮೀಮ್.
“ಇದು ತಾಂತ್ರಿಕ ದೋಷದಿಂದಾದ ಪ್ರಮಾದ. ಅವರು ನಮಗೆ ಬಿಲ್ ಪ್ರತಿಯನ್ನು ತಂದು ಕೊಟ್ಟರೆ ನಾವು ಸರಿಪಡಿಸುತ್ತೇವೆ “ಎಂದು ಇಲೆಕ್ಟ್ರಿಕಲ್ ಇಂಜಿನಿಯರ್ ರಾಮ್ ಶರಣ್, ಶಮೀಮ್ ಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
Hapur: A resident of Chamri has received an electricity bill of Rs 1,28,45,95,444. He says “No one listens to our pleas, how will we submit that amount? When we went to complain about it,we were told that they won’t resume our electricity connection unless we pay the bill.”(20.7) pic.twitter.com/2kOQT8ho36
— ANI UP (@ANINewsUP) July 20, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.