ದಿಲ್ಲಿಯಲ್ಲಿ ಗಾರುಡಿ ಗೊಂಬೆ ಮೋಡಿ!
Team Udayavani, Jul 12, 2017, 3:20 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ದಕ್ಷಿಣ ದಿಕ್ಕಿಗಿರುವ ಐತಿಹಾಸಿಕ ಹೌಝ್ ಖಾಸ್ನ ಆರ್ಟ್ ಕನ್ಸಲ್ಟ್ ಗ್ಯಾಲರಿಯಲ್ಲಿ ‘ಗೊಂಬೆ’ಗಳ ಮೇಳ. ಅವು ಅಂತಿಂಥ ಗೊಂಬೆಗಳಲ್ಲ ಕನ್ನಡಿಗರ ಕಲಾ ಶ್ರೀಮಂತಿಕೆ ಯನ್ನು ಜಾಗತಿಕ ಮಟ್ಟದಲ್ಲಿ ಸಾರಿದ ಕನ್ನಡ ಮಣ್ಣಿನ ‘ಗಾರುಡಿ ಗೊಂಬೆ’ಗಳು.
ಗ್ಯಾಲರಿ ತುಂಬೆಲ್ಲ ಗೊಂಬೆಗಳೇ ಗೊಂಬೆಗಳು. ಸೃಷ್ಟಿಕರ್ತ ಬ್ರಹ್ಮ, ಈಶ್ವರ-ಮಹೇಶ್ವರ, ಅಂಬೆ-ಭವಾನಿ, ಕುದುರೆ, ಆನೆ -ಅಂಬಾರಿ ನೋಡುತ್ತಾ ಹೋದಷ್ಟೂ ಬೆಳೆಯುವ ವಿಧಗಳು ಕಲಾಪ್ರೇಮಿಗಳ ಮನತಣಿಸಿದವು. ಮ್ಯಾನೇಜ್ಮೆಂಟ್ ಆಫ್ ಆರ್ಟ್ ಟ್ರಶ್ಯೂರ್ ಆಫ್ ಇಂಡಿಯಾ (ಮಾಟಿ) ಆಯೋಜಿಸಿದ್ದ ಪ್ರದರ್ಶನಕ್ಕೆ ಕನ್ನಡದ ‘ಗೊಂಬೆ’ ಹೆಸರನ್ನೇ ಇರಿಸಿದ್ದು ವಿಶೇಷವಾದರೆ, ಈ ಗೊಂಬೆಗಳನ್ನು ತಯಾರಿಸಿದ್ದು ಕೊಪ್ಪಳ ಜಿಲ್ಲೆಯ ಕನ್ನಾಲ್ ಗ್ರಾಮದ ಕಲಾವಿದರು. ಮರದಿಂದ ಮಾಡುವ ಈ ಗೊಂಬೆಗಳು, ದೆಹಲಿ ನೋಡುಗರಿಗೆ ಹೊಸ ಆಕರ್ಷಣೆಯಾಗಿದ್ದವು. ಗಾರುಡಿ ಗೊಂಬೆಗಳ ಕುರಿತು ಮಾತನಾಡಿದ ಪ್ರೊ| ಆನಿಂದ್ಯ ಕಂತಿ ವಿಸ್ವಾಸ್ ಅವರು, ‘ಈ ಗೊಂಬೆ ಕಲೆ ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಒಡಿಶಾದ ‘ಪಟ್ಟಚಿತ್ರ’ ಮತ್ತು ಗುಜರಾತ್ನ ‘ವರ್ಲಿ’ ಕಲೆಯೊಂದಿಗೆ ಹಲವು ಸಾಮ್ಯತೆಗಳನ್ನು ಹಂಚಿಕೊಂಡಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.