Arogya Maitri Cube: ಪೋರ್ಟೆಬಲ್ ಆಸ್ಪತ್ರೆ ಪಾರಾಡ್ರಾಪ್ ಯಶಸ್ವಿ: ಸೇನೆ, ಐಎಎಫ್ ಸಾಧನೆ
Team Udayavani, Aug 18, 2024, 7:37 AM IST
ಹೊಸದಿಲ್ಲಿ: ದೂರದ ಪ್ರದೇಶಗಳಲ್ಲಿ ತುರ್ತು ಆರೋಗ್ಯ ಸೇವೆ ಒದಗಿಸಲು ನೆರವಾಗುವ ಜಗತ್ತಿನ ಮೊದಲ “ಪೋರ್ಟೆಬಲ್ ಹಾಸ್ಪಿಟಲ್ ಕ್ಯೂಬ್’ ಅನ್ನು 15,000 ಅಡಿಯಿಂದ ಪ್ಯಾರಾಡ್ರಾಪ್ (ಪ್ಯಾರಾಚೂಟ್ ಸಹಾಯ ದಿಂದ ಕೆಳಗಿಳಿಸುವುದು) ಪ್ರಯತ್ನವು ಯಶಸ್ವಿಯಾಗಿದೆ ಎಂದು ರಕ್ಷಣ ಇಲಾಖೆ ಹೇಳಿದೆ.
ಇದು ವಾಯುಪಡೆ ಮತ್ತು ಭೂ ಪಡೆಯ ಜಂಟಿ ಪ್ರಯತ್ನವಾಗಿದೆ. ಈ ವಿಶಿಷ್ಟ ಆಸ್ಪತ್ರೆಗ “ಆರೋಗ್ಯ ಮೈತ್ರಿ ಹೆಲ್ತ್ ಕ್ಯೂಬ್’ ಎಂದು ಹೆಸರಿಸಲಾಗಿದೆ. ಸೌಲಭ್ಯ ಇಲ್ಲದ ದೂರದ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆ ನೀಡುವುದಕ್ಕೆ ಕೇಂದ್ರ ಸರಕಾರದ ಭೀಷ್ಮ ಯೋಜನೆ ಯಡಿ ಈ ಕ್ಯೂಬ್‌ಗಳನ್ನು ತಯಾರಿಸಲಾಗಿದೆ. ಸಿ-130ಜೆ ವಿಮಾನವನ್ನು ಬಳಸಿಕೊಂಡು ನಿರ್ದಿಷ್ಟ ಜಾಗದಲ್ಲಿ ಕ್ಯೂಬ್ ಕೆಳಗಿಳಿಸಲಾಗಿದೆ.
ತುರ್ತು ಆರೋಗ್ಯ ಸೇವೆಯ ಕ್ಯೂಬ್‌ನಲ್ಲಿ ಏನಿದೆ?
ಈ ಕ್ಯೂಬ್ ಹಲವಾರು ನವೀನ ಸಾಧನಗಳನ್ನು ಹೊಂದಿದೆ. ಅವು ವಿಪತ್ತು ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆ ಒದಗಿಸಲು ನೆರವು ನೀಡುತ್ತವೆ. ಪರಿಣಾಮಕಾರಿ ಸಮನ್ವಯ, ನೈಜ-ಸಮ ಯದ ಮೇಲ್ವಿಚಾರಣೆ ಮತ್ತು ಕ್ಷೇತ್ರದಲ್ಲಿ ವೈದ್ಯಕೀಯ ಸೇವೆಗಳ ಸಮರ್ಥ ನಿರ್ವಹಣೆಗೆ ಅನುಕೂಲವಾಗುವಂತೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ವಿಶ್ಲೇಷಣೆ ವ್ಯವಸ್ಥೆಯನ್ನು ಕ್ಯೂಬ್‌ಗಳು ಹೊಂದಿರುತ್ತವೆ. ಅದರಲ್ಲಿ ಸರಳವಾಗಿ ಸಾಗಿಸಬಲ್ಲ ಒಟ್ಟು 72 ವಸ್ತುಗಳಿರುತ್ತವೆ ಮತ್ತು ಕ್ಯೂಬ್ ನೆಲಕ್ಕೆ ಬಿದ್ದ 12 ನಿಮಿಷದಲ್ಲಿ ಇಡೀ ತುರ್ತು ಆಸ್ಪತ್ರೆಯನ್ನು ಸಜ್ಜುಗೊಳಿಸಬಹುದು. ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ವೇಳೆಯೂ ಅವುಗಳನ್ನು ಬಳಕೆಗೆ ನಿಯೋಜಿಸಲಾಗಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.