ಪೋಸ್ಟ್ ಆಫೀಸ್ ಖಾತೆ ನಿರ್ವಹಣೆ ಇನ್ನು ಮೊಬೈಲ್ನಲ್ಲೇ ಮಾಡಿ!
Team Udayavani, Oct 15, 2019, 6:30 PM IST
ಹೊಸದಿಲ್ಲಿ; ಪೋಸ್ಟ್ ಆಫೀಸ್ ಖಾತೆಗಳನ್ನು ಪೋಸ್ಟ್ ಆಫೀಸ್ಗೆ ಹೋಗಿಯೇ ನಿರ್ವಹಣೆ ಮಾಡಬೇಕೆನ್ನುವ ಕಿರಿಕಿರಿ ಇನ್ನು ಬಂದ್!
ಇದೀಗ ಪೋಸ್ಟ್ ಆಫೀಸ್ ಖಾತೆಗಳನ್ನು ಮೊಬೈಲ್ನಲ್ಲೇ ನಿರ್ವಹಣೆ ಮಾಡಬಹುದು. ಪಿಪಿಎಫ್ ಖಾತೆಗೆ ಹಣವನ್ನೂ ಕಟ್ಟಬಹುದು. ಇಂತಹ ಸೌಕರ್ಯ ಪೋಸ್ಟ್ ಆಫೀಸ್ ಆ್ಯಪ್ ಮೂಲಕ ಜನರಿಗೆ ಲಭ್ಯವಾಗಿದೆ.
ಇಂಡಿಯಾ ಪೋಸ್ಟ್ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಇಂಟರ್ನೆಟ್ ಬ್ಯಾಂಕಿಂಗ್ ಮಾದರಿ ಸೌಕರ್ಯಗಳನ್ನು ಬಳಸಿಕೊಳ್ಳಬಹುದು.
ಈ ಬ್ಯಾಂಕ್ ಆ್ಯಪ್ ಆ್ಯಂಡ್ರಾಯಿಡ್ ಆವೃತ್ತಿಗೆ ಲಭ್ಯವಿದ್ದು, ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಬೇಕಾದವರು ನಿರ್ದಿಷ್ಟ ಪೋಸ್ಟ್ ಆಫೀಸ್ಗೆ ತೆರಳಿ ಫಾರಂ ಅನ್ನು ಭರ್ತಿ ಮಾಡಿದರೆ, ಮೊಬೈಲ್ ಬ್ಯಾಂಕಿಂಗ್ಗೆ ಅವಕಾಶ ಕಲ್ಪಿಸಲಾಗುತ್ತದೆ.
ಆ್ಯಪ್ನಲ್ಲಿ ಸೌಕರ್ಯಗಳು ಏನೇನಿವೆ?
– ಉಳಿತಾಯ ಖಾತೆಯ ಕಿರು ಸ್ಟೇಟ್ಮೆಂಟ್, ಪಿಪಿಎಫ್ ಖಾತೆ ನಿರ್ವಹಣೆ
– ಖಾತೆ ಬ್ಯಾಲೆನ್ಸ್ ಪರಿಶೀಲನೆ, ಆರ್ಡಿ, ಪಿಪಿಎಫ್ ಪರಿಶೀಲನೆ
– ಇತರ ಪೋಸ್ಟಲ್ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ
– ನಿಮ್ಮ ಖಾತೆಯಿಂದ ಪಿಪಿಎಫ್ಗೆ ಹಣ ವರ್ಗಾವಣೆ (ಲಿಂಕ್ ಆಗಿರಬೇಕು)
– ಆರ್ಡಿ ಖಾತೆ ತೆರೆಯಲು ಮನವಿ ಸಲ್ಲಿಕೆ. ಚೆಕ್ ನೀಡಿಕೆ ಸ್ಥಗಿತಕ್ಕೂ ಮನವಿ ಮಾಡಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Memorial Space: ಡಾ.ಸಿಂಗ್ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್ಐಟಿ ತನಿಖೆಗೆ ಹೈಕೋರ್ಟ್ ಆದೇಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.