ಈಗ ಮೊಬೈಲ್‌ನಲ್ಲೇ ಅಂಚೆ ಖಾತೆ ನಿರ್ವಹಣೆ
"ಐಪಿಪಿಬಿ ಮೊಬೈಲ್ ಅಪ್ಲಿಕೇಶನ್'
Team Udayavani, Nov 29, 2019, 5:16 AM IST
ಅಂಚೆ ಕಚೇರಿ ಕೆಲಸಕ್ಕೆ ಉದ್ದದ ಸರತಿ ಸಾಲಿನಲ್ಲಿ ನಿಲ್ಲಬೇಕು ಎನ್ನುವ ಕಿರಿಕಿರಿಗಳಿಗೆ ಇನ್ನು ಮುಕ್ತಿ. ಮೊಬೈಲ್ ಮೂಲಕವೇ ಖಾತೆ ನಿರ್ವಹಿಸುವ ಹೊಸ ಆ್ಯಪ್ ಅನ್ನು ಭಾರತೀಯ ಅಂಚೆ ಬಿಡುಗಡೆ ಮಾಡಿದ್ದು, ಹಲವು ಸೌಲಭ್ಯಗಳನ್ನು ಒದಗಿಸಿದೆ. ಹಾಗಿದ್ದರೆ ಏನಿದು ಆ್ಯಪ್? ಅದರ ನಿರ್ವಹಣೆ ಹೇಗೆ? ಇಲ್ಲಿದೆ ವಿವರ.
ದೇಶದ ಕೋಟ್ಯಂತರ ಜನರಿಗೆ ಆರ್ಥಿಕ ಸೇವೆಯ ಉದ್ದೇಶದಿಂದ “ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್'(ಐಪಿಪಿಬಿ) ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. ಇದೀಗ ಇದೇ ಐಪಿಪಿಬಿ ಯೋಜನೆ ಸಾಮಾನ್ಯ ವ್ಯಕ್ತಿಗೂ ಕೂಡ ಆರ್ಥಿಕ ಸೇವೆಯ ಸೌಲಭ್ಯಗಳು ದೊರೆಯಬೇಕೆಂಬ ಉದ್ದೇಶದಿಂದ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಿದ್ದು ಇದರ ಖಾತೆಗಳನ್ನು ನಿರ್ವಹಿಸಬಹುದಾಗಿದೆ.
ಖಾತೆಯ ಮಾಹಿತಿ
ಮೊಬೈಲ್ ಅಪ್ಲಿಕೇಶನ್ ಮೂಲಕ ಖಾತೆಯ ಉಳಿತಾಯ ಮೊತ್ತ ಸೇರಿದಂತೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವ ಅವಕಾಶವಿದೆ. ಯಾವುದೇ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಬಹುದಾಗಿದೆ. ಜತೆಗೆ ವಿವಿಧ ಬಿಲ್‌ಗಳನ್ನೂ ಪಾವತಿಸಬಹುದಾಗಿದೆ.
ಚೆಕ್‌ಬುಕ್‌ಗೆ ಅರ್ಜಿ
ಇದರಲ್ಲಿ ಚೆಕ್ ಪುಸ್ತಕಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಚೆಕ್ ಮೂಲಕ ಮಾಡುವ ಶುಲ್ಕ ಪಾವತಿ ಕ್ರಿಯೆಯನ್ನೂ ನಿಯಂತ್ರಿಸಬಹುದಾಗಿದೆ.
ಖಾತೆ ತೆರೆಯುವುದು ಹೇಗೆ?
ಕೋರ್ ಬ್ಯಾಕಿಂಗ್ ವ್ಯವಸ್ಥೆ ಇರುವ ಪೋಸ್ಟಲ್ ಬ್ಯಾಂಕ್ ಶಾಖೆಯ ಖಾತೆದಾರರಿಗೆ ಮಾತ್ರ ಈ ಆ್ಯಪ್ ಪ್ರಯೋಜನಕಾರಿ. ಮೊಬೈಲ್ ಆ್ಯಪ್‌ಗೆ ಸಂಬಂಧಪಟ್ಟ ಕೆವೈಸಿಯನ್ನು ಕೂಡ ಮುಂಚಿತವಾಗಿ ಪೂರ್ಣಗೊಳಿಸಬೇಕಿದೆ. ಆ್ಯಪ್ ಬಳಕೆಗೂ ಪೋಸ್ಟಲ್ ಬ್ಯಾಂಕ್‌ನಿಂದ ಅನುಮತಿ ಸಿಗಬೇಕಿದೆ. ಐಪಿಪಿಬಿ ಮೊಬೈಲ್ ಆ್ಯಪ್ ಆ್ಯಂಡ್ರಾಯ್ಡ್, ಐಒಎಸ್ ಆವೃತ್ತಿಗಳಲ್ಲಿ ಲಭ್ಯ.
ನಿರ್ವಹಣೆ ಹೇಗೆ?
ಖಾತೆ ಹೊಂದಿರುವ ಗ್ರಾಹಕರು ಮೊಬೈಲ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಗಳ ಕುರಿತ ಅರ್ಜಿ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಖಾತೆಗೆ ಲಾಗ್ ಇನ್ ಆಗಬೇಕು. ಲಾಗಿನ್ ವಿವರಗಳು ಮತ್ತು “ಒಟಿಪಿ’ಯನ್ನು ನಮೂದು ಮಾಡಿ ಅಪ್ಲಿಕೇಶನ್ ಅನ್ನು ಬಳಸಬಹುದು. ಖಾತೆ ದೃಢೀಕರಣದ ಅನಂತರ ಖಾತೆದಾರ ನಾಲ್ಕು ಅಂಕಿಯ ಎಂಪಿಐಎನ್ ಬಳಸಿ ಖಾತೆಯನ್ನು ನಿರ್ವಹಿಸಬಹುದಾಗಿದೆ.
9 ಖಾತೆಗಳ ನಿರ್ವಹಣೆ
ಅಂಚೆ ಇಲಾಖೆ ಅಡಿಯಲ್ಲಿ 9 ಸಣ್ಣ ಉಳಿತಾಯ ಹೂಡಿಕೆ ಯೋಜನೆಗಳು ಲಭ್ಯವಿವೆ.ಅಂಚೆ ಕಚೇರಿ ಸಮಯ ಠೇವಣಿ ಖಾತೆ (ಟಿಡಿ), ಕಚೇರಿ ಮಾಸಿಕ ಆದಾಯ ಯೋಜನೆ ಖಾತೆ (ಎಂಐಎಸ್), ಅಂಚೆ ಕಚೇರಿಯ ಉಳಿತಾಯ ಖಾತೆ ಮತ್ತು 5 ವರ್ಷದ ಪೋಸ್ಟ್ ಆಫೀಸ್ ಠೇವಣಿ ಖಾತೆಗಳನ್ನು (ಆರ್‌ಡಿ) ಈ ಆ್ಯಪ್ ಮೂಲಕ ನಿರ್ವಹಿಸುವ ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.