ಅಂಚೆ ಉಳಿತಾಯ ಖಾತೆ ಕನಿಷ್ಠ ಮೊತ್ತ 500 ರೂ.
Team Udayavani, Feb 16, 2020, 6:15 AM IST
ಪಾಲಕ್ಕಾಡ್: ಅಂಚೆ ಇಲಾಖೆಯು ತನ್ನ ಉಳಿತಾಯ ಖಾತೆಯ ಕನಿಷ್ಠ ಮೊತ್ತದ ಮಿತಿಯನ್ನು 50 ರೂ.ನಿಂದ 500 ರೂ.ಗೆ ಪರಿಷ್ಕರಿಸಲು ನಿರ್ಧರಿಸಿದೆ. ಅಲ್ಲದೆ, ಒಂದು ವೇಳೆ ಖಾತೆದಾರನು ಕನಿಷ್ಠ ಮೊತ್ತವನ್ನು ಉಳಿಸಿಕೊಳ್ಳಲು ವಿಫಲವಾದರೆ ಹಣಕಾಸಿನ ವರ್ಷದ ಕೊನೆಯ ಕೆಲಸದ ದಿನದಂದು ದಂಡವಾಗಿ 100 ರೂ. ಅನ್ನು ಕಡಿತ ಮಾಡಿಕೊಳ್ಳಲಾಗುತ್ತದೆ.
ಖಾತೆ ರದ್ದು: ಉಳಿತಾಯ ಖಾತೆಯಲ್ಲಿ 3 ವರ್ಷಗಳವರೆಗೆ ಶೂನ್ಯ ಮೊತ್ತ ಹೊಂದಿದ್ದರೆ ಅದು ಸ್ವಯಂಚಾಲಿತವಾಗಿ ರದ್ದಾಗಲಿದೆ. ಖಾತೆದಾರರು ಹಣಕಾಸಿನ ವರ್ಷದಲ್ಲಿ ಕನಿಷ್ಠ ಒಂದು ವಹಿವಾಟು ನಡೆಸಬೇಕು.
ವರ್ಷಕ್ಕೆ 10 ಚೆಕ್ ಲೀಫ್: ಇದರ ಜತೆಗೆ ವರ್ಷಕ್ಕೆ ಉಚಿತ ಚೆಕ್ ಲೀಫ್ಗಳ ಸಂಖ್ಯೆ 10ಕ್ಕೆ ಮಿತಿಗೊಳಿಸಿದೆ. ಒಂದು ವೇಳೆ ಹೆಚ್ಚುವರಿ ಚೆಕ್ಲೀಪ್ ಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ. 2018ರಲ್ಲಿ ಅಂಚೆ ಇಲಾಖೆ ಉಳಿತಾಯ ಯೋಜನೆ ಗಳಿಗಾಗಿ ಯಾವುದೇ ಸೇವಾ ಶುಲ್ಕ ಸಂಗ್ರಹಿಸದಿರಲು ನಿರ್ಧರಿಸಿತ್ತು.
ದೇಶದ ಎಲ್ಲಾ 9 ಕೋಟಿ ಅಂಚೆ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿನ ಒಟ್ಟು ಠೇವಣಿ 500 ಕೋಟಿ ರೂ. ಇದ್ದು, 1.5 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಅಡಿ ಯಲ್ಲಿನ ಖಾತೆಗಳಿಗೆ ಇಲಾಖೆ ಯಾವುದೇ ಶುಲ್ಕವನ್ನು ಹೆಚ್ಚಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.