ವಂದೇ ಮಾತರಂ ಹಾಡಲ್ಲ: ಪ್ರಕಾಶ್ ಅಂಬೇಡ್ಕರ್
Team Udayavani, Oct 24, 2018, 3:54 PM IST
ಮುಂಬಯಿ: “ವಂದೇ ಮಾತರಂ’ ಹಾಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಅಖೀಲ ಭಾರತ ಮಜಲಿಸ್ -ಇ- ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ)ನ ಬೆಂಬಲಕ್ಕೆ ನಿಲ್ಲುವ ಮೂಲಕ ಭಾರಿಪ್ ಬಹುಜನ್ ಮಹಾಸಂಘ (ಬಿಬಿಎಂ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಪರ್ಭಾನಿಯ ರ್ಯಾಲಿಯಲ್ಲಿ ಮಂಗಳವಾರ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, ವಂದೇ ಮಾತರಂ ಅನ್ನು ಹಾಡ ಲೇಬೇಕೆಂದು ಯಾರೂ ಒತ್ತಾಯಿಸುವಂತಿಲ್ಲ. ನಾನೂ ಅದನ್ನು ಹಾಡುವುದಿಲ್ಲ ಎಂದಿದ್ದಾರೆ. “ಜನ ಗಣ ಮನ ಮಾತ್ರವೇ ದೇಶದ ರಾಷ್ಟ್ರಗೀತೆಯೇ ಹೊರತು ವಂದೇ ಮಾತರಂ ಅಲ್ಲ. ಅಧಿಕೃತ ರಾಷ್ಟ್ರಗೀತೆ ಇರುವಾಗ ಮತ್ತೂಂದರ ಅಗತ್ಯವಿಲ್ಲ.
ವಂದೇ ಮಾತರಂ ಅನ್ನು ಕಡ್ಡಾಯವಾಗಿ ಹಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿರುವುದೇಕೆ? ಬಿಜೆಪಿಗೆ ಈಗಿರುವ ರಾಷ್ಟ್ರಗೀತೆ ಬಗ್ಗೆ ನಂಬಿಕೆಯಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಯಾರು ಜನ ಗಣ ಮನ ಹಾಡುತ್ತಾರೋ ಅವರು ಭಾರತೀಯರು, ಯಾರು ಹಾಡುವುದಿಲ್ಲವೋ ಅವರು ಭಾರತೀಯರಲ್ಲ ಎಂದು ವರ್ಗೀಕರಣ ಮಾಡಲು ಬಿಜೆಪಿಯವರು ಯಾರು ಎಂದೂ ಕೇಳಿದ್ದಾರೆ ಪ್ರಕಾಶ್ ಅಂಬೇಡ್ಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.