ಪ್ರೆಸ್ ನಿಂದ ನೋಟು ನೇರ ಕಾಳಧನಿಕರಿಗೆ ರವಾನೆ?
Team Udayavani, Jan 12, 2017, 3:50 AM IST
ಹೊಸದಿಲ್ಲಿ: 500, 1,000 ರೂ. ಮುಖ ಬೆಲೆಯ ನೋಟುಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿದ ಬಳಿಕ ಜನಸಾಮಾನ್ಯರು ಹೊಸ ನೋಟು ಪಡೆಯಲು ಪರದಾಡುತ್ತಿದ್ದಾಗಲೇ, ನೋಟು ಮುದ್ರಣಾಲಯ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಕೆಲವು ಪ್ರಭಾವಿ ವ್ಯಕ್ತಿಗಳ ಮನೆ ಬಾಗಿಲಿಗೇ ಹೊಚ್ಚ ಹೊಸ ನೋಟುಗಳು ತಲುಪಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
2000 ರೂ. ಮುಖಬೆಲೆಯ ನೋಟುಗಳ ಹೋಮ್ ಡೆಲಿವರಿ’ ಕುರಿತು ಶಂಕೆ ವ್ಯಕ್ತವಾಗಲು ಕಾರಣ, ಡಿ.15ರಂದು ದಿಲ್ಲಿಯ ಮಾರುಕಟ್ಟೆ ಪ್ರದೇಶವೊಂದರಲ್ಲಿ 2000 ರೂ. ಮುಖಬೆಲೆಯ 20 ಲಕ್ಷ ರೂ. ನೋಟುಗಳ ಕಂತೆ ಸಮೇತ ಸಿಕ್ಕಿಬಿದ್ದ ಕೃಷ್ಣಕುಮಾರ್ ಎಂಬ ವ್ಯಕ್ತಿ. ಆತನ ಬಳಿ ಇದ್ದ ನೋಟುಗಳ ಕಂತೆ ಮೇಲೆ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಲದ ನೋಟು ಮುದ್ರಣಾಲಯಗಳ ಸೀಲ್ ಇತ್ತು. ಸರಕಾರಿ ನೋಟು ಮುದ್ರಣಾಲಯಗಳ ಠಸ್ಸೆ ಹೊಂದಿದ್ದ ನೋಟಿನ ಕಂತೆಗಳು ನೇರವಾಗಿ ಸಾರ್ವಜನಿಕರಿಗೆ ತಲುಪಿದ ಪ್ರಕರಣ ಇದೇ ಮೊದಲು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ “ಹೊಸ ನೋಟಿನ ಕಂತೆ ಸೋರಿಕೆ ಯಾಗಿದ್ದು ಎಲ್ಲಿ? ನೋಟು ಮುದ್ರಣಾಲಯಗಳಲ್ಲೋ ಅಥವಾ ರಿಸರ್ವ್ ಬ್ಯಾಂಕ್ ಚೆಸ್ಟ್‌ನಲ್ಲೋ? ನೋಟುಗಳ ಹೋಮ್ ಡೆಲಿವರಿ’ ನಡೆಯುತ್ತಿತ್ತೆ? ಎಂಬುದರ ಪತ್ತೆಗೆ ತೆರಿಗೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕೃಷ್ಣಕುಮಾರ್ ಕೈಗೆ ನೋಟುಗಳ ಕಂತೆ ಬರುವಷ್ಟರಲ್ಲಿ ಅದು ಹಲವು ಕೈಗಳಿಂದ ಬದಲಾಗಿತ್ತು. ಹೀಗಾಗಿ ಆತನಿಂದ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ.
ಸಾಮಾನ್ಯವಾಗಿ ನೋಟು ಮುದ್ರಣಾಲಯಗಳು ವಿವಿಧ ಮುಖಬೆಲೆಯ 1000 ನೋಟುಗಳ ಕಂತೆಯನ್ನು ರಿಸರ್ವ್ ಬ್ಯಾಂಕ್ ಗೋದಾಮಿಗೆ ಕಳುಹಿಸುತ್ತವೆ. ಅಲ್ಲಿ ಆ ಕಂತೆಯನ್ನು ಒಡೆದು, 100 ನೋಟುಗಳ ಕಂತೆ ಮಾಡಿ, ಬ್ಯಾಂಕ್‌ಗಳ ಹೆಸರು ಬರೆದು ರವಾನಿಸಲಾಗುತ್ತದೆ.
ಗಡುವು ಮುಗಿದರೂ ತಿರುಪತಿ ಹುಂಡಿಗೆ 1.7 ಕೋಟಿ ರೂ. ಹಳೆ ನೋಟು
ತಿರುಪತಿ: ಹಳೆಯ 500 ಹಾಗೂ 1000 ರೂ. ನೋಟುಗಳ ಬದಲಾವಣೆಗೆ ಕಳೆದ ಡಿ.31ಕ್ಕೆ ಗಡುವು ಮುಕ್ತಾಯವಾಗಿದ್ದರೂ ವಿಶ್ವಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇಗುಲದ ಹುಂಡಿಗೆ ನಿಷೇಧಿತ ನೋಟುಗಳನ್ನು ಹಾಕಲಾಗುತ್ತಿದೆ. ಕಳೆದ 11 ದಿನಗಳ ಅವಧಿಯಲ್ಲಿ 1.7 ಕೋಟಿ ರೂ. ಮೌಲ್ಯದ ರದ್ದಾದ ನೋಟುಗಳನ್ನು ಹುಂಡಿಗೆ ಹಾಕಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಜ.1ರಂದು ಕೂಡ 31 ಲಕ್ಷ ರೂ. ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ದೊರೆತಿದ್ದವು. ಹುಂಡಿಗೆ ಪ್ರತಿದಿನ ಸರಾಸರಿ 2.6 ಲಕ್ಷ ರೂ. ನಗದು ಸೇರಿದಂತೆ ಚಿನ್ನಾಭರಣಗಳನ್ನು ಹಾಕಲಾಗುತ್ತದೆ. 2016ರಲ್ಲಿ ಒಂದು ಸಾವಿರ ಕೋಟಿ ರೂ.ಗೂ ಅಧಿಕ ನಗದು ಸಂಗ್ರಹವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.