ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ
Team Udayavani, Oct 26, 2024, 2:35 PM IST
ನವದೆಹಲಿ: ಪ್ರೀತಿಯ ನಾಟಕವಾಡಿ ಪ್ರೇಯಸಿಯನ್ನು ಗರ್ಭಿಣಿಯಾಗುವಂತೆ ಮಾಡಿ ಇದೀಗ ಪ್ರೇಯಸಿ ಮದುವೆಯಾಗುವಂತೆ ಒತ್ತಾಯ ಮಾಡಿದ್ದಕ್ಕೆ ಪ್ರೇಯಸಿಯನ್ನೇ ಹತ್ಯೆಗೈದು ನಿರ್ಜನ ಪ್ರದೇಶದಲ್ಲಿ ಹೂತು ಹಾಕಿರುವ ಭಯಾನಕ ಘಟನೆಯೊಂದು ಹರ್ಯಾಣದ ರೋಹ್ಟಕರ್ ನಲ್ಲಿ ನಡೆದಿರುವುದು ಶುಕ್ರವಾರ(ಅ.25) ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು ಪಶ್ಚಿಮ ದೆಹಲಿಯ ನಾಂಗ್ಲೋಯ್ ನಿವಾಸಿಯಾಗಿರುವ ಸೋನಿ (20 ವರ್ಷ) ಎನ್ನಲಾಗಿದೆ, ಸಂಜು ಅಲಿಯಾಸ್ ಸಲೀಂ ಸೋನಿಯನ್ನು ಹತ್ಯೆಗೈದ ಆರೋಪಿ.
ಏನಿದು ಪ್ರಕರಣ:
ಸೋನಿ ಇನ್ಸ್ಟಾ ಗ್ರಾಮ್ ನಲ್ಲಿ ರೀಲ್ಸ್ ಗಳನ್ನು ಮಾಡಿ ಅಪ್ ಲೋಡ್ ಮಾಡುತ್ತಿದ್ದಳು ಅಲ್ಲದೆ ಇನ್ಸ್ಟಾಗ್ರಾಮ್ ನಲ್ಲಿ ೬ ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳಿದ್ದರು ಎನ್ನಲಾಗಿದೆ ಇದನ್ನು ಗಮನಿಸಿದ ಸಲೀಂ ಹೇಗಾದರೂ ಸೋನಿಯ ಸ್ನೇಹ ಬೆಳೆಸಿಕೊಳ್ಳಬೇಕು ಎಂದುಕೊಂಡಿದ್ದ ಅದರಂತೆ ಆಕೆಗೆ ನಿರಂತರ ಸಂದೇಶಗಳನ್ನು ಕಳುಹಿಸುತ್ತಿದ್ದ ಇದರಿಂದ ಪರಿಚಯವಾದ ಸಲೀಂ ತನ್ನ ಹೆಸರನ್ನು ಸೋನಿ ಬಳಿ ಸಂಜು ಎಂದು ಹೇಳಿಕೊಂಡಿದ್ದ, ಹೀಗೆ ದಿನಕಳೆದಂತೆ ಪರಿಚಯ ಪ್ರೀತಿಗೆ ತಿರುಗಿ ಇದೀಗ ಆಕೆ ಏಳು ತಿಂಗಳ ಗರ್ಭಿಣಿ ಈ ವಿಚಾರ ಮನೆಯಲ್ಲಿ ಗೊತ್ತಾದರೆ ಎಂದು ಹೆದರಿದ ಸೋನಿ ಸಂಜು ಬಳಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಅದಕ್ಕೆ ಆತ ಮೊದಲು ಮಗುವನ್ನು ತೆಗಿಸು ಆಮೇಲೆ ಮದುವೆ ನೋಡೋಣ ಎಂದು ಹೇಳಿದ್ದನಂತೆ ಇದರಿಂದ ಗಾಬರಿಗೊಂಡ ಸೋನಿ ಮನೆಯವರಲ್ಲಿ ಸಂಜು ನನ್ನು ಪ್ರೀತಿಸುತ್ತಿದ್ದು ಆತನನ್ನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ ಇದಕ್ಕೆ ಪೋಷಕರು ಒಪ್ಪಲಿಲ್ಲ.
ಇತ್ತ ಪೋಷಕರ ಮಾತಿನಿಂದ ಭಯಗೊಂಡ ಸೋನಿ ಮತ್ತೆ ಸಂಜು ಬಳಿ ಹೋಗಿ ಮದುವೆಯ ಪ್ರಸ್ತಾಪ ಮಾಡಿದ್ದಾಳೆ ಆಗಲೂ ಸಂಜು(ಸಲೀಂ) ಗರ್ಭಪಾತ ಮಾಡಿಸುವಂತೆ ಹೇಳಿಕೊಂಡಿದ್ದಾನೆ. ಆದರೆ ಸೋನಿ ಇದಕ್ಕೆ ಒಪ್ಪದೇ ಇದ್ದಾಗ ಮನೆಗೆ ಬಂದ ಸೋನಿ ಮನೆಯಲ್ಲಿ ಒಂದಿಷ್ಟು ಬಟ್ಟೆಗಳನ್ನು ಹಿಡಿದುಕೊಂಡು ಸಂಜು(ಸಲೀಂ) ಮನೆಗೆ ಬಂದಿದ್ದಾಳೆ ಆಗಲೂ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಾಳೆ. ಅದಕ್ಕೆ ಸಂಜು ತನ್ನ ಇಬ್ಬರು ಸ್ನೇಹಿತರನ್ನು ಕರೆಸಿ ಹರ್ಯಾಣಕ್ಕೆ ತೆರಳುವ ನಿರ್ಧಾರಕ್ಕೆ ಬಂದಿದ್ದಾನೆ ಅದರಂತೆ ಕಾರಿನಲ್ಲಿ ಹರ್ಯಾಣಕ್ಕೆ ತೆರಳುವ ದಾರಿ ಮಧ್ಯೆ ಸಂಜು (ಸಲೀಂ) ಸೋನಿಯ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಬಳಿಕ ಹರಿಯಾಣದ ರೋಹ್ಟಕ್ ನ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾನೆ.
ಇತ್ತ ಸೋನಿ ಪೋಷಕರು ಮಗಳು ಮನೆಗೆ ಬಂದಿಲ್ಲ ಎಂದು ಸಂಜು (ಸಲೀಂ)ಗೆ ಕರೆ ಮಾಡಿದಾಗ ಆತ ಸಿಟ್ಟಿನಲ್ಲಿ ಸೋನಿ ಪೋಷಕರಿಗೆ ಗದರಿದ್ದಾನೆ, ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ಸೋನಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ. ಇತ್ತ ತನಿಖೆ ಕೈಗೆತ್ತಿಕೊಂಡ ಪೊಲೀಸರು ಪೋಷಕರ ಬಳಿ ಯಾರ ಮೇಲಾದರೂ ಅನುಮಾನ ಇದೆಯೇ ಎಂದು ಕೇಳಿದಾಗ ಸಂಜು ವಿಚಾರ ಹೇಳಿದ್ದಾರೆ ಅದರಂತೆ ಸಂಜು ನನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದ ವೇಳೆ ಪೊಲೀಸರ ಬಳಿ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ಅಷ್ಟು ಮಾತ್ರವಲ್ಲದೆ ತನ್ನ ಹೆಸರು ಸಂಜು ಅಲ್ಲ ಬದಲಿಗೆ ಸಲೀಂ ಎಂದು ಹೇಳಿಕೊಂಡಿದ್ದಾನೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಸಂಜು ಅಲಿಯಾಸ್ ಸಲೀಂ ಮತ್ತು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದು ಮೂರನೇ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: Katapady:ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ
Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.