Panaji: ರಾಜ್ಯದ ವಿದ್ಯುತ್ ಗ್ರಾಹಕರಿಗಿನ್ನು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಸೌಲಭ್ಯ
Team Udayavani, Nov 7, 2023, 3:21 PM IST
ಪಣಜಿ: ಗೋವಾ ರಾಜ್ಯದ ವಿದ್ಯುತ್ ಗ್ರಾಹಕರಿಗೆ ಈಗ ರಾಜ್ಯ ಸರ್ಕಾರದ ವಿದ್ಯುತ್ ಇಲಾಖೆಯಿಂದ ಸ್ಮಾರ್ಟ್ ಮೀಟರ್ ಗಳನ್ನು ಒದಗಿಸಲಾಗುತ್ತಿದೆ. ಸ್ಮಾರ್ಟ್ ಮೀಟರ್ ಗಳ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ವಿದ್ಯುತ್ ಇಲಾಖೆಯಿಂದ ಸಲಹೆಗಾರರನ್ನು ನೇಮಿಸಲಾಗಿದೆ. ನಂತರ, ಈ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಲಾಗುವುದು.
ಇದಕ್ಕೆ ಸುಮಾರು 396 ಕೋಟಿ ವೆಚ್ಚವಾಗಲಿದೆ. ಇದೇ ವೇಳೆ, ರಾಜ್ಯದಲ್ಲಿ ಮೊದಲ ಬಾರಿಗೆ ಗೋವಾ ರಾಜಧಾನಿ ಪಣಜಿಯ ವಿದ್ಯುತ್ ಗ್ರಾಹಕರು ಈ ಸ್ಮಾರ್ಟ್ ಮೀಟರ್‍ಗಳನ್ನು ಪಡೆಯಲಿದ್ದಾರೆ ಎಂದು ವಿದ್ಯುತ್ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಮೀಟರ್ ಗಳ ಕಾರ್ಯನಿರ್ವಹಣೆಯಲ್ಲಿನ ತಾಂತ್ರಿಕ ತೊಂದರೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಈ ಮೀಟರ್ ಗಳನ್ನು ಸ್ಥಾಪಿಸುವ ಮೊದಲು ಪಣಜಿಯಲ್ಲಿ ಯೋಜನೆಯನ್ನು ಮೊದಲು ಕಾರ್ಯಗತಗೊಳಿಸಲಾಗುತ್ತದೆ. ಪಣಜಿ ಸ್ಮಾರ್ಟ್ ಸಿಟಿಯಲ್ಲಿನ ವಿದ್ಯುತ್ ಗ್ರಾಹಕರು ಸ್ಮಾರ್ಟ್ ಮೀಟರ್ ಗಳನ್ನು ಬಳಸುವ ರಾಜ್ಯದ ಮೊದಲ ಗ್ರಾಹಕರಾಗಲಿದ್ದಾರೆ.
ಡಿಸೈನ್, ಬಿಲ್ಡ್, ಫೈನಾನ್ಸ್, ಓನ್, ಆಪರೇಟ್ ಮತ್ತು ಟ್ರಾನ್ಸ್‍ಫರ್ (ಡಿಬಿಎಫ್‍ಒಒಟಿ) ಆಧಾರದ ಮೇಲೆ ಸ್ಮಾರ್ಟ್ ಪ್ರಿಪೇಯ್ಡ್ ಮೀಟರಿಂಗ್‍ಗಾಗಿ ಅಡ್ವಾನ್ಸ್‍ಡ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ (ಎಎಮ್‍ಐ) ಸೇವಾ ಪೂರೈಕೆದಾರರ ನೇಮಕಾತಿಗಾಗಿ ವಿದ್ಯುತ್ ಇಲಾಖೆ ಟೆಂಡರ್ ಅನ್ನು ಕರೆದಿದೆ.
ಪರಿಷ್ಕೃತ ವಿತರಣಾ ವಲಯ ಯೋಜನೆ ಅಡಿಯಲ್ಲಿ ಈ ಯೋಜನೆಗೆ ವಿದ್ಯುತ್ ಇಲಾಖೆಯು ಹಣವನ್ನು ನೀಡುತ್ತಿದೆ. ಇದರಲ್ಲಿ ವಿತರಣಾ ಮೂಲಸೌಕರ್ಯವನ್ನು ನವೀಕರಿಸಲು ಪ್ರಿಪೇಯ್ಡ್ ಸ್ಮಾರ್ಟ್ ಮೀಟರಿಂಗ್ ಮತ್ತು ಸಿಸ್ಟಮ್ ಮೀಟರಿಂಗ್‍ಗಾಗಿ ರಾಜ್ಯಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.
ವಿದ್ಯುಚ್ಛಕ್ತಿ ಇಲಾಖೆಯು ತನ್ನ ಎಲ್ಲಾ ಗ್ರಾಹಕರಿಗೆ ಇನ್ನೂ ಪೂರ್ಣ ಮೀಟರ್ ವ್ಯಾಪ್ತಿಯನ್ನು ಪಡೆಯಬೇಕಾಗಿದೆ. ಮೀಟರಿಂಗ್ ವ್ಯವಸ್ಥೆಯನ್ನು ಡಿಜಿಟಲ್ ಮೀಟರ್‍ಗೆ ಆಧುನೀಕರಿಸಲು ಇಲಾಖೆ ಮುಂದಾಗಿದೆ. ನವೆಂಬರ್ 2022 ರ ವೇಳೆಗೆ 53,680 ಎಲೆಕ್ಟ್ರಾನಿಕ್ ಮೀಟರ್‍ಗಳನ್ನು ಅಳವಡಿಸಲು ವಿದ್ಯುತ್ ಇಲಾಖೆ ನಿರ್ಧರಿಸಿತ್ತು. ಇದು 12444 ಮೆಕ್ಯಾನಿಕಲ್ ಮೀಟರ್, 41188 ದೋಷಯುಕ್ತ ಮೀಟರ್ ಮತ್ತು 48 ಹೊಸ ಮೀಟರ್ಗಳನ್ನು ಒಳಗೊಂಡಿದೆ. ಆದರೆ, ಇಲಾಖೆ 5830 ಮೀಟರ್ ಅಂದರೆ ಶೇ.10 ಮಾತ್ರ ಅಳವಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.