ಜಾಗತಿಕ ಸ್ಪರ್ಧೆಗೆ ಸ್ವಾಭಿಮಾನದ ಸಿದ್ಧತೆ


Team Udayavani, May 17, 2020, 6:41 AM IST

jagatika

ದೇಶದ ಅಭಿವೃದ್ಧಿಗೆ ಪೂರಕವಾಗಿ ವಿವಿಧ ವಲಯಗಳಲ್ಲಿನ ನೀತಿಗಳನ್ನು ಸರಳೀಕರಿಸುವ ಪ್ರಯತ್ನಕ್ಕೆ ಕೈಹಾಕಿರುವ ಕೇಂದ್ರ ಸರ್ಕಾರ, ಕಲ್ಲಿದ್ದಲು, ನಾಗರಿಕ ವಿಮಾನಯಾನ, ರಕ್ಷಣಾ ಉತ್ಪಾದನೆ, ಬಾಹ್ಯಾಕಾಶ, ಇಸ್ರೋ, ವಿಮಾನಗಳ  ನಿರ್ವಹಣೆ ಮತ್ತು ದುರಸ್ತಿ,ವಿದ್ಯುತ್‌ ಸೇರಿ ಎಂಟು ವಲಯಗಳಿಗೆ ಸಂಬಂಧಿಸಿದ ವಿಶೇಷ ಯೋಜನೆಗಳನ್ನು ಘೋಷಿಸಿದೆ. ಇಲ್ಲಿ ವಿದೇಶಿ ಹೂಡಿಕೆ ಮತ್ತು ಖಾಸಗೀಕರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ.

ನವದೆಹಲಿ: ಆತ್ಮ ನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತ ಎಂಬುದು ಕೇವಲ ಒಂದು ಘೋಷಣೆಯಲ್ಲ. ಬದಲಿಗೆ ಇದು ಭಾರತವನ್ನು ಒಂದು ಪ್ರಬಲ ದೇಶವನ್ನಾಗಿಸುವ, ತನ್ನ ಸ್ವಸಾಮರ್ಥ್ಯದ ಮೇಲೆ ನಿಲ್ಲುವಂತೆ ಮಾಡುವ  ಹಾಗೂ ಜಾಗತಿಕ ಮಟ್ಟದಲ್ಲಿ ಎದುರಾಗುವ ಸ್ಪರ್ಧೆಯನ್ನು ಎದುರಿಸಲು ಶಕ್ತಿ ತುಂಬುವ ನೀತಿಯಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ದೇಶದ ಆರ್ಥಿಕತೆ ಉತ್ತಮಪಡಿಸಡುವ ನಿಟ್ಟಿನಲ್ಲಿ ಕೇಂದ್ರ  ಘೋಷಿಸಿರುವ 20 ಲಕ್ಷ ಕೋಟಿ ರೂ. ಮೊತ್ತದ ಆರ್ಥಿಕ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಶನಿವಾರ ನಾಲ್ಕನೇ ಹಂತದ ಯೋಜನೆಗಳನ್ನು ಘೋಷಣೆ ಮಾಡಿದ ವಿತ್ತ ಸಚಿವೆ, ಸ್ವಾವಲಂಬನೆಯ ಸಾಧನ ಹಿಡಿದು ಹೊರಟಾಗ ಜಾಗತಿಕ  ಮಟ್ಟದಲ್ಲಿ ಸವಾಲು ಎದುರಿಸಬೇಕಾಗುತ್ತದೆ ಎಂಬ ವಾಸ್ತವದ ಮೇಲೆ ಬೆಳಕು ಚೆಲ್ಲಿದರು. ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಹಾಗೂ ಇತರೆ ಅಂಶಗಳಿಗೆ ಸಂಬಂಧಿಸಿದ  ನೀತಿಗಳನ್ನು ಸರಳೀಕರಿಸುವ ಅಗತ್ಯವಿರುತ್ತದೆ.

ಒಂದು ಕ್ಷೇತ್ರ ಯಾವ ರೀತಿ ತಮಗೆ ನೆರವಾಗಬಲ್ಲದು, ಆ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತಾವು ಭಾಗಿಯಾಗುವುದು ಹೇಗೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಸುವುದು ಮತ್ತು ವಿವಿಧ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ತರುವುದು ಸೇರಿ ಹಲವು ಕಾರಣಗಳಿಗಾಗಿ ನೀತಿಗಳ ಸರಳೀಕರಣ ಬಹುಮುಖ್ಯವಾಗಿದೆ. ಈ ಮೂಲಕ ಪ್ರತಿಯೊಂದು ವಲಯವೂ ದೇಶದ ಆರ್ಥಿಕ ಪ್ರಗತಿಗೆ ಅಗತ್ಯವಿರುವ ಉತ್ತೇಜನ ಮತ್ತು  ಉದ್ಯೋಗ ಸಷ್ಟಿಗೆ ಹೇಗೆ ಕೊಡುಗೆ ನೀಡಬಲ್ಲದು ಎಂಬುದಕ್ಕೆ ನಾವು ಮರು ವ್ಯಾಖ್ಯಾನ ನೀಡಬೇಕಿದೆ ಎಂದರು.

ರಚನಾತ್ಮಕ ಬದಲಾವಣೆ: ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ರಚನಾತ್ಮಕ ಬದಲಾವಣೆಗಳನ್ನು ತರುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಾವೆಷ್ಟು ಸಮರ್ಥರು ಎಂಬುದನ್ನು ಈ ಹಿಂದೆ ಸಾಬೀತು ಮಾಡಿದ್ದಾರೆ ಎಂದು  ಹೇಳಿದ ವಿತ್ತ ಸಚಿವೆ, ಜಿಎಸ್‌ಟಿ, ಆದಾಯ ತೆರಿಗೆ, ಇಂಧನ ಕ್ಷೇತ್ರದಲ್ಲಿನ ಸುಧಾರಣೆ, ಸಾರ್ವಜನಿಕ ವಲಯದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತಂದ ಬದಲಾವಣೆಗಳನ್ನು ಉಲ್ಲೇಖೀಸಿದರು. ಯಾವುದೇ ಕ್ಷೇತ್ರ ದೇಶದ ಆರ್ಥಿಕ ಅಭಿವೃದ್ಧಿಗೆ  ತನ್ನದೇ ಕೊಡುಗೆ ನೀಡಬೇಕಿದ್ದರೆ ಅಲ್ಲಿ ವ್ಯವಸ್ಥಿತವಾದ ಬದಲಾವಣೆಗಳನ್ನು ತರುವ ಅಗತ್ಯವಿರುತ್ತದೆ. ಇಂತಹ ಬದಲಾವಣೆಗಳಿಂದ ಆ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗುತ್ತದೆ. ಅಂತಹ ಹಲವು  ಬದಲಾವಣೆಗಳಿಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನುಡಿ ಬರೆದಿದ್ದು, 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನ ಭಾಗವಾಗಿ ಘೋಷಿಸಿರುವ ಹಲವು ವಲಯಗಳಿಗೆ ಸಂಬಂಧಿಸಿದ ಯೋಜನೆಗಳು ಇಂತಹ ವ್ಯವಸ್ಥಿತ  ಬದಲಾವಣೆಯ ಉದ್ದೇಶವನ್ನೇ ಹೊಂದಿವೆ ಎಂದು ಹೇಳಿದರು.

ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆ: ಕಲ್ಲಿದ್ದಲು ಗಣಿಗಳ ಲೆಕ್ಕದಲ್ಲಿ ನೋಡುವು ದಾದರೆ ಭಾರತ ಅತಿ ಹೆಚ್ಚು ಕಲ್ಲಿದ್ದಲು ಹೊಂದಿರುವ ಜಗತ್ತಿನ ಮೂರನೇ ಅತಿ ದೊಡ್ಡ ರಾಷ್ಟ್ರ ಎಂದೆನಿಸಿದೆ. ಆದರೂ ನಾವು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ವಿದ್ಯುತ್‌ ಉತ್ಪಾದನೆಗೆ ಕಚ್ಚಾ ವಸ್ತುಗಳ ಕೊರತೆ ಎದುರಿಸುತ್ತಿದ್ದೇವೆ. ಕಾರಣ ಅಗತ್ಯ ಪ್ರಮಾಣದ ಕಲ್ಲಿದ್ದಲನ್ನು ಗಣಿಯಿಂದ ಹೊರತೆಗೆಯಲು ನಾವು ವಿಫಲರಾಗಿದ್ದೇವೆ. ಹೀಗಾಗಿ ಕಲ್ಲಿದ್ದಲು ಗಣಿಗಾರಿಕೆ  ಕ್ಷೇತ್ರದಲ್ಲಿನ ಸರ್ಕಾರಿ ಏಕಸ್ವಾಮ್ಯ ಅಧಿ ಕಾರ ತೆಗೆದುಹಾಕಲು ನಿರ್ಧರಿಸಲಾ ಗಿದೆ. ಆದಾಯ ಹಂಚಿಕೆ ಆಧಾರದಲ್ಲಿ ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆ ನಡೆಸಿದರೆ ಹೆಚ್ಚಿನ ಪ್ರಮಾಣದ ಕಲ್ಲಿದ್ದಲು ಲಭ್ಯವಾಗಲಿದೆ. ಇದೇ ವೇಳೆ  ಲ್ಲಿದ್ದಲನ್ನು ಅನಿಲವನ್ನಾಗಿ ಪರಿವರ್ತಿ ಸಲು ಸಹಾಯಧನ ನೀಡಲು ನಿರ್ಧರಿಸಿದೆ. ಕಲ್ಲಿದ್ದಲನ್ನು ಸ್ಥಳಾಂತರಿಸಲು 50,000 ಕೋಟಿ ರೂ. ಮೀಸಲಿರಿಸಿದೆ. 2023-24ರ ವೇಳೆಗೆ 100 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದನೆ ಗುರಿ ಹೊಂದಲಾಗಿದೆ.

ರಕ್ಷಣೆಯಲ್ಲೂ ಮೇಕ್‌ ಇನ್‌ ಇಂಡಿಯಾಕ್ಕೆ ದೊಡ್ಡ ಪಾಲು: ಭಾರತ ಇದುವರೆಗೆ ತನ್ನ ಬಹುತೇಕ ರಕ್ಷಣಾ ಸಾಮಗ್ರಿಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಈ ವಿಭಾಗ  ದಲ್ಲಿ ನಮ್ಮ ದೇಶ ಸ್ವಾವಲಂಬನೆ ಸಾ—ಸಿಲ್ಲ. ಇದರಿಂದ ಲಕ್ಷಾಂತರ ಕೋಟಿ ರೂ.ಗಳು ವಿದೇಶಕ್ಕೆ ಹರಿದು ಹೋಗುತ್ತಿವೆ. ಆದ್ದರಿಂದ ಇಲ್ಲೂ ಸ್ವಾವಲಂಬನೆ (ಆತ್ಮ ನಿರ್ಭರ) ಸಾಧಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ರಕ್ಷಣಾ ಸಾಮಗ್ರಿ ಉತ್ಪಾದನೆ ಕ್ಷೇತ್ರದಲ್ಲಿ ಮೇಕ್‌ ಇನ್‌ ಇಂಡಿಯಾ ವನ್ನು ಪ್ರೋತ್ಸಾ ಹಿಸಲು, ವಿದೇಶಿ ನೇರ ಹೂಡಿಕೆ ಪ್ರಮಾಣ ವನ್ನು ಈ ಕ್ಷೇತ್ರದಲ್ಲಿ ಶೇ.74ಕ್ಕೆ ಏರಿಸಲಿದೆ. ಇದುವರೆಗೆ ಅದು ಶೇ.49ರಷ್ಟು ಮಾತ್ರ ವಿತ್ತು. ಇನ್ನು ಕೆಲವು ಶಸ್ತ್ರಾಸ್ತ್ರಗಳ ಆಮದನ್ನು ನಿಷೇಧಿಸಲಾ ಗುತ್ತದೆ.  ಹೀಗೆ ನಿಷೇಧಿತ ವಸ್ತುಗಳನ್ನು ಭಾರತದ ಲ್ಲಿಯೇ ಕೊಂಡುಕೊಳ್ಳ ಬೇಕಾಗು ತ್ತದೆ. ಕೆಲವು ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನು ವಿದೇಶದಿಂದ ಆಮದು ಮಾತ್ರ ಮಾಡಿಕೊಳ್ಳುತ್ತದೆ. ಅವನ್ನೆಲ್ಲ ದೇಶೀಯವಾಗಿಯೇ ಜೋಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಆಮದು ವೆಚ್ಚ ಬಹಳ ಕಡಿಮೆಯಾಗುತ್ತದೆ.

ಇನ್ನು ವಿಮಾನಯಾನ ಅಗ್ಗ: ಈ ನಷ್ಟದ ಸಮಯದಲ್ಲಿ ವಿಮಾನಯಾನವನ್ನು ಅಗ್ಗ ಮಾಡಲು ಕೇಂದ್ರಸರ್ಕಾರ ಹೊರಟಿದೆ. ಅದಕ್ಕಾಗಿ ಇದು ವರೆಗೆ ಇದು ವರೆಗೆ ಸೇನಾ ನಿಯಂತ್ರಣದಲ್ಲಿರುವ ವಾಯು ಪ್ರದೇಶವನ್ನೂ, ಮಾಮೂಲಿ  ಪ್ರಯಾಣಿಕ ವಿಮಾನಗಳಿಗೆ ಬಿಟ್ಟುಕೊಡಲು ಚಿಂತನೆ ನಡೆಸಿದೆ. ಇದರಿಂದ ಸಮಯ ಮತ್ತು ಇಂಧನ ಎರಡೂ ಉಳಿತಾಯವಾಗುತ್ತದೆ. ಆಗ ಸಹಜವಾಗಿ 1,000 ಕೋಟಿ ರೂ.ಗೂ ಅಧಿಕ ಹಣ ಉಳಿಯು ತ್ತದೆ. ಹೀಗೆ ಉಳಿಯುವ ಹಣವನ್ನು  ಪ್ರಯಾಣಿ ಕರಿಗೆ ವರ್ಗಾಯಿಸ ಬೇಕೆ ನ್ನು ವುದು ಕೇಂದ್ರದ ಉದ್ದೇಶ. ಸದ್ಯ ದೇಶದ ಪ್ರಯಾಣಿಕ ವಿಮಾನಗಳಿಗೆ ಲಭ್ಯವಿರುವ ವಾಯುಪ್ರದೇಶ ಕೇವಲ ಶೇ.60ರಷ್ಟು. ಉಳಿದ ಭಾಗವನ್ನು ರಕ್ಷಣಾ ದೃಷ್ಟಿಯಿಂದ ಸೇನೆ ಹಿಡಿತದಲ್ಲಿಟ್ಟುಕೊಂಡಿತ್ತು. ಅದು ಮುಕ್ತವಾದರೆ ಸುತ್ತಿ ಬಳಸಿ ಪ್ರಯಾಣಿಸುವ ತಾಪತ್ರಯ ತಪ್ಪುತ್ತದೆ. ಇಷ್ಟಲ್ಲದೇ ಆರು ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹರಾಜು ಹರಾಜು ಕರೆಯಲಾಗುತ್ತದೆ. ಎಎಐ (ಭಾರತ ವಿಮಾನ ನಿಲ್ದಾಣ  ಪ್ರಾಧಿಓಕಾರ) ಈ ಪ್ರಕ್ರಿಯೆ ನಡೆಸುತ್ತಿದೆ. ಇದರ ಮೂಲಕ 13,000 ಕೋಟಿ ರೂ. ಸಂಗ್ರಹ ನಿರೀಕ್ಷೆಯಿದೆ.

ಭಾರತದಲ್ಲೇ ವಿಮಾನ ನಿರ್ವಹಣೆ: ಕುಸಿದಿರುವ ಆರ್ಥಿಕತೆ ಮೇಲೆತ್ತಲು ಪ್ರಧಾನಿ ನರೇಂದ್ರ ಮೋದಿ ಆಶಯದಂತೆ “ಸ್ವಾವಲಂಬಿ ಭಾರತ’ದ ಒಂದು ಭಾಗವಾಗಿ ಭಾರತದಲ್ಲೇ ವಿಮಾನಗಳ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ. ವಿಮಾನ  ನಿರ್ವಹಣೆ ಜಾಗತಿಕ ವಲಯಕ್ಕಾಗಿ ಪ್ಯಾಕೇಜ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿರ್ವಹಣೆ, ದುರಸ್ತಿ, ಯಂತ್ರಗಳ ಬದಲಾವಣೆ ಹಾಗೂ ಪರೀಕ್ಷೆಗಾಗಿ (ಎಂಆರ್‌ಒ) ವಿದೇಶವನ್ನು ಅವಲಂಬಿಸಲಾಗಿತ್ತು. ಇದೀಗ ನಮ್ಮಲ್ಲಿನ ಮಾನವ ಸಂಪನ್ಮೂಲ ಹಾಗೂ ಸಾಮರ್ಥ್ಯವನ್ನು ಬಳಸಿಕೊಂಡು ಭಾರತದಲ್ಲೇ ನಿರ್ವಹಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮುಂದಿನ 3 ವರ್ಷಗಳಲ್ಲಿ 2 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದರಿಂದ ಎಲ್ಲಾ ವಿಮಾನಗಳ ನಿರ್ವಹಣೆ  ವೆಚ್ಚವು ಕಡಿಮೆಯಾಗಿದೆ. ವಿಮಾನ ಸಂಸ್ಥೆಗೆ ಆದಾಯ ವೃದ್ಧಿಯಾಗಲಿದೆ.

ಅಣುಶಕ್ತಿ: ಸೀಮಿತ ಹೂಡಿಕೆ: ಇದುವರೆಗೆ ಭಾರತದ ಅಣುಶಕ್ತಿ ವಲಯದಲ್ಲಿ ಸರ್ಕಾರದ್ದೇ ಏಕಸ್ವಾಮ್ಯವಾಗಿತ್ತು. ಈಗ ಮೋದಿ ಸರ್ಕಾರ ಅಲ್ಲಿ ಖಾಸಗಿಯವರಿಗೂ ಹೂಡಿಕೆ ಮಾಡಲು ಅವಕಾಶ ನೀಡುವುದಾಗಿ ಪ್ರಕಟಿಸಿದೆ. ಹಾಗಂತ  ಪೂರ್ಣಪ್ರಮಾಣ  ದಲ್ಲಿ ಖಾಸಗಿಯವರಿಗೆ ಇಲ್ಲಿ ಪ್ರವೇಶವಿಲ್ಲ. ಕೇವಲ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಕಡಿಮೆ ವೆಚ್ಚದಲ್ಲಿ ಔಷಧ ಕಂಡು ಹಿಡಿಯುವುದು, ಕೃಷಿಕರ ಆಹಾರೋತ್ಪನ್ನಗಳಿಗೆ ವಿಕಿರಣ ಮುಕ್ತ ಸಂಗ್ರಹಾಗಾರಗಳನ್ನು  ತಯಾರಿಸುವು ದಕ್ಕೆ ಮಾತ್ರ ಸೀಮಿತವಾಗಿದೆ. ಇಷ್ಟಲ್ಲದೇ ಅಣುಶಕ್ತಿ ವಲಯದಲ್ಲಿ ಸ್ಟಾರ್ಟಪ್‌ ಮನೋ  ಭಾವ ರೂಪಿಸುವುದೂ ಉದ್ದೇಶವಾಗಿದೆ. ಇದರಿಂದ ಸಂಶೋಧನಾ ಸೌಲಭ್ಯ ಹಾಗೂ ತಂತ್ರೋದ್ಯಮಿಗಳ ಮಧ್ಯೆ ಒಂದು ಬಾಂಧವ್ಯ ಏರ್ಪಡಲಿದೆ. ಹೊಸ ಹೊಸ ಸಂಶೋಧನೆಗಳಿಗೆ ನೆರವಾಗಲಿದೆ. ಸದ್ಯ ಕೊರೊನಾದಿಂದ ದೇಶ ಬಾಧಿತವಾಗಿರುವ ಈ ಸಂದರ್ಭವನ್ನು, ಇಂತಹ ಹೊಸ ಹೊಸ ಭಾಗೀದಾರಿಕೆಗಳಿಗೆ ಪೂರಕವಾಗಿ ಬಳಸುವುದು ಮೋದಿ  ಸರ್ಕಾರದ ಗುರಿ.

ಎಸ್ಕಾಮ್‌ಗಳು ಖಾಸಗೀಕರಣ: ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳ ಖಾಸಗೀಕರಣಕ್ಕೆ ನಿರ್ಧರಿಸಲಾಗಿದೆ. ಡಿಸ್ಕಾಂಗಳ ಅಸಮರ್ಥ ನಿರ್ವಹಣೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರಿಗೆ  ತೊಂದರೆಯಾದರೆ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ವಾದರೆ ಹಾಗೂ ಲೋಡ್‌ ಶೆಡ್ಡಿಂಗ್‌ ಮಾಡಿದರೆ ಕಂಪನಿಗಳಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್‌ ಪ್ರೋತ್ಸಾಹ ಧನವನ್ನು ನೇರ ನಗದು ವರ್ಗಾವಣೆ ಮೂಲಕ  ತಲುಪಿಸಲಾಗುತ್ತಿದೆ. ಇದಕ್ಕಾಗಿ ಸ್ಮಾರ್ಟ್‌ ಪ್ರೀಪೇಯ್ಡ ಮೀಟರ್‌ಗಳನ್ನು ಅಳವಡಿಸಿ  ಕೊಳ್ಳಲು ನಿರ್ಧರಿಸಲಾಗಿದೆ. ವಿದ್ಯುತ್‌ ಕಾರ್ಯಕ್ಷಮತೆ ವೃದ್ಧಿ ಹಾಗೂ ಹೂಡಿಕೆಗೆ ಆದ್ಯತೆ ನೀಡಲಾಗಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ  ಕೈಗೊಳ್ಳಲಾಗಿದೆ.

“ಬಾಹ್ಯಾಕಾಶ’ ಖಾಸಗಿಗೆ ಮುಕ್ತ: ಇನ್ನು ಮುಂದೆ ಬಾಹ್ಯಾಕಾಶ ಕ್ಷೇತ್ರದಲ್ಲೂ ನಾವು ಖಾಸಗಿ ಕಂಪನಿಗಳು ಹಾಗೂ ನವೋದ್ಯಮಗಳು ಮೈಲುಗಲ್ಲು ಸಾಧಿಸುವುದನ್ನು ಕಾಣಬಹುದು. ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಮುಕ್ತಗೊಳಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ ನ್‌ ಪ್ರಕಟಿಸಿದ್ದಾರೆ. ಅದರಂತೆ, ಉಪ  ಗ್ರಹ ಗಳ ಅಭಿವೃದ್ಧಿ, ಉಡಾವಣೆ, ಬಾಹ್ಯ ಕಾಶ ಸಂಶೋಧನೆ, ಗಗನಯಾತ್ರೆ ಹಾಗೂ  ಇತರೆ ಬಾಹ್ಯಾಕಾಶ ಸಂಬಂಧಿ ಸೇವೆಗಳನ್ನು ನೀಡಲು ಖಾಸಗಿ ಕಂಪನಿಗಳು, ಸ್ಟಾರ್ಟ ಪ್‌ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇತ್ತೀಚೆಗೆ ಸಾಕಷ್ಟು ಖಾಸಗಿ ಕಂಪನಿಗಳು ಹೊಸ ಬಾಹ್ಯಾಕಾಶ ತಂತ್ರಜ್ಞಾನಗಳೊಂದಿಗೆ ಮುಂದೆ ಬರುತ್ತಿದ್ದು, ಅವುಗಳಿಗೂ ಅವಕಾಶ ನೀಡುವ ಮೂಲಕ ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಇನ್ನಷ್ಟು ಶಕ್ತಿಶಾಲಿಯಾಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇಸ್ರೋ ಸೌಲಭ್ಯ ಬಳಸಲು ಅನುಮತಿ: ಬಾಹ್ಯಾಕಾಶ ಕ್ಷೇತ್ರವನ್ನು ಪ್ರವೇಶಿಸುವಂಥ ಖಾಸಗಿ ಕಂಪನಿಗಳಿಗೆ, ತಮ್ಮ ಉಪಗ್ರಹಗಳು ಅಥವಾ ಇನ್ನಿತರೆ ಪ್ರಾಯೋಗಿಕ ಪರೀಕ್ಷೆಗಳಿಗಾಗಿ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಹಾಗೂ ಸರ್ಕಾರದ ಆಸ್ತಿಪಾಸ್ತಿಗಳನ್ನು ಬಳಸಿಕೊಳ್ಳಲು ಮುಕ್ತ ಅವಕಾಶವನ್ನೂ ನೀಡಲಾಗಿದೆ. ಆ ಮೂಲಕ ಕಂಪನಿಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ನೆರವಾಗಲಿದೆ ಎಂದೂ ಸಚಿವೆ ನಿರ್ಮಲಾ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ತಂತ್ರಜ್ಞಾನ ಸಂಬಂಧಿ ಉದ್ಯಮಿಗಳಿಗೆ ರಿಮೋಟ…-ಸೆನ್ಸಿಂಗ್‌ ಡೇಟಾಗೆ ಸಂಬಂಧಿಸಿದಂತೆ ಉದಾರವಾದ ಭೌಗೋಳಿಕ ದತ್ತಾಂಶ ನೀತಿಯನ್ನು ಜಾರಿ ಮಾಡಲಾಗುವುದು ಎಂದೂ ಅವರು ಭರವಸೆ  ನೀಡಿದ್ದಾರೆ. ಇದೇ ವೇಳೆ, ಇಸ್ರೋ ಆಸ್ತಿಪಾಸ್ತಿ ಬಳಕೆಗೆ ಖಾಸಗಿಗೆ ಅನುಮತಿ ನೀಡಿರುವ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿರುವ ಬಾಹ್ಯಾಕಾಶ ಸಂಸ್ಥೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಇಸ್ರೋ ಪಾಲಿಸುತ್ತದೆ ಹಾಗೂ  ದೇಶದಲ್ಲಿ ಬಾಹ್ಯಾಕಾಶ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಖಾಸಗಿಯವರಿಗೂ ಅವಕಾಶ ಕಲ್ಪಿಸುತ್ತದೆ’ ಎಂದು ಟ್ವೀಟ್‌ ಮಾಡಿದೆ.

ಟಾಪ್ ನ್ಯೂಸ್

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Karnataka: ವಿದ್ಯುತ್‌ ದರದಂತೆ ವರ್ಷವೂ ಬಸ್‌ ಯಾನ ದರ ಹೆಚ್ಚಳ?

CKM-darga

Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

1-kumb

Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ

mob

ಆಸೀಸ್‌ ರೀತಿ ಸಾಮಾಜಿಕ ಜಾಲತಾಣ ಬಳಕೆ ಬ್ಯಾನ್‌ ಮಾಡಿಲ್ಲ: ಐಟಿ ಕಾರ್ಯದರ್ಶಿ

1-aala

ISRO ಯಶಸ್ಸು ;ಬಾಹ್ಯಾಕಾಶದಲ್ಲಿ ಮೊದಲ ಎಲೆ ಬಿಟ್ಟ ಅಲಸಂದೆ ಕಾಳು

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ

Karnataka: ವಿದ್ಯುತ್‌ ದರದಂತೆ ವರ್ಷವೂ ಬಸ್‌ ಯಾನ ದರ ಹೆಚ್ಚಳ?

CKM-darga

Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.