ರಾಜಸ್ತಾನ್; ಇಲ್ಲಿ ರಾಷ್ಟ್ರಪತಿ ಮೇಕೆ ಮೇಯಿಸ್ತಾರೆ !
Team Udayavani, Apr 17, 2017, 9:43 AM IST
ಬುಂದಿ (ರಾಜಸ್ಥಾನ): ಪ್ರಧಾನ ಮಂತ್ರಿ ದಿನಸಿ ತರಲು ಪೇಟೆಗೆ ಹೋಗಿದ್ದಾರೆ, ರಾಷ್ಟ್ರಪತಿ ಮೇಕೆಗಳನ್ನು ಮೇಯಿಸಿಕೊಂಡು ಬರಲು ತೆರಳಿದ್ದಾರೆ’ ಎಂದು ಕೇಳಿದಾಗ ಅಚ್ಚರಿಯಾಗಬಹುದು! ಇನ್ನು ಅತಿಯಾದ ಭೇದಿಯಿಂದ ಬಳಲುತ್ತಿರುವ ಸ್ಯಾಮ್‌ಸಂಗ್, ಜಿಯೋನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ… ಎಂದಾಗ ಇವರಿಗೇನಾದರೂ ಹುಚ್ಚು ಹಿಡಿದಿದೆಯಾ ಅಂತಾ ನಿಮಗನ್ನಿಸಬಹುದು.
ಆದರೆ ರಾಜಸ್ಥಾನದ ಬುಂದಿ ಜಿಲ್ಲೆಯ ರಾಮನಗರ ಗ್ರಾಮಕ್ಕೆ ಹೋದರೆ ಅಲ್ಲಿನ ಜನರ ಹೆಸರುಗಳನ್ನು ಕೇಳಿ ಆಶ್ಚರ್ಯವಾಗುವುದು ಖಚಿತವೇ. ದೇಶದ ಉನ್ನತ ಆಡಳಿತ ಹುದ್ದೆಗಳು, ಉನ್ನತ ಕಚೇರಿಗಳು, ಮೊಬೈಲ್ ಫೋನ್ ಬ್ರಾಂಡ್‌ಗಳು, ಬಿಡಿಭಾಗಗಳ ಹೆಸರು ಈ ಗ್ರಾಮಕ್ಕೆ ಹೊಸತೇನಲ್ಲ. ಈ ಗ್ರಾಮದಲ್ಲಿ ರಾಷ್ಟ್ರ ಪತಿ, ಪ್ರಧಾನಮಂತ್ರಿ, ಸ್ಯಾಮ್‌ಸಂಗ್, ಜಿಯೋನಿ ಎಂಬ ಹೆಸರುಗಳನ್ನು ಹೊರತುಪಡಿಸಿ, ಸಿಮ್ ಕಾರ್ಡ್, ಚಿಪ್, ಆ್ಯಂಡ್ರಾಯ್ಡ, ಮಿಸ್ ಕಾಲ್, ರಾಜ್ಯಪಾಲ್ ಮತ್ತು ಹೈಕೋರ್ಟ್ ಎಂಬ ಹೆಸರಿನ ಮಂದಿಯೂ ಇದ್ದಾರೆ.
ಜಿಲ್ಲಾ ಕೇಂದ್ರ ಬುಂದಿಯಿಂದ 10 ಕಿ.ಮೀ. ದೂರದಲ್ಲಿರುವ ರಾಮನಗರ್ 500 ಜನರನ್ನು ಹೊಂದಿರುವ ಪುಟ್ಟ ಗ್ರಾಮ. ಇಲ್ಲಿನ ಬಹುಪಾಲು ಮಂದಿ ಅನಕ್ಷರಸ್ಥರಾಗಿದ್ದರೂ ಅವರ ಹೆಸರುಗಳು ಮಾತ್ರ ಹೈಫೈ! ಜಿಲ್ಲಾಧಿಕಾರಿಯೊಬ್ಬರು ಗ್ರಾಮಕ್ಕೆ ಭೇಟಿ ನೀಡಿದಾಗ ಅವರ ಕಾರ್ಯವೈಖರಿ ಕಂಡು ಬೆರಗಾಗಿದ್ದ ಮಹಿಳೆಯೊಬ್ಬರು ತನ್ನ ಮೊಮ್ಮಗನಿಗೆ “ಕಲೆಕ್ಟರ್’ ಎಂದು ಹೆಸರಿಟ್ಟಿದ್ದರು. ಹುಟ್ಟಿದಾಗಿನಿಂದ ಒಂದು ದಿನವೂ ಶಾಲೆ ಮುಖ ನೋಡದ ಕಲೆಕ್ಟರ್‌ಗೆ ಈಗ 50 ವರ್ಷ.
ಇನ್ನೂ ವಿಚಿತ್ರವೆಂದರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕೋರ್ಟ್ ಮೆಟ್ಟಿಲೇರಿ, ಜೈಲು ವಾಸ ಅನುಭವಿಸಿ ಬಂದವರು, ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಐಜಿ, ಎಸ್‌ಪಿ, ಹವಾಲ್ದಾರ್, ಮ್ಯಾಜಿಸ್ಟ್ರೇಟ್ ಎಂದೆಲ್ಲ ಹೆಸರಿಟ್ಟಿದ್ದಾರೆ. ಇಂದಿರಾ ಗಾಂಧಿ ಅವರ ಪರಮ ಭಕ್ತನಾಗಿರುವ ಕಾಂಗ್ರೆಸ್ ಎಂಬಾತ ತನ್ನ ಮಕ್ಕಳಿಗೆ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಎಂದು ನಾಮಕರಣ ಮಾಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
SC: ಬಿಯಾಂತ್ ಹಂತಕ ಬಲ್ವಂತ್ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ
MUST WATCH
ಹೊಸ ಸೇರ್ಪಡೆ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.